ವಾಣಿಜ್ಯ ನಗರದ ಬಡಾವಣೆಗಳಲ್ಲಿ ಹುಚ್ಚುನಾಯಿ ದಾಳಿ : ನಾಗರಿಕರ ಆಕ್ರೋಶ, ಎಚ್ಚೆತ್ತ ಆಡಳಿತ- ಬಂಧನಕ್ಕೆ ಮುಂದಾದ ಅಧಿಕಾರಿಗಳು
Mad dog attacks in commercial city's neighborhoods: Citizens outraged, administration on alert - of
ರಾಣೆಬೆನ್ನೂರು :7 ವಾಣಿಜ್ಯ ನಗರದಲ್ಲಿ ಶುಕ್ರವಾರ ನಡೆದ ಏಕಾಏಕಿ ಹುಚ್ಚುನಾಯಿಗಳ ದೀಡೀರ್ ದಾಳಿಯಿಂದಾಗಿ ಸಾಮೂಹಿಕವಾಗಿ ನಾಯಿ ಕಚ್ಚುವಿಕೆಗೆ ಮಕ್ಕಳು ಮಹಿಳೆಯರ ಒಳಗಾಗಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹುಚ್ಚು ನಾಯಿ ಏಕಾಏಕಿ ದಾಳಿ ಮಾಡಿದ್ದು, ಇದರಿಂದ ಹಲವರು ಆಸ್ಪತ್ರೆಗೆ ಸೇರುವಂತಾಗಿದ್ದು, ಇಂದಿಗೂ ಬಹುತೇಕರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಲ್ಲಿ ನಿರತರಾಗಿರುವುದು, ಕಾಣಬಹುದಾಗಿದೆ. ಘಟನೆಯಿಂದ ನಾಗರಿಕರಲ್ಲಿ ಬಹು ಆತಂಕ ಸೃಷ್ಟಿ ಮೂಡಿದಂತಾಗಿದೆ. ಕಳೆದ ಎರಡು ತಿಂಗಳಿನಿಂದ ರಾಜ್ಯದ ಅನೇಕ ಭಾಗಗಳಲ್ಲಿ ನಾಯಿಗಳಿಂದ ದಾಳಿ ನಡೆದು, ಕಚ್ಚಿಸಿಕೊಂಡು ಮಾರಣಾಂತಿಕ ರೂಪದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಅಲ್ಲಲ್ಲಿ ಕಾಣುವಂತಾಗಿತ್ತು ಇದು ಸಾಮಾನ್ಯವೂ ಆಗಿತ್ತು.
ಸಾರ್ವಜನಿಕರ ದೂರು ಮತ್ತು ಆಕ್ರೋಶದ ಹಿನ್ನೆಲೆಯಲ್ಲಿ ಅಂದು ಎಚ್ಚೆತ್ತುಕೊಂಡ ರಾಣೆಬೆನ್ನೂರು ನಗರಸಭೆ ಆಡಳಿತವು, ನಾಯಿಗಳ ನಿರ್ಬಂಧಕ್ಕಾಗಿ, ಮತ್ತು ಅವುಗಳ ರಕ್ಷಣೆಗಾಗಿ ನಗರ ಹೊರ ವಲಯದ ಹುಲ್ಲತ್ತಿ ರಸ್ತೆಯಲ್ಲಿ ಬಂಧನ ಕೇಂದ್ರ ಆರಂಭಿಸಿದ್ದರು. ಪುನ: ನಾಯಿಗಳು ವಿವಿಧ ಬಡಾವಣೆಗಳಲ್ಲಿ ದೀಡೀರ್ ಬಂದಿದ್ದು ಎಲ್ಲಿಂದ?.ನಿನ್ನೆ ದಿವಸ ರಸ್ತೆಗಳಿದ ಹುಚ್ಚುನಾಯಿ ಮಹಿಳೆಯರು ಮಕ್ಕಳು ಸೇರಿ 15ಕ್ಕೂ ಹೆಚ್ಚು ಜನರ ಮೇಲೆ ವಿವಿಧ ಬಡಾವಣೆಗಳಲ್ಲಿ( ಹಲಗೇರಿ ವೃತ್ತ, ಉಮಾಶಂಕರ ನಗರ,) ಸೇರಿದಂತೆ ರಸ್ತೆಯುದ್ದಕ್ಕೂ ಹುಚ್ಚು ನಾಯಿಂದ ದಾಳಿ ನಡೆದಿ ದ್ದು, ನಗರದ ನಾಗರಿಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಯಾದಂತಾಗಿದೆ.
ಕಳೆದೇರಡು ತಿಂಗಳ ಹಿಂದೆ ಇಂತಹ ಘಟನೆ ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಡೆದಾಗ, ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಹೊರತುಪಡಿಸಿ, ಇಲ್ಲಿ ನಾಯಿಗಳು ಕಚ್ಚಿದ ಯಾವುದೇ ಘಟನೆಗಳು ನಡೆದಿರಲಿಲ್ಲ. ಆದರೆ ಸಭೆ ನಡೆದಾಗಲೊಮ್ಮೆ ನಾಯಿಗಳ ಕುರಿತು, ಬಂಧನ, ಅವುಗಳ ರಕ್ಷಣೆ, ಸಂತಾನ ಹರಣ, ಮತ್ತು ಮುಂಜಾಗ್ರತೆ ಕ್ರಮ ಕೈಗೊಳ್ಳುವ ಕುರಿತಂತೆ ಸಾಕಷ್ಟು ಚರ್ಚೆಗೆ ಗ್ರಾಷವಾಗಿತ್ತು.
ಶುಕ್ರವಾರ ಏಕಾಏಕಿ ಒಂದೇ ದಿನದಲ್ಲಿ ಹುಚ್ಚು ನಾಯಿಯೊಂದು ರಸ್ತೆಗಿಳಿದು, ದಾಳಿ ಮಾಡಿದ್ದು, ಘಟನೆಯಿಂದಾಗಿ ನಾಗರಿಕರಿಂದ ನಗರಸಭೆ ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದರು. ಹುಚ್ಚುನಾಯಿ ದಾಳಿಯಿಂದ ತಕ್ಷಣವೇ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು, ಇಂದು ಶನಿವಾರ ಧೀಡಿರನೇ ತಮ್ಮ ಸಿಬ್ಬಂದಿಗಳೊಂದಿಗೆ ರಸ್ತೆಗಿಳಿದು ಹುಚ್ಚು ನಾಯಿ ಸೇರಿದಂತೆ ಇತರೆ ನಾಯಿಗಳ ಬಂಧನಕ್ಕೆ ಮುಂದಾಗಿರುವುದು, ನಾಗರಿಕರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರಾ ದರೂ, ನಗರಸಭೆ ಆಡಳಿತ ಕೇವಲ ಆರಂಭ ಸೂರತ್ವ ತೋರಿಸಿ,ಕೈ ಚೆಲ್ಲಿ ಕುಳಿತುಕೊಳ್ಳಬಾರದು, ಮುಂದೆ ಹೀಗಾಗದಂತೆ ಗಂಭೀರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾಯಿಗಳ ಬಂಧನ:- ಇಂದು ಶನಿವಾರ ಬೆಳ್ಳಂ ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಬಂಧನ ತಜ್ಞರೊಂದಿಗೆ, ಪೌರಾಯುಕ್ತ ಫಕ್ಕೀರ್ಪ ಇಂಗಳಗಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ ಕೊಡಬಾಳ, ಹಿರಿಯ ಆರೋಗ್ಯ ನೀರೀಕ್ಷಕರಾದ ಮಧುರಾಜ ಕಂಬಳಿ, ರಾಘವೇಂದ್ರ ಗಾವಡೆ, ಸೂಪರ್ವೈಸರ್ ನಿಂಗಪ್ಪ, ಎಲ್ಲಪ್ಪ, ನಾಗಪ್ಪ ಮತ್ತು ಪೌರ ಕಾರ್ಮಿಕರಾದ ಹನುಮಂತಪ್ಪ, ಮಂಜುನಾಥ, ಚಂದ್ರು, ಕೋಟೆಪ್ಪ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 