ಶಿಕ್ಷಣ, ಸಂಸ್ಕೃತಿ ಜಿಲ್ಲೆ ಅಭಿವೃದ್ಧಿಗೆ ಜಿದ್ದಿ ಕೊಡುಗೆ ಅಪಾರ - ಬಸನಗೌಡ

ಶಿಕ್ಷಣ, ಸಂಸ್ಕೃತಿ ಜಿಲ್ಲೆ ಅಭಿವೃದ್ಧಿಗೆ ಜಿದ್ದಿ ಕೊಡುಗೆ ಅಪಾರ - ಬಸನಗೌಡ Jiddi's contribution to the development of education, culture district is immense - Basanagowda

  

ವಿಜಯಪುರ 11:  ಶಿಕ್ಷಣ ಸಂಸ್ಕೃತಿ ವಿಷಯ ಆಧಾರಿತ ಶೈಕ್ಷಣಿಕ ಕ್ರಾಂತಿ ಮಾಡುವದರೊಂದಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಜಿದ್ದಿಯವರ ಪಾತ್ರ ಅಮೋಘವಾದದ್ದು ಎಂದು ನಗರ ಶಾಸಕ ಬಸನಗೌಡ ಪಾಟೀಲ    (ಯತ್ನಾಳ) ಹೇಳಿದರು. ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕಾಳಿದಾಸ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಜಿದ್ದಿಯವರು  ಪೂಜಾ ನಿಷ್ಠರು, ಸಾತ್ವಿಕರು ಹಾಗೂ ದೈವಿಭಕ್ತರು ಎಂದು ಹೇಳಿದರು, ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡುವದರೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಪಾಠ ಕಲಿಸಿ ದೇಶದ ನಾಗರೀಕರನ್ನಾಗಿ ಮಾಡಿದ ಸಂಸ್ಥೆಯನ್ನು ಬೆಳೆಸಿಕೊಂಡರು ಈಗ ಅಶೋಕ ಜಿದ್ದಿ ಆಡಳಿತ ಮಂಡಳಿ ಅದನ್ನು ಯಶಸ್ವಿ ರೀತಿಯಲ್ಲಿ ಮುನ್ನೆಡಿಸಿ ಬೆಳಸಿಕೊಳ್ಳಲಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆಯೆಂದು ಭರವಸೆ ನೀಡಿದರು.   

ಜಿದ್ದಿಯವರು ಎಲ್ಲ ಜೊತೆ ಬೆರೆತು ಸ್ನೇಹಮಯಿ  ವ್ಯಕ್ತಿಯಾಗಿರಲು ಸಮಾಜ ದೇಶದ ಬಗ್ಗೆ ಚಿಂತನೆ ಮಾಡುವಲ್ಲಿ ನಿಸ್ಸೀಮರಾಗಿದ್ದರು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುವಲ್ಲಿ ಉತ್ತಮ ಶಿಕ್ಷಣ ರಂಗವನ್ನು ಕಟ್ಟಿ ಬೆಳೆಸಿ ಸಾಧನೆ ಮಾಡಿದರು ಸನಾತನ ಧರ್ಮದ, ತತ್ವಜ್ಞಾನದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ನೀಡಿ ವಿದ್ಯೆಯ ಬೆಲೆ ಏನು ಎಂದು ತೊರಿಸಿಕೊಟ್ಟರು.  ಮೇದುಳು ಒಂದು ಬಿಳಿ ಹಾಳೆ ಇದ್ದಂತೆ ಅದರಲ್ಲಿ ಯಾವ ರಂಗ ಯಾವ ಬಣ್ಣ ಬಿಡಿಸುವರು ಅದು ರಂಗೇರುವದು ಅಂತಹ ಕಲೆಯನ್ನು ಅರಿತು ಜಿದ್ದಿಯವರು ಉತ್ತರ ಕರ್ನಾಟಕದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನಾಗಿ ಈ ಕಾಳಿದಾಸ ಶಿಕ್ಷಣ ಸಂಸ್ಥೆಯನ್ನು ಬೆಳೆಸಿಕೊಂಡು ಬಂದರು ಇದು ಹೀಗೆ ಮುಂದುವರೆಯಲಿ ಇದಕ್ಕೆ ಸಮಾಜದ ಸಹಕಾರ ಸದಾ ಸಿದ್ಧವಾಗಿರುತ್ತದೆ ಎಂದು ಮಾಜಿ ಸಚಿವ ಎಸ್‌. ಕೆ. ಬೆಳ್ಳುಬ್ಬಿ ಹೇಳಿದರು. ಸಂಘ ಪರಿವಾರ ದೇಶದ ಅಭಿವೃದ್ಧಿಯ ಪೂರಕ ಮಂತ್ರವಾಗಿ ಅದನ್ನು ಇಂದಿನ ಮಕ್ಕಳಲ್ಲಿ ಬಿತ್ತರಿಸಿ ಸಂಘ ಪರಿವಾರ  ಬೆಳೆಸಬೇಕೆಂದು ಹೇಳಿದ ಅವರು, ಬಿಜಾಪುರ ಇದು ಬಿಜಾಪುರ ಎನ್ನುವ  ಹಾಡನ್ನು ಹಾಡುವ ಮೂಲಕ ಜಿಲ್ಲೆಯ ಸಾರವನ್ನು ಹೇಳುವ ಹಾಡನ್ನು ಹಾಡಿ ಮನರಂಜಿಸಿದರು. 

ಈ ಸಂಸ್ಥೆಯಲ್ಲಿ ಸರ್ವ ಸಮಾಜದ ವಿದ್ಯಾರ್ಥಿಗಳು ಪಾಠ ಮಾಡುತ್ತಿರುವದು ಒಂದು ವಿಶೇಷ ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠ ಅನ್ನದಾನ ಕ್ಷಣಿಕ ವಿದ್ಯಾದಾನ ಜೀವನಪರ್ಯಂತ ಒಂದು ಸಾಗುವ ಮಾರ್ಗ ಎಂದು ನೇಗಿನಾಳ ಸಿದ್ಧಾರೂಢಮಠದ ಅದ್ವೈತಾನಂದ ಭಾರತಿ ಶ್ರೀಗಳು ಆಶಿರ್ವಚನ ನೀಡಿದರು, ಶಿಕ್ಷಣ ಕ್ಷೇತ್ರಕ್ಕೆ ಜಿದ್ದಿಯವರ ಸೇವೆ ಅವಿಸ್ಮರಣೀಯವಾದುದು ಬಡಮಕ್ಕಳಿಗೆ ಈ ಶಿಕ್ಷಣ ಸಂಸ್ಥೆ ಉಚಿತ ಶಿಕ್ಷಣ ಅನ್ನದಾನ ಮಾಡುವ ಮೂಲಕ ಮಹಾನ್ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.ಹಾಲಹೊಳೆ ಕೃತಿಯ ಗ್ರಂಥದ ಕುರಿತು ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಎಫ್‌. ಟಿ. ಹಳ್ಳಿಕೇರಿ  ಮಾತನಾಡಿ ಈ ಗ್ರಂಥದಲ್ಲಿ 53 ಸಾಧಕರ ವಿಷಯ ಪ್ರಸ್ತಾಪಿಸಲಾಗಿದೆ

ಅವರು ಮಾಡಿದ ಸಾಧನ ಸಮಾಜಕ್ಕೆ ನೀಡಿದ ಕೊಡುಗೆ ಹೇಳಬಯಸುತ್ತದೆ ಇದು ಪಠ್ಯಕ್ರಮದಲ್ಲಿಯೂ ಬರಬೇಕೆಂದು ಅವರು ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಬೇಕೆಂದು ನುಡಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ  ಜರುಗಿತು ಪಾವನ ಸಾನಿಧ್ಯವಹಿಸಿದ ನಿಡುಮಾಮಿಡಿ ಪೀಠದ  ಶ್ರೀ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಜಾತಿ ಶುದ್ಧಿಕರಣವಾಗಬೇಕು ಹೇಳುವದರ ಜೊತೆಗೆ ಕೆಲವು ಘಟನಾವಳಿಗಳನ್ನು ವಿವರಿಸಿ ಹೇಳಿದರು ಮಕ್ಕಳಲ್ಲಿ ದಾರಿತಪ್ಪಿಸುವ ವಿಚಾರ ಹೇಳದೆ  ಸಂಸ್ಕೃತಿಯ ಅರ್ಥಬಿಂಬಿಸುವ ರೀತಿಯಲ್ಲಿ ಚಿಂತನೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ನುಡಿದರು. 

ಆತ್ಮಹತ್ಯೆ ಕೆಟ್ಟವಿಚಾರಕ್ಕೆ ಬಲಿಬಿಳುವ ಮೂಲಕ ಸಮಾಜ ಹೀನಕೃತ್ಯಕ್ಕೆ ಬಂದಿದೆ ಇದು ದುರ್ದೈವ ಎಂದು ಹೇಳಿ ಅಂಕಗಳ ಒತ್ತಡಕ್ಕೆ ಬಲಿ ಹಾಕದೆ ಉತ್ತಮ ಶೈಕ್ಷಣಿಕ ಮಟ್ಟವನ್ನು ಬೆಳೆಸಬೇಕೆಂದು ಅವರು ಹೇಳಿದರು  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಅಶೋಕ ಜಿದ್ದಿಯವರು ವಹಿಸಿದ್ದರು ವೇದಿಕೆ ಮೇಲೆ  ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ,  ಪ್ರೊ ವಿ.ಡಿ. ವಸ್ತ್ರದ, ಡಾಽಽ ಕಂಠೀರವ ಕುಲ್ಲಳಿ, ಆರ್‌. ಎಸ್‌. ವಾಡೇದ, ತಾಜಪೂರ ಪ್ರೌಢಶಾಲೆಯ ಚೇರಮನ್ನರಾದ ಆರ್‌. ಜಿ. ಯರನಾಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಭಾಸ ಎಸ್‌. ಜಿದ್ದಿಯವರು ಉಪಸ್ಥಿತರಿದ್ದರು,  ಪ್ರಾರಂಭದಲ್ಲಿ  ಬಿ. ಆರ್‌. ಬನಸೊಡೆ ಇವರಿಂದ ವಚನ, ಸ್ವಾಗತ ಗೀತೆಯನ್ನು ವಿದ್ಯಾರ್ಥಿಗಳಿಂದ ನಡೆಯಿತು ಕುಮಾರಿ ಅಶ್ವಿನಿ ವಿ. ಕುಲಕರ್ಣಿ ಅವಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು ಪ್ರಾಚಾರ್ಯರ ಕೆ.ಆರ್‌. ಜಾಧವ ಅವರು ಎಲ್ಲರನ್ನು ಸ್ವಾಗತಿಸಿದರು ಜಿ. ಎಚ್‌. ಮರನೂರ ಹಾಗೂ ಎಸ್‌.ಡಿ. ದುರಗಣ್ಣವರ ಕಾರ್ಯಕ್ರಮ ನಿರೂಪಿಸಿದರು ವಂದನಾರೆ​‍್ಣಯನ್ನು  ಎಸ್‌. ಆರ್‌. ಬಿರಾದಾರ ನಡೆಸಿಕೊಟ್ಟರು. 


Sociocultural Harmony Social Responsibility Dharma and Tattvagnana (Philosophy) Sanskrit Education