ಬೋಟ್ ರೋಬೋಗೆ ಶಾಸಕ ಜೆ.ಎನ್. ಗಣೇಶ್ ಫಿದಾ : ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ
MLA J.N. Ganesh Fida for Bot Robot: Appreciation for students' achievement
ಕಂಪ್ಲಿ 13: ವಿದ್ಯಾರ್ಥಿಗಳು ಶಿಕ್ಷಣ ಹಂತದಲ್ಲಿ ವಿವಿಧ ಅವಿಸ್ಕಾರದ ಕೌಶಲ್ಯಗಳನ್ನು ಹೊಂದಿದಾಗ ಮಾತ್ರ ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದಲ್ಲಿರುವ ಶ್ರೀವಿದ್ಯಾಸಾಗರ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 23ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ವಿಬೋಟ್-2026 ಎಂಬ ಸಂವಾದಾತ್ಮಕ ರೋಬೋಟ್ ಅನ್ನು ಲೋಕಾರೆ್ಣಗೊಳಿಸಿದ ನಂತರ ಅತೀವ ಸಂತಸ ಮತ್ತು ಕುತೂಹಲ ವ್ಯಕ್ತಪಡಿಸಿ ಮಾತನಾಡಿ, ವಿದ್ಯಾರ್ಥಿಗಳು ನಾನಾ ಪ್ರತಿಭೆಗಳನ್ನು ಒಳಗೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೊಸತನವನ್ನು ಹೊರಹಾಕುವ ಮೂಲಕ ಸಾಧನೆ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶಾಲೆಯ ಕಂಪ್ಯೂಟರ್ ಲ್ಯಾಬ್‌ನಲ್ಲಿದ್ದ ಬಿಡಿಭಾಗಗಳನ್ನು ಬಳಸಿಕೊಂಡು ಕೇವಲ 3000 ರೂಪಾಯಿಗಳ ಅತ್ಯಲ್ಪ ವೆಚ್ಚದಲ್ಲಿ ನಿರ್ಮಿಸಲಾಗಿದೆ. 9ನೇ ತರಗತಿಯ ಎಂಟು ವಿದ್ಯಾರ್ಥಿಗಳ ತಂಡವು ಕೇವಲ 10 ದಿನಗಳ ಅವಧಿಯಲ್ಲಿ ಹಗಲಿರುಳು ಶ್ರಮಿಸಿ ಈ ತಾಂತ್ರಿಕ ವಿಸ್ಮಯವನ್ನು ರೂಪಿಸಿರುವುದು ಹೆಮ್ಮೆಯಾಗಿದೆ ಎಂದರು.
ತದನಂತರ ಶಾಸಕ ಗಣೇಶ ಅವರು ರೋಬೋಟ್‌ನೊಂದಿಗೆ ನೇರ ಸಂವಾದ ನಡೆಸಿದರು. ಅವರು ಕೇಳಿದ ಹಲವು ಪ್ರಶ್ನೆಗಳಿಗೆ ವಿಬೋಟ್ ಅತ್ಯಂತ ಚುರುಕಾಗಿ ಉತ್ತರಿಸಿತು. ವಿದ್ಯಾರ್ಥಿಗಳ ಈ ನೂತನ ಸಂಶೋಧನೆಯನ್ನು ಕಂಡು ಶಾಸಕರು ಬೆರಗಾದರಲ್ಲದೆ, ತುಂಬು ಹೃದಯದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ನವಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್, ಜೆಸ್ಕಾಂ ಎಇಇ ಕೆ.ಶ್ರೀನಿವಾಸ ಪ್ರಸಾದ್, ಶ್ರೀವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಚಾರ್ಯ ಸಾಯಿ ಕಿಶೋರ್ ಪಾಲೇಟಿ, ನವಭಾರತ ವಿದ್ಯಾವರ್ಧಕ ಸಂಘದ ನಿರ್ದೇಶಕಿ ರೋಹಿಣಿ ಪೋಟೊರಿ, ವರ್ತಕ ಟಿ.ಕೊಟ್ರೇಶ್, ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಸಿ.ಆರ್.ಹನುಮಂತ, ಕೆ.ಎಸ್.ಚಾಂದ್‌ಬಾಷಾ, ಕೆ.ಷಣ್ಮುಕಪ್ಪ, ಹಬೀಬ್ ರೆಹಮಾನ್ ಸೇರಿ ಇತರರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 