ಕಲಾಪ ಬಹಿಷ್ಕರಿಸಿ ರೈತ ಹೋರಾಟಕ್ಕೆ ನ್ಯಾಯವಾದಿಗಳ ಬೆಂಬಲ
Lawyers support farmers' struggle by boycotting proceedings
ಇಂಡಿ 05: ತಾಲ್ಲೂಕಿನ ಹೃದಯ ಭಾಗದಲ್ಲಿರುವ ಶ್ರೀ ಬಸವೇಶ್ವರ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಹಸಿರು ಸೇನೆ ವತಿಯಿಂದ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಆಗುವರಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದೆ.ಈ ಹೋರಾಟಕ್ಕೆ ಬೆಂಬಲ ಸೂಚಿಸಿದ ಇಂಡಿ ತಾಲೂಕು ನ್ಯಾಯವಾದಿ ಸಂಘದ ವತಿಯಿಂದ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಇಂಡಿ ಕೊರ್ಟ್ ಆವರಣದಿಂದ ರೈತ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗೂತ್ತಾ ಶ್ರೀ ಬಸವೇಶ್ವರ ವೃತ್ತದ ಬಳಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸಿದ್ದಣ್ಣ ಬೂದಿಹಾಳ ಅವರು ರೈತರು ಮಾಡುತ್ತಿರುವ ಹೋರಾಟ ನ್ಯಾಯಯುತವಾಗಿ ಈ ಹೋರಾಟಕ್ಕೆ ನಮ್ಮ ಇಂಡಿ ತಾಲ್ಲೂಕಿನ ಎಲ್ಲಾ ನ್ಯಾಯವಾದಿಗಳ ಸಂಪೂರ್ಣ ಬೆಂಬಲ ಇದೆ, ನೀವು ನಿಮಗೆ ನ್ಯಾಯ ಸಿಗುವರಿಗೆ ನಾವು ರೈತರ ಪರವಾಗಿ ಇರುತ್ತೆವೆ, ಈ ಹೋರಾಟದಲ್ಲಿ ರೈತರ ಮೇಲೆ ಏನಾದರೂ ಕೇಸ್ ದಾಖಲಾದರೆ ಆ ಕೇಸನ್ನು ಉಚಿತವಾಗಿ ಕೋರ್ಟ್ ನಲ್ಲಿ ವಾದ ಮಾಡಿ ರೈತರಿಗೆ ನ್ಯಾಯ ಕೊಡುಸುತ್ತೆವೆ ಎಂದು ಹೇಳಿದರು ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಮ್ ಎಮ್ ಬಿರಾದಾರ ಎನ್ ಕೆ ನಾಡಪುರೋಹಿತ ಎಸ್ ಎಸ್ ರೇಬಿನಾಳ ಎಸ್ ಎಲ್ ನಿಂಬರಗಿಮಠ ಎ ಜೆ ಧನಶೇಟ್ಟಿ ಡಿ ಜಿ ಜೊತಗೊಂಡ ಎಸ್ ಆರ್ ಮುಜಗೊಂಡ ಬಿ ಬಿ ಬಿರಾದಾರ ಎಸ್ ಆರ್ ಬಿರಾದಾರ ವಾಯ್ ಎಸ್ ಪೂಜಾರಿ ಎಂ ಎಸ್ ಬೋಸಗಿ ಎಸ್ ಕೆ ರಾಠೋಡ ಎಮ್ ಎಸ್ ಪಾಟೀಲ ಜಿ ಎಸ್ ಪಾಟೀಲ ಪಿ ಬಿ ಪಾಟೀಲ ಎ ಎ ಗಜಾಕೋಶ ಜೆ ಬಿ ಬೇನೂರ ಟಿ ವಾಯ್ ಮೆಂಡೇಗಾರ ಎಂ ಜಿ ಗಾಯಕವಾಡ ಅನೀಲ ಜೋಶಿ ರಮೇಶ್ ಕೊಳಿ ವಿ ಎಸ್ ಚಲವಾದಿ ಎಸ್ ಕೆ ತಮ್ಮಶೇಟ್ಟಿ ಎಮ್ ಎಸ್ ತೇಲಿ ಎ ಎಸ್ ಕೊಟ್ಟಲಿಗಿ ಎಸ್ ಬಿ ಗಿಡಗಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 