ನಾಟಕೀಯ ರಾಜಕಾರಣ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ: ವಿರುಪಾಕ್ಷಯ್ಯ ಹಿರೇಮಠ

ನಾಟಕೀಯ ರಾಜಕಾರಣ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ: ವಿರುಪಾಕ್ಷಯ್ಯ ಹಿರೇಮಠ Leave dramatic politics and respond to farmers' problems: Virupakshayya Hiremath

ನಾಟಕೀಯ ರಾಜಕಾರಣ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ: ವಿರುಪಾಕ್ಷಯ್ಯ ಹಿರೇಮಠ

ಬೀಳಗಿ, 02 : ಬೆಳೆಗಳಿಗೆ ಯೂರಿಯಾ ರಸ ಗೊಬ್ಬರ ಕೊರತೆ ಇದ್ದು ಅದನ್ನು ಪೂರೈಸಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರ ರಾಜಕೀಯ ಮಾಡುತ್ತ ಕಾಲ ಹರಣ ಮಾಡುತ್ತಿದ್ದು, ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ಅವಶ್ಯವಿರುವಷ್ಟು ಯೂರಿಯಾ ರಸಗೊಬ್ಬರ ಪೂರೈಕೆ ಮಾಡಿದ್ದೆವೆ  ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂರಿಯಾ ರಸಗೊಬ್ಬರ ಸರಬರಾಜು ಮಾಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಹಲವು ದಿನಗಳು ಕಳೆದರೂ ಇನ್ನೂವರೆಗೂ ಪೂರೈಕೆ ಮಾಡುತ್ತಿಲ್ಲ ಎಂದು ಅವರು ಹೇಳುತ್ತಾರೆ ಕೃಷಿ ಸಚಿವ ಚಲುವರಾಯಸ್ವಾಮಿ ಅಗತ್ಯ ರಸಗೊಬ್ಬರದ ದಸ್ತಾನು ಇದೆ ಎಂದು ಸಬೂಬು ಹೇಳುತ್ತಾರೆ, ಆದರೆ ಯಾರ ಮಾತು ಸತ್ಯ ಯಾರ ಮಾತು ಸುಳ್ಳು ಎನ್ನುವದು ತಿಳಿಯದಾಗಿದ್ದು ರೈತರ ಪರಸ್ಥೀತಿ ಗಂಡ ಹೆಂಡರ ಜಗಳದಲ್ಲಿ ಕೂಸು ಗಾಸಿಯಾದಂತೆಯಾಗಿದ್ದು ತಕ್ಷಣ ಕೇಂದ್ರ ಹಾಗೂ ರಾಜ್ಯ ಸರಕಾರ ನಾಟಕೀಯ ರಾಜಕಾರಣ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ ರಸಗೊಬ್ಬರ ಪೂರೈಸಿ ಅವರ ಕಷ್ಟ ಪರಿಹರಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಒತ್ತಾಯಿಸಿದ್ದಾರೆ.ಅವರು ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗಿರುವದರಿಂದ ವಿವಿಧ ಮುಂಗಾರು  ಫಸಲುಗಳಾದ ಜೋಳ, ಸಜ್ಜೆ, ಹೆಸರು, ಗೋವಿನಜೋಳ ಸೂರ್ಯಕಾಂತಿ ಚೆನ್ನಾಗಿ ಬಂದಿರುವದರಿಂದ ಅವುಗಳಿಗೆ ಯೂರಿಯಾ ರಸಗೊಬ್ಬರ ಅವಶ್ಯವಿದ್ದು, ರೈತರು ಹಲವು ದಿನಗಳಿಂದ ರಸಗೊಬ್ಬರಕ್ಕಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ರಸಗೊಬ್ಬರ ಕೇಂದ್ರಗಳಲ್ಲಿ ಯೂರಿಯಾ ರಸ ಗೊಬ್ಬರ ಕೇಳಿದರೇ ಅಂದು ಬರುತ್ತದೆ ಇಂದು ಬರುತ್ತದೆ ಎಂದು ರೈತರನ್ನು ದಿನ ನಿತ್ಯ ಅಲೆದಾಡಿಸುತ್ತಿದ್ದು, ಬೆಳೆಗಳು ಗೊಬ್ಬರ ಹಾಕದೇ ಇರುವದರಿಂದ ಹಾಳಾಗುತ್ತಿದ್ದು ರೈತರ ಬೆಳೆಗಳನ್ನು ಬೆಳೆಯುವ ಸಲುವಾಗಿ ಹಾಕಿದ ಹಣ ಸಹ ಮರಳಿ ಬರುತ್ತದೆ ಇಲ್ಲವೂ ಎಂದು ಚಿಂತಾಕ್ರಾಂತರಾಗಿದ್ದಾರೆ ಕೃಷಿ ಇಲಾಖೆಯವರನ್ನು ಕೇಳಿದರೆ ನಮ್ಮ ಜಿಲ್ಕೆಯಲ್ಲಿ ಮಾತ್ರ ತೊಂದರೆಯಾಗಿಲ್ಲ ರಾಜ್ಯದಲ್ಲಿ ಆಗಿದೆ ಎಂದು ಬೇಜಾವ್ದಾರಿ ಉತ್ತರ ನೀಡುತ್ತಾರೆ ಕೆಲವು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಅವರು ಕರೆಯನ್ನು ಸ್ವೀಕರಿಸುವದಿಲ್ಲ ಎಂದರು. 

ನಕಲಿ ಯೂರಿಯಾ ರಸಗೊಬ್ಬರ ಕಳಪೆ ಬೀಜಗಳ ಪೂರೈಕೆ ಮಾಡುವ ಜಾಲವನ್ನು ಪತ್ತೆ ಹಚ್ಚಲು ಸರಕಾರಕ್ಕೆ ವಿನಂತಿಸಿಕೊಂಡರು ಪ್ರಯೋಜನವಿಲ್ಲವಾಗಿದೆ, ತಕ್ಷಣ ಜಾಲ ಪತ್ತೆ ಹಚ್ಚಿ ಶಿಸ್ತು ಕ್ರಮ ಜರುಗಿಸದಿದ್ದರೆ ಹಾಗೂ ಯೂರಿಯಾ ರಸಗೊಬ್ಬರವನ್ನು ಒಂದು ವಾರದೊಳಗೆ ಪೂರೈಕೆ ಮಾಡದಿದ್ದರೆ ಭಾರತೀಯ ಕಿಸಾನ್ ಸಂಘ ಉಗ್ರ ಹೋರಾಟ ಮಾಡಬೇಕಾಗುತ್ತದೆ ವಿರುಪಾಕ್ಷಯ್ಯ ಪ.ಹಿರೇಮಠ ಜಿಲ್ಲಾಧ್ಯಕ್ಷರು ಭಾರತೀಯ ಕಿಸಾನ್ ಸಂಘ ಬಾಗಲಕೋಟೆ ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಬ್ಬರಾಯಗೌಡ ಪಾಟೀಲ, ಕುಮಾರ ಯಡಹಳ್ಳಿ  ಇದ್ದರು.