ಶಾಲೆಗಳಲ್ಲಿ ಪಾಲಕರ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯ: ಅಶೋಕ ವಾರದ
It is a matter of pride that Parents' Day is being celebrated in schools: Ashoka Varada
ವಿಜಯಪುರ 28: ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಶಾಲೆಗಳಲ್ಲಿ ಹಿರಿಯ ಪಾಲಕರ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಅಶೋಕ. ಎಸ್. ವಾರದ ಹೇಳಿದ್ದಾರೆ. ಶುಕ್ರವಾರ ಬಿ.ಎಲ್.ಡಿ.ಇ ಸಂಸ್ಥೆಯ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಪೂರ್ವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಘಟಿಕೋತ್ಸವ ಮತ್ತು ಹಿರಿಯ ಪಾಲಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಯಾಂತ್ರಿಯ ಜಗತ್ತಿನಲ್ಲಿ ಸಂಬಂಧಗಳ ಬೆಸುಗೆ ಮುಖ್ಯವಾಗಿದೆ. ಮಕ್ಕಳು ಅಜ್ಜ, ಅಜ್ಜಿಯರ ತೊಡೆಯ ಮೇಲೆ ಆಟವಾಡುತ್ತ, ಕಥೆ ಕೇಳುತ್ತ, ಹಾಡು ಹೇಳುತ್ತ ಕಾಲ ಕಳೆಯಬೇಕು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ತಂದೆ- ತಾಯಿಯರ ಜೊತೆಯಲ್ಲಿಯೇ ಹಿರಿಯ ಪ್ರೀತಿಯೂ ಸಿಗುತ್ತದೆ. ಈ ದಿಸೆಯಲ್ಲಿ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ಶಾಲೆಗೆ ಹಿರಿಯ ಪಾಲಕರನ್ನು ಆಹ್ವಾನಿಸಿ ನಾನಾ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಬಾಂಧವ್ಯ ಬೆಸೆಯುವ ಅತ್ಯುತ್ತಮ ಪ್ರಯತ್ನವಾಗಿದೆ ಎಂದೆ ಎಂದು ಅವರು ಅವರು ಸಂತಸ ಶ್ಲಾಘಿಸಿದರು. ಇದೇ ವೇಳೆ ಅಜ್ಜ- ಅಜ್ಜಿಯರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನಡೆದ ಹಿರಿಯರಿಗಾಗಿಯೇ ನಾನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇಳಿ ವಯಸ್ಸಿನಲ್ಲಿಯೂ ಹಿರಿಯರು ಮಕ್ಕಳಂತೆ ನಾನಾ ಆಟಗಳಲ್ಲಿ ಪಾಲ್ಗೋಂಡು ಸಂತಸಪಟ್ಟರು.
ಕ್ರೀಡೆಯಲ್ಲಿ ವಿಜೇತರಾದ ಹಿರಿಯರಾದ ಶಂಕರ ಚವ್ಹಾಣ, ಡಾ. ರೇವಪ್ಪ ವಾಗ್ಮೋರೆ, ಭಾರತಿ ಮುಧೋಳ, ಸುಮಂಗಲಾ ಅವರಿಗೆ ಶಾಲೆಯ ಪ್ರಾಚಾರ್ಯ ಡಾ. ಶೈಜು ಕೆ. ನಾಯರ ಬಹುಮಾನ ವಿತರಿಸಿದರು. ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಮಹೇಶ ಪಾಟೀಲ, ಸವಿತಾ ಮಂಗಳವೇಡೆ ಅವರು ಯುಕೆಜಿಯಿಂದ ಒಂದನೇ ತರಗತಿ ಕಾಲಿಡುತ್ತಿರುವ ಮಕ್ಕಳಿಗೆ ಪದವಿ ಪ್ರಧಾನ ಮಾಡಿದರು. ಶಾಲೆಯ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 