ಭುವನೇಶ್ವರಿ ತಾಯಿಯ ಜ್ಯೋತಿ ಸ್ವಾಗತಿಸಿದ ಕರವೇತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ
Karave Taluk President C.D. Rajashekar welcomed Bhuvaneshwari's mother's Jyoti
ಕಂಪ್ಲಿ 31: ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಹಂಪಿಯಿಂದ ಕಂಪ್ಲಿಗೆ ಆಗಮಿಸಿದ ಭುವನೇಶ್ವರಿ ತಾಯಿಯ ಜ್ಯೋತಿಯನ್ನು ಅದ್ಧೂರಿಯಾಗಿ ಶುಭ ಶುಕ್ರವಾರದಂದು ಸ್ವಾಗತಿಸುವ ಮೂಲಕ ಬರ ಮಾಡಿಕೊಳ್ಳಲಾಯಿತು.ಕನ್ನಡ ರಾಜ್ಯೋತ್ಸವ ಹಿನ್ನಲೆ ಒಂದು ದಿನದ ಮುಂಚಿತವಾಗಿ ವಿಶ್ವವಿಖ್ಯಾತ ಹಂಪಿಯ ವಿರುಪಾಕ್ಷ ದೇವಸ್ಥಾನದ ಸನ್ನಿದಾನದಲ್ಲಿರುವ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಕನ್ನಡಾಂಬೆಯ ಜ್ಯೋತಿಯಾತ್ರೆಯು ಬುಕ್ಕಸಾಗರ, ರಾಮಸಾಗರ ಮೂಲಕ ಕಂಪ್ಲಿಗೆ ಸಂಜೆ ಒತ್ತಿಗೆ ಆಗಮಿಸಿದ ಹಿನ್ನಲೆ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ಕಂಪ್ಲಿ ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ನೇತೃತ್ವದಲ್ಲಿ ಪದಾಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿ, ನಂತರ ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಕೊಟ್ಟಾಲ್ ರಸ್ತೆ ಮೂಲಕ ಸಂಚರಿಸಿ, ಎಪಿಎಂಸಿ ಬಳಿಯಲ್ಲಿ ಬೀಳ್ಕೊಡುವ ಮೂಲಕ ಕುರುಗೋಡು ಕಡೆಗೆ ತೆರಳಲು ಅನುವು ಮಾಡಿಕೊಟ್ಟರು.
ನಂತರ ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ಮಾತನಾಡಿ, ಸತತ 20 ವರ್ಷದಿಂದ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಹಂಪಿಯಿಂದ ತಾಯಿ ಭುವನೇಶ್ವರಿಯ ದಿವ್ಯ ಜ್ಯೋತಿಯಾತ್ರೆ ಬರಮಾಡಿಕೊಂಡು, ನಂತರ ಕುರುಗೋಡು ಮೂಲಕ ಬಳ್ಳಾರಿಗೆ ತೆರಳಿ, ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆಯೇ ಹಂಪಿಯಿಂದ ಆಗಮಿಸಿದ ಜ್ಯೋತಿಯನ್ನು ಕಂಪ್ಲಿಯಲ್ಲಿ ಸ್ವಾಗತಿಸಿ, ನಂತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಬೀಳ್ಕೊಡಲಾಯಿತು. ನಾಡಿನಲ್ಲಿ ಸಮೃದ್ಧ ಮಳೆ, ಬೆಳೆಯಾಗಲೆಂದು ಹಾಗೂ ನೆಲ, ಜಲ, ಭಾಷೆ ರಕ್ಷಣೆಗೆ ನಾವೆಲ್ಲರೂ ಕಂಕಣ ಬದ್ಧರಾಗಿದ್ದೇವೆ ನ.1ರಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಶ್ರೀಧರ್ ಶೆಟ್ಟಿ ಬೆಳಗಲ್, ಸಂಘಟನಾ ಕಾರ್ಯದರ್ಶಿ ಗಣೇಶ ದೊಡ್ಡಮನೆ, ಪ್ರ.ಕಾರ್ಯದರ್ಶಿ ಪಿ.ಶಂಭು ಕಾರ್ಯದರ್ಶಿ ಮಂಜುನಾಥ, ತಾ ವಿ.ಘಟಕ ಅಧ್ಯಕ್ಷ ಎಂ.ಎಸ್.ಮುನ್ನಾ, ಪದಾಧಿಕಾರಿಗಳಾದ ರಾಘವೇಂದ್ರ, ಎಂ.ರಂಜೀತ್, ಕೆ. ಶಿವಕುಮಾರ್, ಪದಾಧಿಕಾರಿಗಳಾದ ಕೆ. ಶಿವಕುಮಾರ್ ಮಂಜುನಾಥ, ಪುರುಷೋತ್ತಮ, ಎನ್.ಎಂ.ಪತ್ರಯ್ಯಸ್ವಾಮಿ, ಹರೀಶ, ಪವನ್ ಬೆಳಗಲ್ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 