ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ: ಡಾ. ಭಾಗಾಯಿ
Mother's breast milk is like nectar: Dr. Bhagai
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ: ಡಾ. ಭಾಗಾಯಿ
ಮಾಂಜರಿ 08: ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾಗಿದೆ ಎಂದು ತಾಲೂಕ ವೈದ್ಯಕೀಯ ಅಧಿಕಾರಿ ಡಾ. ಸುಕುಮಾರ್ ಭಾಗಾಯಿ ಹೇಳಿದರು. ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಚಿಕ್ಕೋಡಿಯ ಇನ್ಸಿಟ್ಯೂಟ್ ಆಪ್ ನಸಿಂರ್ಗ ಮಹಾವಿದ್ಯಾಲಯ ಜಿಲ್ಲಾ ಪಂಚಾಯತ್ ಬೆಳಗಾವಿ ತಾಲೂಕ ಪಂಚಾಯತ್ ಚಿಕ್ಕೋಡಿ ಹಾಗೂ ಆರೋಗ್ಯ ಇಲಾಖೆ ಬೆಳಗಾವಿ ಚಿಕ್ಕೋಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಅಂಕಲಿ ಇವರ ಸಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಸ್ತನಪಾನ ದಿನಾಚರಣೆ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಅಂಕಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ವಿನಯ್ ಪೂಜಾರಿ ವಹಿಸಿದ್ದರು. ಅತಿಥಿಯಾಗಿ ಚಿಕ್ಕೋಡಿಯ ಕೆಎಲ್‌ಇ ಸಂಸ್ಥೆಯ ನಸಿಂರ್ಗ್ ಮಹಾವಿದ್ಯಾಲಯದ ಪ್ರಾಚಾರ್ಯ ಎಂ ಬಿ ಸುನಿಲ್, ಡಾ. ಮಹೇಶ್ ಕುಂಬಾರ್, ಡಾ ಶಂಕರ್ ಪಾಟೀಲ್, ರಾಜೇಶ್ ನಾಯಕ್, ಸಿಡಿಪಿಓ ರಾಜಶ್ರೀ ಕಮತೆ ಹಾಜರಿದ್ದರು. ಡಾ ಸುರೇಶ್ ಭಾಗಾಯಿ ಮಾತನಾಡಿ ಬಾಣಂತಿಯರು ಮಗು ಜನನವಾದ ನಂತರ ತಾಯಿಯು ಎದೆ ಹಾಲು ಉಣಿಸಬೇಕು. ಇದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ ಉತ್ತಮ ಆರೋಗ್ಯ ಪಡೆಯಲು ಮಗು ಹುಟ್ಟಿನಿಂದ ಆರು ತಿಂಗಳ ಕಾಲ ಸ್ತನಪಾನ ಮಾಡಬೇಕು ಎಂದರು. ಚಿಕ್ಕೋಡಿಯ ಕೆ ಎಲ್ ಇ ಸಂಸ್ಥೆಯ ನಸಿಂರ್ಗ್ ಮಹಾವಿದ್ಯಾಲಯದ ಪ್ರಾಚಾರ್ಯ ಎಂ ಬಿ ಸುನಿಲ್ ಮಾತನಾಡಿ ಹುಟ್ಟಿದ ಮಗುವಿಗೆ ತಾಯಿಯ ಹಾಲು ಶ್ರೇಷ್ಟ ವಾದದ್ದು, ಮಗುವಿಗೆ ತಾಯಿ ಎದೆ ಹಾಲು ಉಣಿಸದಿದ್ದರೆ ಬಾಣಂತಿಗೆ ಬೊಜ್ಜುತನ, ನಿದ್ರಾಹೀನತೆ, ಖಿನ್ನತೆ ಹಾಗೂ ವಿವಿಧ ರೋಗಗಳಿಗೆ ತುತ್ತಾಗುವ ಸಂದರ್ಭ ಇರುತ್ತದೆ. ಕಾರಣ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾಗಿದೆ ಎಂದರು. ನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ತನಪಾನ ಕುರಿತು ಅಣುಕು ಪ್ರದರ್ಶನ ಮಾಡಿ ಜಾಗ್ರತಿ ಮೂಡಿಸಿದರು. ಕೆಎಲ್‌ಇ ಸಂಸ್ಥೆಯ ನಸಿಂರ್ಗ್ ಮಹಾವಿದ್ಯಾಲಯದ ವಿದ್ಯಾರ್ಥಿಯರು ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಅಂಗನವಾಡಿಯ ಕಾರ್ಯಕರ್ತರು ಮತ್ತು ಮಹಿಳೆಯರು ಹಾಜರಿದ್ದರು. ಅಂಕಿತಾ ಮಿರ್ಜಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 