ಚರ್ಮಕಾರ ಸಮಾಜದ ಬೆಳಗಾವಿಯ ಪ್ರಮುಖ ಮುಖಂಡರೊಂದಿಗೆ ಸಭೆ
Meeting with prominent leaders of the leather workers' society in Belgaum
ಚರ್ಮಕಾರ ಸಮಾಜದ ಬೆಳಗಾವಿಯ ಪ್ರಮುಖ ಮುಖಂಡರೊಂದಿಗೆ ಸಭೆ
ಬೆಳಗಾವಿ 28: ರಾಜ್ಯದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ನಿರ್ದೇಶನದಂತೆ ಡಾ. ಬಾಬು ಜಗಜೀವನ ರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಲೀಡಕರ್ ಅಧ್ಯಕ್ಷರಾದ ಮುಂಡರಗಿ ನಾಗರಾಜರವರು ಬೆಳಗಾವಿಯ ಸರ್ಕ್ಯೂಟ್ ಹೌಸಿನಲ್ಲಿ ಚರ್ಮಕಾರ/ಚಮ್ಮಾರ ಸಮಾಜದ ಬೆಳಗಾವಿಯ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿದರು. ಈ ಭೇಟಿಯಲ್ಲಿ, ಸಂಕೇಶ್ವರ, ನಿಪ್ಪಾಣಿ ಲೆದರ್ ಕ್ಲಸ್ಟರ್ ಹಾಗೂ ಬೆಳಗಾವಿ ಪ್ರದೇಶಗಳಲ್ಲಿ ಚರ್ಮಕಾರ ಸಮಾಜದವರಿಗಾಗಿ ವಸತಿ ಯೋಜನೆಗಳ ಅನುಷ್ಠಾನ ಕುರಿತಂತೆ, ಮತ್ತು ಧಾರವಾಡದ ಸೂಪರ್ ಮಾರ್ಕೆಟ್ ನಲ್ಲಿ ಅಂಗಡಿಗಳನ್ನು ಮಂಜೂರು ಮಾಡುವ ಬಗ್ಗೆ ಚರ್ಚೆ ನಡೆಯಿತು. ಸಮಾಜದ ಮೂಲಭೂತ ಅವಶ್ಯಕತೆಗಳು ಹಾಗೂ ವೃತ್ತಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಮನವಿಯು ನೀಡಲಾಯಿತು. ಸಭೆಯಲ್ಲಿ ಚರ್ಮಕಾರ ಮಹಾಸಭಾದ ರಾಜ್ಯಾಧ್ಯಕ್ಷರಾದ ಭೀಮರಾವ ಪವಾರ, ರಾಜ್ಯ ಕಾರ್ಯದರ್ಶಿ ಸಂಜೀವ ಲೋಕಾಪುರ, ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರಾದ ಸಂತೋಷ ಹೊಂಗಲ, ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷರಾದ ಗಣೇಶ ಕಾಳೆ, ಹೀರಾಲಾಲ ಚವಾಣ, ಲಿಡ್ಕರ್ ಜಿಲ್ಲಾ ಸಂಯೋಜಕರಾದ ಎ. ಎಸ್. ರುದ್ರೇಶಿ, ಸಂಜಯ ಚೌಗುಲೆ, ಶಿವಾಜಿ ಕಾಂಬಳೆ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು. ಸಭೆಯ ಕೊನೆಯಲ್ಲಿ, ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಮುಂಡರಗಿ ನಾಗರಾಜ ರವರಿಗೆ ಗೌರವ ಸತ್ಕಾರ ನಡೆಯಿತು. ಸಮಾಜದ ಹಿತದೃಷ್ಟಿಯಿಂದ ನಿರಂತರ ಪೂರಕ ಕಾರ್ಯಾಚರಣೆಗೆ ಭರವಸೆ ನೀಡಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 