ದೇಶದ ಋಣ ತೀರಿಸಲು ಎನ್.ಎಸ್.ಎಸ್. ಪ್ರೇರಕ ಶಕ್ತಿ : ಲಟ್ಟ್ಟಿ
NSS is the driving force to pay off the country's debt: Latti
ಲೋಕದರ್ಶನ ವರದಿ
ಗೋಕಾಕ 10 : ಭೂಮಿಗೆ ಬಂದ ಪ್ರತಿಯೊಬ್ಬ ಮನುಷ್ಯ ಈ ಮೂರು ಋಣಗಳನ್ನು ತಿರಿಸಬೇಕಾಗುತ್ತದೆ. ಒಂದನೆಯದಾಗಿ ಮಾತಾ-ಪಿತೃ ಋಣ, ಎರಡನೆಯದಾಗಿ ಗುರುವಿನ ಋಣ ಹಾಗೂ ಮೂರನೆಯದಾಗಿ ದೇಶದ ಋಣ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಈ ಮೂರು ಋಣಗಳನ್ನು ತೀರಿಸಿ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವೆಂದು ಪ್ರೌಢ ಶಾಲಾ ನಿವೃತ್ತ ಶಿಕ್ಷಕ ಪಿ.ಟಿ. ಲಟ್ಟಿ ಅವರು ನುಡಿದರು. ಅವರು ಗೋಕಾಕದ ಜೆ. ಎಸ್. ಎಸ್. ಪದವಿ ಮಹಾವಿದ್ಯಾಲಯ ದತ್ತು ಗ್ರಾಮ ಬೆಣಚಿನಮರಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಎಂ. ತುರಡಗಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಎನ್.ಎಸ್.ಎಸ್. ಕಾರ್ಯ ಚಟುವಟಿಕೆಗಳ ಪ್ರಾಮುಖ್ಯತೆಯ ಕುರಿತು ತಿಳಿಸಿದರು. ಗ್ರಾಮದ ಹಿರಿಯರಾದ ಬಾಳೇಶ ಗಿಡ್ನವರ, ಮಂಜುನಾಥ ಗಿಡ್ನವರ, ಮಲ್ಲಪ್ಪಾ ಅಳಗುಂಡಿ ಬಸವರಾಜ ಮ್ಯಾಕಲಮರಡಿ ಹಾಗೂ ಮಹಾವಿದ್ಯಾಲಯದ ಡಾ. ಕೆ. ಆಯ್. ಇಂಡಿಕಾರ, ಡಾ. ವಿಜಯಕುಮಾರ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಮ್.ವ್ಹಿ. ಗೊರಗುದ್ದಿ ಸ್ವಾಗತಿಸಿದರು. ಇನ್ನೋರ್ವ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಸಿ.ಎ. ಮಸರಗುಪ್ಪಿ ವಂದಿಸಿದರು. ಕು. ಲಕ್ಷ್ಮೀ ಬಾಗಾಡಿ ಕಾರ್ಯಕ್ರಮ ನಿರೂಪಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 