ಪತ್ರಕರ್ತರ ಸಂಘ ನ.9ರಂದು ಚುನಾವಣೆ ವೇಳಾ ಪಟ್ಟಿ ನಿಗದಿ

ಪತ್ರಕರ್ತರ ಸಂಘ ನ.9ರಂದು ಚುನಾವಣೆ  ವೇಳಾ ಪಟ್ಟಿ ನಿಗದಿ Journalists' Association sets election schedule for November 9th


ಹಾವೇರಿ  04: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕಕ್ಕೆ 2025-28ರ ವರೆಗಿನ ಆಡಳಿತಾವಗೆ ನ.9ರಂದು ಚುನಾವಣೆ ನಿಗದಿಯಾಗಿದ್ದು, ಅಂತಿಮ ಹಂತದಲ್ಲಿ ಒಟ್ಟು 30 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪತ್ರಕರ್ತರಾದ ನಾಗರಾಜ ಕುರುವತ್ತೇರ ಹಾಗೂ ಫಕ್ಕೀರಯ್ಯ ಗಣಾಚಾರಿ ಸ್ಪರ್ಧೆ ಮಾಡಿದ್ದಾರೆ. ಅದೇ ರೀತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಿರೇಶ ಮಡ್ಲೂರ ಹಾಗೂ ರವಿ ಹೂಗಾರ ರ್ಸ್ಪಸಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಕೇಶವಮೂರ್ತಿ ಬೇಲೂರ​‍್ಪನವರ,  

ಮಂಜುನಾಥ ಗುಡಿಸಾಗರ, ಸಂತೋಷ ಮಹಾಂತಶೆಟ್ಟರ, ಎಸ್‌.ಆರ್ ನಂದಿಹಳ್ಳಿ ಸ್ಪರ್ಧೆ ಮಾಡಿದ್ದಾರೆ. ಜಿಲ್ಲಾ ಖಜಾಂಚಿ ಸ್ಥಾನಕ್ಕೆ ಬಸವರಾಜ ಮರಳಿಹಳ್ಳಿ ಹಾಗೂ ನಿಂಗಪ್ಪ ಆರೇರ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಪರಸಪ್ಪ ಸತ್ಯಪ್ಪನವರ ಹಾಗೂ ಶಿವಯೋಗಿಸ್ವಾಮಿ ಮಹಾನುಭಾವಿಮಠ ರ್ಸ್ಪಸಿದ್ದಾರೆ. 

ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಪತ್ರಕರ್ತರಾದ ಇಂದುಧರ ಹಳಕಟ್ಟಿ, ಕರಿಯಪ್ಪ ಚೌಡಕ್ಕನವರ, ಕಿರಣ ಮಾಸಣಗಿ, ಗಣೇಶ ಅರ್ಕಾಚಾರಿ, ಗುರುದತ್ತ ಭಟ್, ಗೋಣೆಪ್ಪ ದೀಪಾವಳಿ, ತೇಜಸ್ವಿನಿ ಕಾಶೆಟ್ಟಿ, ಪ್ರಭುಗೌಡ ಪಾಟೀಲ, ಪ್ರಶಾಂತ ಮರೆಮ್ಮನವರ, ಬಸವರಾಜ ಸರೂರ, ಮಡಿವಾಳೆಪ್ಪ ಗಡಾದ, ಮಲ್ಲಿಕಾರ್ಜುನ ಕೆಂಚರೆಡ್ಡಿ, ಮಂಜುನಾಥ ಯರವಿನತಲಿ, ರಾಜೇಂದ್ರಕುಮಾರ ರಿತ್ತಿ, ವೇದಮೂರ್ತಿ ಎಸ್‌.ಟಿ., ಸದಾಶಿವ ಹಿರೇಮಠ, ಸಂಜಯಕುಮಾರ ರಿತ್ತಿ, ಹೊನ್ನಪ್ಪ ಬಾರ್ಕಿ ಸ್ಪರ್ಧೆ ಮಾಡಿ ಕಣದಲ್ಲಿದ್ದಾರೆ 

ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣಾಕಾರಿ ವಿಕ್ರಮ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಹಾವೇರಿಯ ನಿಂಗಪ್ಪ ಚಾವಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ನಾರಾಯಣ ಹೆಗಡೆ, ನಾಗರಾಜ ಮೈದೂರು, ವಿನಾಯಕ ಹುದ್ದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಗಳು ತಿಳಿಸಿದ್ದಾರೆ.