ಬೆಳೆ ಸಮೀಕ್ಷೆದಾರರ ಸಂಘಟನೆಯಿಂದ ಮಾಸಿಕ ಸಭೆ : ಕೃಷಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ನೀಯೋಗದೊಂದಿಗೆ ಬೇಟಿಗೆ ಚಿಂತನೆ

ಬೆಳೆ ಸಮೀಕ್ಷೆದಾರರ ಸಂಘಟನೆಯಿಂದ ಮಾಸಿಕ ಸಭೆ : ಕೃಷಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ನೀಯೋಗದೊಂದಿಗೆ ಬೇಟಿಗೆ ಚಿಂತನೆ Monthly meeting by Crop Surveyors' Association: Consideration of meeting with Agriculture Minister

        ವಿಜಯಪುರ 01: ಶನಿವಾರದಂದು ಪ್ರವಾಸಿ ಮಂದಿರದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಬೆಳೆ ಸಮೀಕ್ಷೆದಾರರ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ "ನಮ್ಮೆಲ್ಲರ ಚಿತ್ತ ಸಂಘಟನೆಯ ನವನಿರ್ಮಾಣದತ್ತ " ಎಂಭ ಶೀರ್ಷಿಕೆಯಡಿ ಹಲವಾರು ನಿರ್ಣಯವನ್ನು ತೆಗೆದುಕೊಳ್ಳಲಾಯಿತು.. 

ಸಭೆಯ ನಂತರ ವಿಜಯಪೂರ ಜಿಲ್ಲಾ ಕಾಂಗ್ರೆಸ್ ಕಮೀಟಿಯ ಜಿಲ್ಲಾ ಅಧ್ಯಕ್ಷರಾದ   ಮಲ್ಲಿಕಾರ್ಜುನ ಎಸ್ ಲೋಣಿ ಅವರಿಗೆ ಭೇಟಿ ನೀಡಿ ಅವರ ನೇತೃತ್ವದಲ್ಲಿಯೇ ಕೃಷಿ ಸಚಿವರಾದ  ಎನ್ ಚಲುವರಾಯಸ್ವಾಮಿ ಅವರ ಬಳಿ 31 ಜಿಲ್ಲೆಯ ಬೆಳೆ ಸಮೀಕ್ಷೆದಾರರ ತಂಡದಿಂದ ಖುದ್ದಾಗಿ ಭೇಟಿಯಾಗಲು ಮತ್ತು ಪ್ರಧಾನ ಬೇಡಿಕೆಗಳ ಬಗ್ಗೆ  ಚರ್ಚೆ ಮಾಡಲು ಹಾಗೂ ಮನವಿ ಕೊಡಲು ಸಮಯಾವಕಾಶ ಕಲ್ಪಿಸಿಕೊಡಲು ಮತ್ತು ಮುಂಬರುವ ಬಜೇಟ್‌ನಲ್ಲಿ ಅನುಕೂಲವಾಗುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ತಿಳಿಸಿದರು. 

ಇ ವೇಳೆ ವಿಜಯಪೂರ ಜಿಲ್ಲಾ ಕಾಂಗ್ರೆಸ್ ಕಮೀಟಿಯ ಜಿಲ್ಲಾ ಅಧ್ಯಕ್ಷರಾದ   ಮಲ್ಲಿಕಾರ್ಜುನ ಎಸ್ ಲೋಣಿ ಬೆಳೆ ಸಮೀಕ್ಷೇದಾರರ ಮನವಿ ಸ್ವೀಕರಿಸಿ ಕುದ್ದಾಗಿ ನಿಮ್ಮ ನಿಯೋಗವನ್ನು ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಬಳಿ ಕರೆದಿಕೊಂಡು ಹೋಗುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು. 

ಈ ಒಂದು ಅವಕಾಶವನ್ನು 31 ಜಿಲ್ಲೆಗಳ ಬೆಳೆ ಸಮೀಕ್ಷೆದಾರರ ಸಂಘಟನೆಯ ಜಿಲ್ಲಾ ಘಟಕದ ಮುಂದಾಳುಗಳು ಸದುಪಯೋಗ ಪಡೆದುಕೊಳ್ಳಲು ವಿಜಯಪೂರ ಜಿಲ್ಲಾ ಘಟಕದ ಮುಂದಾಳುಗಳು ಕರೆಯನ್ನು ಕೊಟ್ಟಿದ್ದಾರೆ. ಈ ವೇಳೆ ಮುಖಂಡರಾದ ನರಸಪ್ಪ ನಾವಿ, ಭೀಮಪ್ಪ ಲಕ್ಷ್ಮಣ ತಳವಾರ, ಸೋಮಶೇಖರ ನಾಯ್ಕೋಡಿ, ಮಲ್ಲಿಕಾರ್ಜುನ ಪೂಜೇರಿ,  ಸದಾಶಿವ ಚಲವಾದಿ ಸೇರಿದಂತೆ ಇತರರು ಇದ್ದರು.