ಸೋಮಲಿಂಗ ಗೆಣ್ಣೂರ ಕೃತಿಗಳ ಬಿಡುಗಡೆ ಕಹಿಸತ್ಯ ಹೇಳದ ಕನ್ನಡ ದಲಿತ ಲೇಖಕರು: ಘಂಟಿ ವಿಷಾದ
Kannada Dalit writers who did not tell the bitter truth about the release of Somalinga Gennur's wor
ಸೋಮಲಿಂಗ ಗೆಣ್ಣೂರ ಕೃತಿಗಳ ಬಿಡುಗಡೆ ಕಹಿಸತ್ಯ ಹೇಳದ ಕನ್ನಡ ದಲಿತ ಲೇಖಕರು: ಘಂಟಿ ವಿಷಾದ
ಬಾಗಲಕೋಟೆ 16: ಮರಾಠಿ ಲೇಖಕರು ತಮ್ಮ ಆತ್ಮಕಥೆಗಳಲ್ಲಿ ನಿರ್ಭಿಡೆಯಿಂದ ಹಾಗೂ ವಾಸ್ತವ ಕಹಿಸತ್ಯಗಳನ್ನು ಹೇಳಿದ ಹಾಗೆ ಕನ್ನಡದ ದಲಿತ ಲೇಖಕರಿಗೆ ಸಾಧ್ಯವಾಗಿಲ್ಲ ಎಂದು ಹಿರಿಯ ಲೇಖಕಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ವಿಷಾದ ವ್ಯಕ್ತಪಡಿಸಿದರು.
ನಗರದ ಚರಂತಿಮಠದಲ್ಲಿ ಶಿವಾನುಭವ ಸಮಿತಿ, ಗೆಳೆಯರ ಬಳಗ ಹಾಗೂ ಮೈಸೂರಿನ ಕವಿತಾ ಪ್ರಕಾಶನ ವತಿಯಿಂದ ಆಯೋಜಿಸಿದ್ದ ವಿಜಯಪುರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಹಾಗೂ ಅವರ ಆತ್ಮಕಥೆ ‘ದೇವರಗೆಣ್ಣೂರ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದಲ್ಲಾದ ಓದ್ಯೋಗೀಕರಣ ಪ್ರಭಾವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇರವಾದ ಪ್ರಭಾವದಿಂದ ಮರಾಠಿ ಲೇಖಕರು ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುವ ಹಾಗೆ ಬರೆದರು. ಆದರೆ ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕು ಸಂಪೂರ್ಣವಾಗಿ ಜಮೀನ್ದಾರಿ ಒಳಗೊಂಡಿದ್ದಿಲ್ಲ. ಅಲ್ಲದೆ ಓದ್ಯೋಗೀಕರಣ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ಇದರಿಂದ ತಣ್ಣಗಿರುವ ಅವಮಾನಗಳನ್ನು ತಲ್ಲಣಗಳನ್ನು ಹಾಗೂ ನೋವುಗಳನ್ನು ಹೇಳಿಕೊಳ್ಳುವ ಒತ್ತಡಗಳು ನಮ್ಮ ಕರ್ನಾಟಕ ಲೇಖಕರಿಗೆ ಇಲ್ಲ. ಅಪರೂಪಗಳಿವೆ ನಿಜ ಆದರೆ ಪ್ರಸ್ತುತ ಲೇಖಕರಾದ ಸೋಮಲಿಂಗ ಗೆಣ್ಣೂರ ಅವರು ತಮ್ಮ ಊರಿನ ಹೆಸರಿನ ಮೂಲಕ ತಮ್ಮ ಬದುಕನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಮೂಲತಃ ಲೇಖಕರು ಗಾಂಧಿವಾದ, ಬಸವಣ್ಣನ ಸಿದ್ಧಾಂತ ಕಾರಣಗಳಿಗಾಗಿ ಅವರೊಳಗೆ ಸಾತ್ವಿಕತೆ ಮನೆ ಮಾಡಿಕೊಂಡಿದೆ. ಈ ಸಾತ್ವಿಕತೆಯು ಅವರ ಅತ್ಯಂತ ಬಡತನದ ಭಯಾನಕತೆಯನ್ನು ಬಿಚ್ಚಿಡುವಲ್ಲಿ ಗಾಂಧಿ ಮತ್ತು ಬಸವಣ್ಣ ತಡೆಗೋಡೆಯಾಗಿ ನಿಲ್ಲುತ್ತಾರೆ. ಹೀಗಾಗಿ ಸಂಘರ್ಷಕ್ಕೆ ಇಳಿವ ಮನೋಭಾವ ಅವರದಲ್ಲ ಎಂದು ಅವರು ವಿವರಿಸಿದರು.
ಗೆಣ್ಣೂರ ಅವರಿಗೆ ಅವರ ಅಜ್ಜಿ ಭಿಕ್ಷೆ ಬೇಡಿ ಊಟ ಹಾಕಿದ್ದಾರೆ. ಈ ಅವಮಾನವನ್ನು ಮತ್ತು ಕ್ರೌರ್ಯವನ್ನು ಹಿಡಿದಿಡುವಲ್ಲಿ ಗೆಣ್ಣೂರ ಅವರ ಭಾಷೆ ಸೋತಿದೆ. ಅಂಥ ಪ್ರಸಂಗಗಳನ್ನು ನಮ್ಮ ಸಮಾಜ, ಇವತ್ತಿನ ಅವರ ಸ್ಥಾನಮಾನ, ಅವರ ಮಕ್ಕಳ ಭವಿಷ್ಯ ಈ ಎಲ್ಲ ಕಾರಣಗಳಿಗೆ ಭಿಕ್ಷೆ ಬೇಡಿದ ಅಜ್ಜಿಯ ಅವಮಾನಗಳು ಸ್ವತಃ ಲೇಖಕರು ಬಾವಿಯಲ್ಲಿ ಜಳಕ ಮಾಡುವ ಹೊತ್ತಿನಲ್ಲಿ ಹೊಲೆಯ ಜಳಕ ಮಾಡ್ತಾನೆಂದಾಗ ಭಯ ಕಾಣಿಸಿಕೊಂಡಿದೆ ವಿನಾ ಆಕ್ರೋಶ ಮೂಡಿಲ್ಲ. ಹೀಗಾಗಿ ಅವರ ತಂದೆಯ ತತ್ವಪದಗಳ ಹಾಡುಗಾರಿಕೆಯ ಪ್ರಭಾವದಿಂದಾಗಿ ಅವರು ಸಾತ್ವಿಕರಾಗಿದ್ದಾರೆ ಎಂದು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 