ಸರಕಾರಿ ನೌಕರರ ಮಲ್ಟಿಪರಪಜ್ ಸೊಸೈಟಿಯ ಆರ್ಥಿಕ ಬೆಳವಣಿಗೆಗೆ ಸದಸ್ಯರು ಸಹಕಾರ ನೀಡಬೇಕು: ಮಲ್ಲಿಕಾರ್ಜುನ ಮಗದುಮ್ ಮನವಿ

ಸರಕಾರಿ ನೌಕರರ ಮಲ್ಟಿಪರಪಜ್ ಸೊಸೈಟಿಯ ಆರ್ಥಿಕ ಬೆಳವಣಿಗೆಗೆ ಸದಸ್ಯರು ಸಹಕಾರ ನೀಡಬೇಕು: ಮಲ್ಲಿಕಾರ್ಜುನ ಮಗದುಮ್ ಮನವಿ Members should cooperate in the economic growth of the Government Employees' Multipurpose Society

ಅಥಣಿ 22 : ಸರಕಾರಿ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಕಳೆದ 22 ವರ್ಷಿಗಳಿಂದ ನಿರಂತರವಾಗಿ ಕರ್ನಾಟಕ ಸರಕಾರಿ ನೌಕರರ ಮಲ್ಟಿಪರಪಜ್ ಕೋ ಆಪ್ ಸೊಸೈಟಿ  ಸಾಲದ ಮೂಲಕ ಆರ್ಥಿಕ ಭದ್ರತೆ ಒದಗಿಸುತ್ತಿದೆ ಎಂದು ಸೊಸೈಟಿ  ಅಧ್ಯಕ್ಷ ಮಲ್ಲಿಕಾರ್ಜುನ ಮಗದುಮ ಹೇಳಿದರು. ಅವರು 22 ನೇ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ನಮ್ಮ ಸೊಸೈಟಿ 50 ಲಕ್ಷ 58 ಸಾವಿರದಾ 987 ರೂ.ಗಳಷ್ಟು  ಲಾಭ ಮಾಡಿಕೊಂಡಿದ್ದು, ಸದಸ್ಯರಿಗೆ ಶೇ.15 ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಿದೆ ಎಂದರು.       ನಮ್ಮ ಸೊಸೈಟಿ ಮಾರ್ಚ 31 ರಂದು 42 ಕೋಟಿಗಿಂತಲೂ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ. ಸೊಸೈಟಿ ತನ್ನ ಸದಸ್ಯರಿಗೆ ವಿವಿಧ ಯೋಜನೆಯಡಿ 24 ಕೋಟಿ 39 ಲಕ್ಷ 92 ಸಾವಿರದಾ 778 ರೂ.ಗಳಷ್ಟು ಸಾಲ ನೀಡಿದೆ ಎಂದ ಅವರು ಸದಸ್ಯರಿಂದ 34 ಕೋಟಿ 28 ಲಕ್ಷ 83 ಸಾವಿರದಾ 417 ರೂ.ಗಳಷ್ಟು ಹಣವನ್ನು ಠೇವಣಿ ಸಂಗ್ರಹಿಸಲಾಗಿದೆ ಎಂದರು.        

ಸರಕಾರಿ ನೌಕರರಿಗೆ ನಮ್ಮ ಸೊಸೈಟಿ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸ್ಪರ್ಧಾತ್ಮಕ ಅಂದರೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು ಪ್ರತಿ ವರ್ಷವೂ ಸರಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಕೂಡ ಅನೇಕ ವರ್ಷಗಳಿಂದ ಕೊಡಲಾಗುತ್ತಿದೆ ಎಂದರು.ಸೊಸೈಟಿ ಸಂಸ್ಥಾಪಕ ಸದಸ್ಯ ಮತ್ತು ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ ಮಾತನಾಡಿ,  ಅತ್ಯಂತ ಸಣ್ಣ ಪ್ರಮಾಣದಲ್ಲಿ 2003 ರಲ್ಲಿ ಪ್ರಾರಂಭಗೊಂಡಿದ್ದ ಈ ಸೊಸೈಟಿ ಇಂದು 42 ಕೋಟಿ ದುಡಿಯುವ ಬಂಡವಾಳದೊಂದಿಗೆ ಮುನ್ನಡೆಯುತ್ತಿದೆ, ಸರಕಾರಿ ನೌಕರರಿಗೆ ಶೇ.10 ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಂಘದ ಮೂಲಕ ಕೊಡುತ್ತಿರುವುದು ನಮ್ಮ ಸೊಸೈಟಿಯ ಹಿರಿಮೆಯಾಗಿದೆ ಎಂದರು.      ಸೊಸೈಟಿ ಮೂಲಕ ಬಂಗಾರದ ಖರೀದಿಗೆ ಮತ್ತು ಬಂಗಾರ ಅಡುವು ಇಟ್ಟುಕೊಂಡು ಸಾಲ ಮತ್ತು ಗೃಹ ಸಾಲ ಕೊಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಸದಸ್ಯರು ಪಡೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಬಡ್ಡಿ ಸಹಿತ ಹಿಂದಿರುಗಿಸಿ ಎಂದರು.       ಹಿರಿಯ ಸದಸ್ಯ ಶಿವಾನಂದ ದಿವಾನಮಳ ಮಾತನಾಡಿ, ಅನೇಕ ಹಿರಿಯ ನೌಕರರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಪ್ರಾರಂಭದಲ್ಲಿ ಈ ಸೊಸೈಟಿಯನ್ನು ಒಂದು ಹಂತಕ್ಕೆ ತರಬೇಕಾದರೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ ಆ ಹಿರಿಯ ಸಂಸ್ಥಾಪಕರ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಿ ಎಂದ ಅವರು ಸದಸ್ಯರಿಗೆ ಅಂಚೆ ಕಛೇರಿ ಮೂಲಕ ಆರೋಗ್ಯ ವಿಮೆ ಮಾಡಿಸುವ ನಿಟ್ಟಿನಲ್ಲಿ ಯೋಚನೆ ಮಾಡಿ ಎಂದರು.  

ಮತ್ತೋರ್ವ ಹಿರಿಯ ಸದಸ್ಯ ಅರುಣ ಯಲಗುದ್ರಿ ಮಾತನಾಡಿ, ಚಿಕ್ಕೋಡಿ ಅಥವಾ ಕಾಗವಾಡದಲ್ಲಿ ಶಾಖೆ ಪ್ರಾರಂಭಿಸಬೇಕು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಮತ್ತು  ಅಧ್ಯಕ್ಷ ಮಲ್ಲಿಕಾರ್ಜುನ ಮಗದುಮ್ ನೇತೃತ್ವದಲ್ಲಿ ಸಂಘ ಮುನ್ನಡೆಯಲಿ ಎಂದು ಹಾರೈಸಿದರು. ಸೊಸೈಟಿಯ ಹಿರಿಯ ಸದಸ್ಯ ಶ್ರೀಕಾಂತ ಮಾಕಾಣಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಬಡ್ಡಿ, ಕಂತು ಪಾವತಿಸಿ ಆಗ ಮಾತ್ರ ಸಹಕಾರಿ ಸಂಘ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದರು. 

ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿದಾನಂದ ಬಡವಗೋಳ ಅಢಾವೆ ಪತ್ರಿಕೆ ಓದಿದರು. ನಿರ್ದೇಶಕ ಮಂಡಳಿಯ ಪ್ರವೀಣ ಹುಣಸಿಕಟ್ಟಿ, ಗುರುನಾಥ ಸ್ವಾಮಿ, ಸುಮೀತಕುಮಾರ ಮರನೂರ, ವಿಜಯ ಢವಳೆ, ಚಂದ್ರಕಾಂತ ಕಾಂಬಳೆ, ಅಪ್ಪಾಸಾಬ ಹಿಪ್ಪರಗಿ, ರವಿ ಅಂಗಡಿ, ಬೀರ​‍್ಪ ಕಡಗಂಚಿ, ರಮೇಶ ಚೌಗಲಾ, ಜಾವೇದ ಪಟೇಲ್, ಶಿವಗೌಡ ಪಾಟೀಲ, ಶ್ರೀಮತಿ ಸುಮಿತ್ರಾ ಮಗೆನ್ನವರ, ಶ್ರೀಮತಿ ರೇಣುಕಾ ಗಾಣಗಿ, ಕಾನೂನು ಸಲಹೆಗಾರ ಕೆ.ಎ.ವಣಜೋಳ ಉಪಸ್ಥಿತರಿದ್ದರು. ಸಭೆಯಲ್ಲಿ ಅನೇಕ ಸದಸ್ಯರು ಮಾತನಾಡಿ ಸಲಹೆ ನೀಡಿದರು.