ಕೋಳಿಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಮಕ್ಕಳಲ್ಲಿ ಜ್ಞಾನದ ಹಸಿವು ಹೆಚ್ಚಿಸಿ, ಸಂಸ್ಕಾರ ಬೆಳೆಸಿ

ಕೋಳಿಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಮಕ್ಕಳಲ್ಲಿ ಜ್ಞಾನದ ಹಸಿವು ಹೆಚ್ಚಿಸಿ, ಸಂಸ್ಕಾರ ಬೆಳೆಸಿ Kozhigudda cluster level learning festival increases children's hunger for knowledge and cultivates


ಹಾರೂಗೇರಿ, 16 : ಮಕ್ಕಳಲ್ಲಿ ಕೇವಲ ಅಂಕ ಗಳಿಸುವ ಸ್ಪರ್ಧೆ ಏರ​‍್ಡದೇ, ಜ್ಞಾನದ ಹಸಿವು ಹೆಚ್ಚಿಸುವ ಕೆಲಸವಾಗಬೇಕು. ಕಲಿಕಾ ಹಬ್ಬವು ಮಗುವಿನ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಸಂಸ್ಕಾರವನ್ನು ಬೆಳೆಸುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎಸ್‌.ಎಮ್‌.ಶಿಂಗೆ ಹೇಳಿದರು. 

  ಸಮೀಪದ ಬಡಬ್ಯಾಕೂಡ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೋಳಿಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. 

  ವಿದ್ಯಾರ್ಥಿಗಳಿಗೆ ಆನಂದದಾಯಕ ರೀತಿಯಲ್ಲಿ ಶಿಕ್ಷಣ, ಕಲಿಕೆಯ ಕೌಶಲಗಳನ್ನು ಪರಿಚಯಿಸಿ, ಅವರಲ್ಲಿ ಸೃಜನಶೀಲತೆ ಮತ್ತು ಸಹಯೋಗವನ್ನು ಬೆಳೆಸುವುದು ಕಲಿಕಾ ಹಬ್ಬದ ಉದ್ದೇಶ. ಮಕ್ಕಳಲ್ಲಿ ಕಲಿಕೆಯ ಕುತೂಹಲ, ಆಸಕ್ತಿ, ಅಭಿರುಚಿಯನ್ನು ಶಿಕ್ಷಕರು ಬೆಳೆಸಬೇಕು. ಪಠ್ಯ ವಿಷಯಗಳ ಕಲಿಕೆಯ ಜೊತೆಗೆ ಪಠ್ಯೇತರ ವಿಷಯಗಳಾದ ಸಾಹಿತ್ಯ, ಚಿತ್ರಕಲೆ ಸೇರಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಚಿಮ್ಮಿಸಬೇಕೆಂದು ಶಿಂಗೆ ಹೇಳಿದರು. 

  ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಸದಸ್ಯ ಆನಂದಗೌಡ ಪಾಟೀಲ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಂದ ಕಲಿಕಾ ಚಟುವಟಿಕೆಗಳನ್ನು ಮಾಡಿಸುವುದರಿಂದ ಮಕ್ಕಳ ಓದಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುವುದು ಎಂದರು. 

  ಈವೇಳೆ ನಾನಾ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್‌ಡಿಎಮ್‌ಸಿ ಅಧ್ಯಕ್ಷ ಹಾಲಪ್ಪ ಜಾಲಿಹಾಳ, ಮುಖ್ಯೋಪಾಧ್ಯಾಯರಾದ ಎಸ್‌.ಎನ್‌.ಹೂವನ್ನವರ, ಸಿ.ಬಿ.ಮುಂಡರಗಿ, ಎಲ್‌.ಎನ್‌.ಜಂಜಾಳಿ, ಜಿ.ಟಿ.ಪಾಟೀಲ, ಎಸ್‌.ಎಮ್‌.ಹೊಸಪೇಟಿ, ಜೆ.ಬಿ.ಜಮಾದಾರ, ಎಸ್‌.ಎಸ್‌.ಶೇಡಬಾಳ, ಎ.ಎಮ್‌.ಚೌಗಲಲಾ, ಅಕ್ಷತಾ ಕಾಂಬಳೆ ಹಾಗೂ ಕೋಳಿಗುಡ್ಡ ಕ್ಲಸ್ಟರ್‌ನ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಿ.ಎಸ್‌.ಬಾಳಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಎಮ್‌.ಡಿ.ಬಡಿಗೇರ ವಂದಿಸಿದರು.