ಮಹಾತ್ಮ ಗಾಂಧೀಜಿಯವರ ಸತ್ಯ-ಅಹಿಂಸೆಯ ತತ್ವಗಳು ಇಂದು ಕೂಡ ಸಮಾಜಕ್ಕೆ ಮಾರ್ಗದರ್ಶಕ : ವಿಜಯಾ ಕೋರಿಶೆಟ್ಟಿ
Mahatma Gandhi's principles of truth and non-violence are still a guide for society today: Vijaya K
ವಿಜಯಪುರ 30: ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಮಹಿಳಾ ವಿವಿಯ ಕುಲಪತಿ ವಿಜಯಾ ಕೋರಿಶೆಟ್ಟಿ ಹೇಳಿದರು ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಎನ್.ಎನ್. ಎಸ್ ಕೋಶದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ "ಹುತಾತ್ಮ ದಿವಸ'ದ ಅಂಗವಾಗಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರೆ್ಣ ಮಾಡಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ನೀಡಿದ ಅಪಾರ ಕೊಡುಗೆಗಳನ್ನು ಇಂದಿನ ದಿನ ನಾವು ಸ್ಮರಿಸುತ್ತಿದ್ದೇವೆ.
ಅಷ್ಟೇ ಅಲ್ಲದೇ ಭಾರತ ಹಳ್ಳಿಗಳ ದೇಶವಾಗಿದ್ದು, ಸ್ವಾತಂತ್ರ್ಯದ ಕಾಲದಲ್ಲಿ ಶೇಕಡಾ 80 ರಷ್ಟು ಜನರು ಗ್ರಾಮದಲ್ಲಿ ವಾಸಿಸುತ್ತಿದ್ದರು. ಗ್ರಾಮಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸ್ವಾವಲಂಬಿಯಾಗಬೇಕು. ಗ್ರಾಮಗಳ ಪ್ರಗತಿಯಲ್ಲಿಯೇ ದೇಶದ ಪ್ರಗತಿ ಅಡಗಿದೆ. ಎಂದರು. ಇದೇ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಸತ್ಯ-ಅಹಿಂಸೆಯ ತತ್ವಗಳು ಇಂದು ಕೂಡ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಗ್ರಾಮಾಭಿವೃದ್ಧಿ ಮತ್ತು ಜನಸೇವೆಯನ್ನು ಅವರು ಜೀವನದ ಕೇಂದ್ರಬಿಂದುವಾಗಿ ಮಾಡಿದ್ದರು. ವಿದ್ಯಾರ್ಥಿಗಳು ಗಾಂಧೀಜಿಯವರ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜವಾಬ್ದಾರಿಯುತ ನಾಗರಿಕ ತಲೆಮಾರು ರೂಪುಗೊಳ್ಳುತ್ತದೆ. ಅವರ ಚಿಂತನೆಗಳು ರಾಷ್ಟ್ರ ನಿರ್ಮಾಣಕ್ಕೆ ನೈತಿಕ ಬಲ ನೀಡುವ ವಿಶಿಷ್ಟ ಆಧಾರವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್. ಲಕ್ಕಣ್ಣವರ, ಪ್ರೊ, ಶಾಂತದೇವಿ, ಪ್ರೊ. ಜ್ಯೋತಿ ಉಪಾಧ್ಯ, ಪ್ರೊ. ರಾಜಕುಮಾರ್ ಮಾಲಿ ಪಾಟೀಲ, ಪ್ರೊ.ಅಶೋಕ ಸುರಪುರ, ಪ್ರೊ. ನಾರಾಯಣ ಪವಾರ, ಪ್ರೊ.ನಾಗರಾಜ ಎಂ, ಪ್ರೊ. ವೆಂಕೋಬಾ ನಾರಾಯಣಪ್ಪ, ಡಾ, ಕಲಾವತಿ ಕಾಂಬಳೆ, ಡಾ.ಅಕ್ಷಯ ಯಾರ್ಡಿ, ಡಾ.ಗಣೇಶ, ಡಾ.ಜಾಯ್ ಹೊಸಕೇರಿ, ಡಾ. ಪ್ರಜಾಪತಿ, ಡಾ.ಗುಲಾಬ ರಾಠೋಡ, ಡಾ. ಭಾಗ್ಯಶ್ರೀ ದೊಡಮನಿ, ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂಧಿಗಳು, ಸಂಶೋಧನಾ ವಿದ್ಯಾರ್ಥಿನಿಯರು, ಮತ್ತು ಎಲ್ಲಾ ಅಧ್ಯಯನ ವಿಭಾಗಗಳ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಮತ್ತಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 