ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಸಿಇಓ ರುಚಿ ಬಿಂದಾಲ

ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಸಿಇಓ ರುಚಿ ಬಿಂದಾಲ Maintaining cleanliness is everyone's duty, says CEO Ruchi Bindal

ಬ್ಯಾಡಗಿ 03 :  ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಯುದ್ಧ ನಾಗರಿಕನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ ಇಓ ರುಚಿ ಬಿಂದಾಲ್ ತಿಳಿಸಿದರು. ತಾಲೂಕಿನ ಮಾಸಣಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಕುಡಿಯುವ ನೀರಿನ ಹೊಂಡದಲ್ಲಿ ಸ್ವಚ್ಛತೆಯಡೆಗೆ ದಿಟ್ಟ ಹೆಜ್ಜೆ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದವರು.  

ನಮ್ಮ ಬದುಕಿನಲ್ಲಿ ಸ್ವಚ್ಛತೆ ಬಹು ಮುಖ್ಯವಾಗಿದೆ ನಮ್ಮ ಮನೆ ಮಾತ್ರವಲ್ಲದೆ ಸುತ್ತಮುತ್ತದಲ್ಲಿನ ಪರಿಸರದಲ್ಲಿಯೂ ನಾವು ಸ್ವಚ್ಛತೆಯನ್ನು ಕಾಪಾಡಬೇಕು ಇದರಿಂದ ಉತ್ತಮ ಆರೋಗ್ಯದ ಜೊತೆಗೆ ನಮ್ಮ ಪರಿಸರವೂ ಸಹ ಸುಂದರವಾಗಿರುತ್ತದೆ ಎಂದು ಹೇಳಿದರು. ಪ್ರತಿ ಗ್ರಾಮದಲ್ಲಿಯೂ ನಾಗರಿಕರು ತಮ್ಮ ಸುತ್ತಮುತ್ತಲಿನ ಅಷ್ಟೇ ಅಲ್ಲದೆ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಹಾಕದೆ ಕಸದ ವಾಹನ ದಲ್ಲಿಯೇ ಕಸವನ್ನು ಹಾಕಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಎಚ್ಚರಿಕೆ ನೀಡಿದರು ಪ್ರತಿಯೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಹೊಂಡಗಳು ಕೆರೆಗಳು ನೀರಿನ ಜೀವನಾಡಿಗಳನ್ನು ಸ್ವಚ್ಛತೆಯಿಂದ ಕಾಪಾಡಿ ಕೊಳ್ಳಬೇಕು ನೀರು ಸಕಲ ಜೀವರಾಶಿಗಳಿಗೂ ಅತ್ಯೆಮೂಲ್ಯ ಎಂದು ಹೇಳಿದರು. 

ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಕೆಎಂ ಮಾತನಾಡಿ ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಒಂದು ಗಂಟೆಗಳ ಕಾಲ ಪ್ರತಿ ವಾರ ಶ್ರಮದಾನ ಮಾಡಿ ಜನಸಾಮಾನ್ಯರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಗುವುದು ಗ್ರಾಮಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಮುಂತಾದ ತಾಜ್ಯಗಳನ್ನು ಕಸದ ಬುಟ್ಟಿಯಲ್ಲಿ ಹಾಕಬೇಕು ಎಂದು ಹೇಳಿದರು. 

*ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ಅಗಸರ ಸರ ರವರು (ಗ್ರಾ,ಉ),  ಹಾಗೂ  ಸಹಾಯಕ ನಿರ್ದೇಶಕರಾದ  ನಾಗರಾಜ್ ಹಡಗಲಿ ರವರು (ಪಂ ರಾಜ್) ಕೃಷಿ ಅಧಿಕಾರಿ ನಾಗರಾಜ್ ಬನ್ನಿಹಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ್ ಬಣಕಾರ ರವರು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಂಯೋಜಕರಾದ ಗೋವಿಂದರಾಜ್ ರವರು ಹಾಗೂ ಸುನಿತಾ ರವರು ಹಾಗೂ, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರಾದ ಸಂತೋಷ್ ನಾಯ್ಕ್‌ ಹಾಗೂ ಖಿಋಅ ಅಕ್ಷಯ್ ದೇಶಪಾಂಡೆ ಹಾಗೂ ಸಿಬ್ಬಂದಿಗಳು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಮಹಿಳಾ ಸ್ವ ಸಹಾಯ ಸಂಘದ ಪ್ರತಿನಿದಿಗಳು  ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.