ಚಳಿಗಾಳಿಯಿಂದ ಶರೀರವನ್ನು ಆದಷ್ಟು ಬೆಚ್ಚಗಿಟ್ಟುಕೊಳ್ಳಿ: ಡಾ. ವಿರೇಂದ್ರ ಅಷ್ಟಗಿ ಸಲಹೆ

ಚಳಿಗಾಳಿಯಿಂದ ಶರೀರವನ್ನು ಆದಷ್ಟು ಬೆಚ್ಚಗಿಟ್ಟುಕೊಳ್ಳಿ: ಡಾ. ವಿರೇಂದ್ರ ಅಷ್ಟಗಿ ಸಲಹೆ Keep your body warm from the cold: Dr. Virendra Ashtagi's advice


ಬೆಳಗಾವಿ 10: ಚಳಿಗಾಳಿಯಿಂದ ಶರೀರವನ್ನು ಆದಷ್ಟು ಬೆಚ್ಚಗಿಟ್ಟುಕೊಳ್ಳಿ, ಆಹಾರವನ್ನು ಬಿಸಿ ಇದ್ದಾಗಲೇ ಸೇವಿಸಿ, ಬಿಸಿ ನೀರನ್ನು ಕುಡಿಯಿರಿ ಒಂದು ವೇಳೆ ಚಳಿ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಕಾಣಿ ಎಂದು ಕೆ ಎಲ್‌.ಇ ಶತಮಾನೋತ್ಸವ ಚಾರೀಟೆಬಲ್ ಆಸ್ಪತ್ರೆಯ ಹೆಸರಾಂತ ಯುವ ವೈದ್ಯರಾದ  ಡಾ. ವಿರೇಂದ್ರ ಅಷ್ಟಗಿ ಮಾತನಾಡುತ್ತಿದ್ದರು.  ಅವರು ಇಂದು ಬೆಳಗಾವಿ ನಗರದ  ಅನಗೋಳನ ದೊಡ್ಡಬಸ್ತಿಯ ಆವರನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚಿನ ಹವಾಮಾನವರದಿಗಳ ಪ್ರಕಾರ ಈ ಚಳಿಗಾಳಿಯು ಇನ್ನಷ್ಟು ದಿನ ಮುಂದುವರೆಯಲಿದ್ದು ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ ಎಂದು ತಿಳುವಳಿಕೆ ನೀಡಿದರು.  

ಶಿಬಿರದಲ್ಲಿ  ಆಸ್ಪತ್ರೆಯ ಕಾರ್ಯನಿರ್ವಹನಾಧಿಕಾರಿ  ಶ್ರೀ.ಪ್ರಶಾಂತ ದೇಸಾಯಿ ಅವರು ಶಿಬಿರದ ಅಂಗವಾಗಿದ್ದ ಆರೋಗ್ಯ ದಾಸೋಹ ಕಾರ್ಡಬಗ್ಗೆ ಮಾತನಾಡುತ್ತ ನಮ್ಮ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ಆರೊಗ್ಯ ದಾಸೋಹವೇಂಬ ವಿನೂತನ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಕಾರ್ಡನಲ್ಲಿ ನೀವು ನೋಂದಾಯಿಸಿಕೊಂಡರೆ ನೀವು ನಮ್ಮ ಆಸ್ಪತ್ರೆಗೆ ಬಂದಾಗ ನಿಮಗೆ ನೋಂದಣಿ ಶುಲ್ಕವಿರುವದಿಲ್ಲ, ವೈದ್ಯರ ಸಂದರ್ಶನ ಸಂಪೂರ್ಣ ಉಚಿತವಾಗಿರುತ್ತದೆ. ರಕ್ತ ಮೂತ್ರ ಪರೀಕ್ಷೆಗಳ ಮೇಲೆ, ಎಕ್ಸ-ರೇ ಹಾಘೂ ಸೋನೊಗ್ರಾಫಿಗಳ ಮೇಲೆ ಶೇಕಡಾ 20 ರಷ್ಟು ರಿಯಾಯತಿ ಇರುತ್ತದೆ. ವಿಶೇಷವೆಂಭಂತೆ ಈ ಕಾರ್ಡನ್ನು ಹೊಂದಿದವರಿಗೆ ಯಾವುದೇ ಚಿಕಿತ್ಸೆಗಳ ಮೇಲೆ ಶೇಕಡಾ 10ಷ್ಟು ರಿಯಾಯತಿ ನೀಡಲಾಗುತ್ತಿದೆ. ಇದು ನಿಮ್ಮ ನೋಂದಣಿ ದಿನಾಂಕದಿಂದ ಒಂದು ವರ್ಷದ ಅವಧಿಯನ್ನು ಹೊಂದಿದೆ. ಇದು ಸಂಪೂರ್ಣವಾಗಿ ಕಾಗದ ರಹಿತವಾಗಿದೆ. ಇದನ್ನು ನೋಂದಾಯಿಸಿಕೊಳ್ಳಲು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಈ-ಮೇಲ್ ವಿಳಾಸದ ಅಗತ್ಯ ಮಾತ್ರವೇ ಇರುತ್ತದೆ. ಎಂದು ಆರೋಗ್ಯ ದಾಸೋಹ ನೋಂದಣಿ ಬಗ್ಗೆ ತಿಳುವಳಿಕೆ ನೀಡಿದರು.    

ಈ ಶಿಬಿರದಲ್ಲಿ ಸುಮಾರು 135 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಅದರಲ್ಲಿ 42  ಜನರಿಗ ಜನರಲ್ ಮೆಡಿಸಿನ ವಿಭಾಗದಲ್ಲಿ ತಪಾಸಣೆ ಮಾಡಲಾಗಿ ಅವರಲ್ಲಿ 13 ಜನರಿಗೆ ರಕ್ತದೊತ್ತಡ ಹಾಗೂ ಮಧುಮೇಹದ ಸಮಸ್ಯೆಗಳಿರುವದು ತಿಳಿದುಬಂದಿತು,ಎಲುಬು ಕೀಲು ವೈದ್ಯರು 25 ಜನರಿಗೆ ತಪಾಸಣೆ ಮಾಡಲಾಗಿ ಅವರಲ್ಲಿ 7 ಜನರಿಗೆ ಸಂಧಿವಾತ ಹಾಗೂ ಮತ್ತಿತರೆ ಎಲುಬು ಕೀಲು ಸಮಸ್ಯೆಗಳಿರುವದು ತಿಳಿದುಬಂದಿತು, 8 ಜನ ಮಕ್ಕಳಿಗೆ ಮಕ್ಕಳ ವೈದ್ಯರು ತಪಾಸಣೆ ಮಾಡಿದರು, ಭೌತಿಕ ಚಿಕಿತ್ಸಾ ವೈದ್ಯರು 18 ಜನರಿಗೆ ಭೌತಿಕ ಚಿಕಿತ್ಸೆಯನ್ನು ನೀಡಿದರು, ಕಣ್ಣಿನ ವೈದ್ಯರು 36 ಜನರಿಗೆ ತಪಾಸಣೆ ಮಾಡಿ ಅವರಿಗೆ  ವಿವಿಧ ಆರೋಗ್ಯ ಸಮಸ್ಯೆಗಳಿರುವದು ತಿಳಿದು ಬಂದಿತು. ಈ ಎಲ್ಲ ಜನರಿಗೆ ಕೆ ಎಲ್ ಇ ಶತಮಾನೋತ್ಸವ ಚಆರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ ಕಂಬಾರ  ಅವರು ಆಸ್ಪತ್ರೆಯ ಕಡಿಮೆ ದರದ ಸೇವೆಗಳನ್ನು ಉಪಯೋಗಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.  ಶಿಭಿರದಲ್ಲಿ ಆಸ್ಪತ್ರೆಯ ಜನಸಂಪರ್ಕಾಧಿಕಾರಿಗಳಾದ ಸಾಗರ ಅಕನೋಜಿ, ಗಿರಿಶ ಇಟಗಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಬಾಗವಹಿಸಿದ್ದರು. ಅನಗೋಳ ಹಾಗೂ ಸುತ್ತಮುತ್ತಲ ನಾಗರಿಕರು ಶಿಬಿರದ ಉಪಯೋಗ ಪಡೆದುಕೊಂಡರು.