ಮಡಿವಾಳ ಮಾಚಿದೇವ ರವರ ಜಯಂತಿ
Madiwala Machideva's birthday
ಬೀಳಗಿ 01 : ಬಸವಣ್ಣವನರ ಅನುಭವ ಮಂಟಪದ ದಾರಿಯಲ್ಲಿ ನಮ್ಮ ಸಂಸತ ಭವನ ನಿರ್ಮಾಣವಾಗಿದೆ. ಸರಿಸಮಾಜ ನಿರ್ಮಾಣ ಮಾಡುವಲ್ಲಿ ಪ್ರಥಮದಲ್ಲಿ ಬಸವಣ್ಣನವರ ಕೊಡುಗೆ ಅಪಾರ. ಸರಿ ಸಮಾನದ ಸಮಾಜ ನಿರ್ಮಾಣಕ್ಕೆ ಇವತ್ತಿಗೂ ಆಗುತ್ತಿಲ್ಲ. ಎಲ್ಲರೂ ನಮ್ಮ ಸಮಾಜಕ್ಕೆ ಅಂಟಿಕೊಂಡಿದ್ದೇವೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಡಿವಾಳ ಮಾಚಿದೇವ ರವರ ಜಯಂತಿಯ ಅಧ್ಯಕ್ಷತೆ ವಹಿಸಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಸರಿಸಮಾಜದ ನಿರ್ಮಾಣಕ್ಕೆ ಬಸವಣ್ಣನವರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಮಡಿವಾಳ ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಉನ್ನತ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಸಮಾಜದ ಯಾವುದೇ ಸಮಸ್ಯೆ ಇದ್ದರು ನನ್ನ ಗಮನಕ್ಕೆ ತರಬೇಕು. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಹೇಳಿದರು.
ಸಮಾನ ಸಮಾಜ ನಿರ್ಮಾಣ ಇವತ್ತಿಗೂ ಆಗುತ್ತಿಲ್ಲ. ಎಲ್ಲರೂ ನಮ್ಮ ನಮ್ಮ ಸಮಾಜಕ್ಕೆ ಅಂಟಿಕೊಂಡಿದ್ದೇವೆ. ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತವಾಗಿ ಯಾರು ಆಗಬಾರದು. ಶಿಕ್ಷಣ ದಿಂದ ಎಲ್ಲವು ಸಾಧಿಸಲು ಸಾಧ್ಯ. ದಾಸನಿಕ ಶರಣರ ಹಿತವಚನಗಳು ಅನುಕೂಲಕ್ಕೆ ದಾರಿ ದೀಪವಾಗಿದೆ ಎಂದರು.
ಗ್ಯಾರಂಟಿ ಸಮಿತಿ ತಾಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟೀಮಠ, ತಾಪಂ ಇಒ ಶ್ರೀನಿವಾಸ ಪಾಟೀಲ, ಸಿಪಿಐ ಎಚ್ ಬಿ.ಸಣ್ಣಮನಿ, ಗೋವಿಂದಪ್ಪ ಅರಳಿಕಟ್ಟಿ, ಸಿಡಿಪಿಒ ಕವಟೇಕರ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಗೋಪಿ ಮಡಿವಾಳರ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹಣಮಂತ ಕಾಖಂಡಕಿ ಹಣಮಂತ ಮಡಿವಾಳ, ಜಿಲ್ಲಾ ಕೋಶ್ಯಾಧ್ಯಕ್ಷ ಮಲ್ಲು ಮಡಿವಾಳರ, ಜಿ.ಆರ್.ಪಾಟೀಲ, ಬಸವರಾಜ ಹಳ್ಳದಮನಿ, ಶಿಕ್ಷಣ ಇಲಾಖೆ ದೈಹಿಕ ಪರಿವಿಕ್ಷಕ ಸಂಗಪ್ಪ ಎತ್ತಿನಮನಿ, ಹಣಮಂತ ಮಡಿವಾಳರ, ಸಿದ್ದು ಸಾರಾವರಿ, ಈರ್ಪ ಮಡಿವಾಳರ, ಪುಂಡಲೀಕ ಮಡಿವಾಳರ, ಶ್ರೀಶೈಲ ಮಡಿವಾಳರ, ಸುರೇಶ ಮಡಿವಾಳರ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 