ಸಚಿವ ತಿಮ್ಮಪೂರ ವಿರುದ್ಧ ಭಾಜಪ ಮುಖಂಡರ ಸುಳ್ಳು ಆರೋಪಗಳಿಗೆ ಮುಸ್ಲಿಂ ಸಮುದಾಯದ ಖಂಡನೆ
Muslim community condemns BJP leaders' false allegations against Minister Thimmapura
ಮಹಾಲಿಂಗಪುರ 11: ದೀನ, ದಲಿತರ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಚಿಂತಕರಾಗಿರುವ, ಲವ ಲೇಶವೂ ಭ್ರಷ್ಟಾಚಾರ ಇಲ್ಲದ ರಾಜಕೀಯ ರಂಗದ ಶುದ್ಧ ಹಸ್ತ ಉಸ್ತುವಾರಿ ಮತ್ತು ಅಬಕಾರಿ ಸಚಿವ ಆರ್. ಬಿ. ತಿಮ್ಮಪೂರ ಅವರ ವಿರುದ್ಧ ಭಾಜಪದ ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರ ತೇಜೋವಧೆ ಮಾಡುತ್ತಿರುವ ಕ್ರಮವನ್ನು ಮಹಾಲಿಂಗಪುರ ಪಟ್ಟಣದ ಅಂಜುಮನ ಸಂಸ್ಥೆ ಮತ್ತು ಮುಸ್ಲಿಂ ಸಮಾಜದ ಸರ್ವ ಜನತೆ ವತಿಯಿಂದ ಉಗ್ರವಾಗಿ ಖಂಡಿಸುತ್ತೇವೆ ಎಂದು ಪುರಸಭೆ ಸದಸ್ಯ ಹಾಗೂ ಸಮಾಜದ ಹಿರಿಯ ಮುಖಂಡ ಮುಸ್ತಾಕ ಚಿಕ್ಕೋಡಿ ಹೇಳಿದರು.
ಬುಧವಾರ ಮುಂಜಾನೆ ಅಂಜುಮನ್- ಎ- ಇಸ್ಲಾಂ ಕಮಿಟಿ ಕಚೇರಿ ಮುಂಭಾಗದಲ್ಲಿ ಸೇರಿದ ಸರ್ವ ಸದಸ್ಯರು ಮತ್ತು ಊರ ಪ್ರಮುಖರ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಸಿ.ಎಂ.ಸಿದ್ದರಾಮಯ್ಯ ಸರ್ಕಾರ ಸರ್ವೇ ಜನಃ ಸುಖಿನೋಭವಂತು ತತ್ವದ ಅಡಿ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಿದೆ,ಇದನ್ನು ಸಹಿಸದ ವಿರೋಧ ಪಕ್ಷ ಭಾಜಪ ಮುಖಂಡರು ಶಾಸಕರು ಮತ್ತು ಸಚಿವರ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿದ್ದು, ಸಚಿವರು ಮತ್ತು ಕಾಂಗ್ರೆಸ್ ಪಕ್ಷ ಎಂದೂ ಮನಿಯುವುದಿಲ್ಲ ಎಂದರು.
ಇನ್ನೋರ್ವ ಅಂಜುಮನ್ ಕಾರ್ಯದರ್ಶಿ ಶಂಶುದ್ದೀನ್ ತೇರದಾಳ ಮಾತನಾಡಿ,2.5 ಸಾವಿರ ಕೋಟಿ ಹಗರಣದ ಕುರಿತು ಭಾಜಪ ಮುಖಂಡರ ಬಳಿ ಸೂಕ್ತ ದಾಖಲೆಗಳಿದ್ದರೆ ಬಿಡುಗಡೆಗೊಳಿಸಲು ಸಚಿವರು ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ.ಆರೋಪ ಮಾಡುವ ಇವರು ಇಲ್ಲಿಯವರೆಗೆ ಪುಷ್ಟಿ ನೀಡುವಂತಹ ಯಾವುದೇ ದಾಖಲೆಗಳನ್ನು ಬಿಡುಗಡೆಗೊಳಿಸಿಲ್ಲ, ಇದರಿಂದ ತಿಳಿಯುವುದು ಏನೆಂದರೆ ದಲಿತ ನಾಯಕ ಮತ್ತು ಸಚಿವರನ್ನು ಸುಳ್ಳು ಆರೋಪಗಳಿಂದ ಇಕ್ಕಟ್ಟಿಗೆ ಶಿಲುಕಿಸಿ ಅವರಿಂದ ರಾಜೀನಾಮೆ ಪಡೆಯಬೇಕೆಂಬ ದೊಡ್ಡ ಹುನ್ನಾರ ವಿರೋಧ ಪಕ್ಷದಿಂದ ನಡೆದಿದೆಯೇ ಎಂಬ ಸಂದೇಹ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ ಎಂದರು.
ಖಂಡನಾ ಸಭೆಯಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಉಪಾಧ್ಯಕ್ಷ ಫಾರೂಖ ಪಕಾಲಿ ಸದಸ್ಯರಾದ ನೂರ ಪೆಂಡಾರಿ, ನಜೀರ್ ಝಾರೆ, ಮೀರಾ ತಟಗಾರ, ಪೈಗಂಬರ್ ಪೆಂಡಾರಿ, ಬಾಬು ಸನದಿ, ಬಾಷಾ ಬಿಸ್ತಿ, ಮತ್ತು ಹಿರಿಯರಾದ ಸಯ್ಯದ್ ಯಾದವಾಡ, ನಜೀರ್ ಅತ್ತಾರ, ಶಿಕಂದರ ಮೋಪಗಾರ,ದಾದಾ ಕರೋಶಿ, ರಸೂಲ್ ಸಾಂಗ್ಲಿಕರ,ಮೇಹಬೂಬ ಜೀರಗಾಳ, ದಾವಲಸಾಬ ನಗಾರ್ಚಿ ಮುಂತಾದವರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 