ಮಹಾಲಕ್ಷ್ಮಿ ಮಹಿಳಾ ಮಂಡಳದ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮ

ಮಹಾಲಕ್ಷ್ಮಿ ಮಹಿಳಾ ಮಂಡಳದ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮ Mahalaxmi Mahila Mandal's anniversary and oath-taking program

 ಬೆಳಗಾವಿ 23: ಸ್ವಾತಂತ್ರ್ಯ ಪೂರ್ವದಲ್ಲಿಯೂ ಮಹಿಳೆಯರು ಸಂಘಟಿತ ರಾಗಿ ದೇಶಕ್ಕಾಗಿ ಹೋರಾಟ ಮಾಡಿದ್ದರು. ಸ್ವಾತಂತ್ರ್ಯ ಬಳಿಕವೂ ಮಹಿಳೆಯರು ಸಂಘಟಿತ ನೆಲೆಯಲ್ಲಿ ಸಬಲೀಕರಣ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಸಂಘಟನೆ ಮೂಲಕ ಇನ್ನಷ್ಟು ಮಹಿಳೆಯರ ಸಬಲೀಕರಣ ಆಗಬೇಕು ಎಂದು ನಿವೃತ್ತ ಉಪನ್ಯಾಸಕರಾದ ಶರಣೆ ಕಲ್ಪನಾ ಪಟ್ಟನ ಅವರು ಹೇಳಿದರು. 

ನಗರದ ಮಹಾಂತೇಶ್ ನಗರದ ಮಹಾಂತ ಭವನದಲ್ಲಿ ಭಾನುವಾರ 21 ರಂದು ಮಹಾಲಕ್ಷ್ಮಿ ಮಹಿಳಾ ಮಂಡಳದ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮ ನೆರವೇರಸಿ ಅವರು ಮಾತನಾಡಿದರು. ಮಹಿಳೆಯರಿಗೆ ನಮ್ಮ ದೇಶದಲ್ಲಿ ಪುರುಷರಷ್ಟೆ ಸಮಾನ ಸ್ಥಾನಮಾನ ನೀಡಿದ್ದು, ಅವುಗಳನ್ನು ಸಂಘಟನೆಗೊಳ್ಳುವ ಮೂಲಕ ಪಡೆದು ಕೊಳ್ಳಬೇಕು. 

ದೇಶದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ. ಪುರುಷರಷ್ಟೆ ಸಮಾರ್ಥವಾಗಿ ಒಬ್ಬ ಮಹಿಳೆ ದೇಶವನ್ನು ಮುನ್ನಡೆಸಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ಅವರನ್ನು ಸ್ಫೂರ್ತಿಯಾಗಿ ಸ್ವೀಕರಿಸಿ, ಮಹಿಳೆಯರು ಜಾಗೃತರಾಗಿ ಸಂಘಟನೆ ಬಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.  

ಸಂಘಟನೆಗಳು ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಬಲೀಕರಣಗೊಳಿಸಿ ಅಭಿವೃದ್ಧಿಪಡಿಸುತ್ತವೆ; ಮಹಿಳೆಯರು ಸಂಘಟಿತರಾಗಿ ಸ್ವಯಂಸಹಾಯ ಸಂಘಗಳನ್ನು ಸ್ಥಾಪಿಸಿ ಆರ್ಥಿಕ ನೆರವು ಪಡೆದು ಸ್ವಾವಲಂಬನೆ ಬದುಕು ಸಾಗಿಸಬೇಕಿದೆ.  

ಒಂದು ಚಿಕ್ಕ ಸಂಘಟನೆ ಮುಂದಿನ ದಿನಗಳಲ್ಲಿ ಬಲಿಷ್ಠವಾಗಿ ಬೆಳೆಯುತ್ತದೆ. ಇದಕ್ಕೆ ಸಂಘಟನೆ ಸದಸ್ಯರು ಸಹಾಯ-ಸಹಕಾರ ಕಾರಣವಾಗಿದೆ. ಮಹಾಲಕ್ಷ್ಮಿ ಮಹಿಳಾ ಮಂಡಳವು ಸಾಮಾಜಿಕ ಸೇವೆ ಜೊತೆಗೆ ದೊಡ್ಡದಾಗಿ ಬೆಳೆಯಲಿ ಎಂದು ಹಾರೈಸಿದರು. ನಮ್ಮ ಆರೋಗ್ಯ ಕಡೆಗೆ ಆದಷ್ಟು ಗಮನ ಹರಿಸಿ, ಸುಸಂಸ್ಕೃವಾದ ಜೀವನ ಸಾಗಿಸಬೇಕಿದೆ. ನಾವು ಮಕ್ಕಳೊಂದಿಗೆ ಎಷ್ಟು ಪ್ರೀತಿಯಿಂದ ಬೆರೆಯುತ್ತವೆ ಅಷ್ಟು ಬದುಕು ಸುಂದರ. ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ನೀಡಿ, ಕುಟುಂಬದೊಂದಿಗೆ ಹೇಗೆ ಬೆರೆಯಬೇಕು ಎಂದು ಕಲಿಸಬೇಕು. ಅಂದಾಗ ಒಗ್ಗಟ್ಟಿನ ಸಂಸಾರದಲ್ಲಿ ನೆಮ್ಮದಿ ಸಿಗಲಿದೆ ಎಂದು ಸಲಹೆ ನೀಡಿದರು. 

ಈ ವೇಳೆ ವೀಣಾ ಚಿನ್ನಣ್ಣನವರ್, ಅಧ್ಯಕ್ಷರಾದ ಪ್ರೇಮ ಕಣಕತ್ರಿ, ಉಪಾಧ್ಯಕ್ಷರಾದ ಜ್ಯೋತಿ ಎ ಆರ್, ಕಾರ್ಯದರ್ಶಿಗಳು ಹಾಗೂ ಮಹಾಲಕ್ಷ್ಮಿ ಮಹಿಳಾ ಮಂಡಲದ ಕಮಿಟಿಯ ಎಲ್ಲ ಸದಸ್ಯರು ಇತರರು ಇದ್ದರು.ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಮಹಿಳಾ ಮಂಡಳದ ಗೌರವಾಧ್ಯಕ್ಷ ಸುನಿತಾ ಪಾಟೀಲ್ ಹಾಜರಿದ್ದರು. ಗೌರವ ಕಾರ್ಯದರ್ಶಿಯಾದ ಶೋಭಾ ಪಾಟೀಲ್ ವಾರ್ಷಿಕ ಲೆಕ್ಕಪತ್ರವನ್ನು ಓದಿದರು. 

 ವಿಜಯಲಕ್ಷ್ಮಿ ಬನ್ನೂರು ಇವರು ಮಹಿಳಾಮಂಡಲದಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಿಗೆ ಬಹುಮಾನದ ಪ್ರಾಯೋಜಕರಾಗಿದ್ದರು. ಕಾರ್ಯಕ್ರಮಕ್ಕೆ ಮಹಾಂತೇಶ್ ನಗರದ ರಹವಾಸಿ ಸಂಘದ ಅಧ್ಯಕ್ಷರಾದ ಸಂಜಯ್ ಪಟ್ಟಣಶೆಟ್ಟಿ ಮತ್ತು ನಗರ ಸೇವಕರಾದ ರಾಜಶೇಖರ ದೋಣಿ ಉಪಸ್ಥಿತರಿದ್ದು