ಹೊರ ರಾಜ್ಯ ಕನ್ನಡಿಗರ ಅಸ್ಮಿತೆಗೆ ಕನ್ನಡ ಚಿಂತಕರ ಬಳಗ ಹೆಚ್‌ಕೆಪಿಗೆ ಮನವಿ
Kannada thinkers' association appeals to HKP for the identity of Kannadigas living outside the stat
ಹೊರ ರಾಜ್ಯ ಕನ್ನಡಿಗರ ಅಸ್ಮಿತೆಗೆ ಕನ್ನಡ ಚಿಂತಕರ ಬಳಗ ಹೆಚ್‌ಕೆಪಿಗೆ ಮನವಿ
ಬೆಳಗಾವಿ 31 ಃ ಹೊರ ರಾಜ್ಯಗಳಲ್ಲಿ ವಾಸವಾಗಿರುವ ಕನ್ನಡಿಗ ಅಸ್ಮಿತೆಯು ಎದುರಾಗುತ್ತಿದ್ದು, ಅವರು ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಸರ್ಕಾರವು ಅಂಥವರ ನೆರವಿಗೆ ಧಾಮಿಸುವಂತೆ ಆಗ್ರಹಿಸಿ, ಗಡಿ ಉಸ್ತುವಾರಿ ಸಚಿವರಾದ ಹೆಚ್.ಕೆ.ಪಾಟೀಲ ಅವರಿಗೆ ಕನ್ನಡ ಚಿಂತಕರ ಬಳಗವು ಮನವಿಯನ್ನು ಸಲ್ಲಿಸಿದೆ. ಈ ಕುರಿಂತೆ ಮನವಿ ಸಲ್ಲಸಿ ಮಾತನಾಡಿದ ಮಂಜುನಾಥ ವಸ್ತ್ರದ್ ಹಾಗೂ ಡಾ. ಅಡಿವೆಪ್ಪ ಇಟಗಿ ನೆರೆಯ ಮಹಾರಾಷ್ಟ್ರ ಹಾಗು ಆಂದ್ರ ಪ್ರದೇಶಗಳಲ್ಲಿ ವಾಸವಾಗಿರುವ ಭಾಷಾ ಅಲ್ಪ ಸಂಖ್ಯಾತ ಕನ್ನಡಿಗರು ಮಾತೃ ಭಾಷಾ ಶಿಕ್ಷಣ ದಿಂದ ವಂಚಿತರಾಗುತ್ತಿದ್ದು, ಕನ್ನಡವನ್ನು ಉಳಿಸಿ, ಬೆಳಸಿಕೊಳ್ಳುವುದು ಕಷ್ಟವಾಗುತ್ತಿದೆ. ಕಾರಣ ಅಲ್ಲಿನ ಸರ್ಕಾರಗಳು ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಅಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ನಾನಾ ಕಾರಣಗಳ ನೆಪವೊಡ್ಡಿ ಬಂದ್ ಮಾಡಿಸುತ್ತಿವೆ. ಭಾಷಾ ಅಲ್ಪ ಸಂಖ್ಯಾತ ಕನ್ನಡಿಗರ ಮಾತೃಭಾಷಾ ಶಿಕ್ಷಣದ ಹಕ್ಕನ್ನು ಅಲ್ಲಿನ ಸರ್ಕಾರಗಳು ಕಸಿಯುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಸಹ ವರದಿ ಪ್ರಕಟಗೊಂಡಿದೆ, ಇನ್ನೊಂದೆಡೆ ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆಗಳಾಗುತ್ತಿವೆ. ಈ ಹಿಂದೆ ಕೂಡಾ ಅಲ್ಲಿ ಆಪರೇಶನ್ ಬೈನಾಕ್ಲೀನ್ಟ್ ಎಂಬ ಕಾರ್ಯಾಚರಣೆಯ ನೆಪದಲ್ಲಿ ಅಲ್ಲಿನ ಸರ್ಕಾರವೆ ಮುಂದೆ ನಿಂತು ಅಮಾನವೀಯ ರೀತಿಯಿಂದ ಕನ್ನಡ ಕಾರ್ಮಿಕನ್ನು ಒಕ್ಕಲೆಬ್ಬಿಸಿತ್ತು. ಆಗಾಗ ಇಂಥಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕರ್ನಾಟಕ ಸರ್ಕಾರವು ಹೊರನಾಡ ಕನ್ನಡಿಗರ ಹಿತರಕ್ಷಣೆಗೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಗಡಿ ಉಸ್ತುವಾರಿ ಮಂತ್ರಿಗಳಾದ ತಾವು ವಿಶೇಷ ಕಾಳಜಿ ವಹಿಸಬೇಕೆಂದು ಅವರು ಹೆಚ್.ಕೆ.ಪಾಟೀಲ ಅವರಲ್ಲಿ ವಿನಂತಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿನ ಕನ್ನಡ ಮಾಧ್ಯಮ ಶಾಲೆಗಳ ಮೂಲಸೌಕರ್ಯ ಕಲ್ಲಿಸಿ ಅಭಿವೃದ್ಧಿ ಪಡಿಸುವಲ್ಲಿ ತಾವು ತೋರುತ್ತಿರುವ ಕಾಳಜಿಯನ್ನು ಗಡಿ ಕನ್ನಡಿಗರು ತುಂಬಾ ಹೃದಯದಿಂದ ಸ್ವಾಗತಿಸಿದ್ದು, ಆದಷ್ಟು ಬೇಗ ಈ ಬಗ್ಗೆ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ವರದಿಯನ್ನು ಸಿದ್ಧ ಪಡಿಸಿ, ಸಲ್ಲಿಸಿಲಾಗುವದು ಎಂದು ಮಂಜುನಾಥ ವಸ್ತ್ರದ್ ಹೇಳಿದರು. ಕನ್ನಡ ಉಪನ್ಯಾಸಕ ಡಾ. ಅಡಿವೆಪ್ಪ ಇಟಗಿ, ಗ್ರಾ.ಪಂ ಸದಸ್ಯ ಸಂಜಯ ದೇಸಾಯಿ, ಬಸವರಾಜ ಮಠಪತಿ ಇದ್ದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 