ಪ್ರಾಣ ಹೋದರೂ ಪರವಾಗಿಲ್ಲ ರೈತರ ಆಸ್ತಿ ವಕ್ಷ್‌ಗೆ ಹೋಗಲು ಬಿಡುವುದಿಲ್ಲ: ಜಿಗಜಿಣಗಿ
ಪ್ರಾಣ ಹೋದರೂ ಪರವಾಗಿಲ್ಲ ರೈತರ ಆಸ್ತಿ ವಕ್ಷ್‌ಗೆ ಹೋಗಲು ಬಿಡುವುದಿಲ್ಲ: ಜಿಗಜಿಣಗಿ
ಇಂಡಿ 14: ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹಾಗೂ ಸಂಘಟನಾ ಪರ್ವ ಕಾರ್ಯಕ್ರಮನ್ನು ಇಂಡಿ ನಗರದ ಶಂಕರ ಪಾರ್ವತಿ ಮಂಗಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ವಿಜಯಪೂರ ಲೋಕಸಭಾ ಸದಸ್ಯರಾದ ರಮೇಶ ಜಿಗಜಿಣಗಿ ಅವರು ಮಾತನಾಡಿ ಭಾರತೀಯ ಜನತಾ ಪಕ್ಷವು ವಿಶ್ವದಲ್ಲಿ ಅತಿ ದೊಡ್ಡ ಪಕ್ಷವಾಗಿದೆ.ಅತಿ ಹೆಚ್ಚು ಯುವಕರನ್ನು ಹೊಂದಿರುವ ಹಾಗೂ ಸಂಘಟಿತ ರಾಷ್ಟ್ರಯ ಪಕ್ಷವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಜನರನ್ನು ಬಿಜೆಪಿ ಸದಸ್ಯತ್ವವನ್ನು ಮಾಡುವುದರ ಮೂಲಕ ವಿಜಯಪೂರ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಹೊಂದಿರುವ ಮಂಡಲ ಇಂಡಿ ಆಗಬೇಕು, ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಬಿಜೆಪಿ ಮಂಡಲ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಸರ್ಕಾರ ಬಡವರ ಹಾಗೂ ಮಠ ಮಂದಿರಗಳ ಆಸ್ತಿಗಳ ಮೇಲೆ ವಕ್ಘ್ ಹೆಸರು ಸೇರಿಸಿ ಕೊಳ್ಳೆ ಹೊಡಿಯುವ ಹುನ್ನಾರ ಮಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಾನು ಹಾಗೂ ವಿಜಯಪೂರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅನೇಕ ಮಠಾಧೀಶರು ಸೇರಿ ದೊಡ್ಡ ಹೋರಾಟ ಮಾಡಿದ್ದೇವೆ. ಪ್ರಾಣ ಹೋದರು ಪರವಾಗಿಲ್ಲ, ಯಾವ ರೈತರ ಹಾಗೂ ಮಠ ಮಂದಿರಗಳ ಆಸ್ತಿ ವಕ್ಷ್ ಮಂಡಳಿಗೆ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು. ಅರವತ್ತು ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ ಏನು ಮಾಡಿಲ್ಲ, ಆದರೆ ನರೇಂದ್ರ ಮೋದಿಯವರು ಕೇವಲ್ಲ ಹನ್ನೊಂದು ವರ್ಷಗಳಲ್ಲಿ ಇಡೀ ಜಗತ್ತಿಗೆ ವಿಶ್ವ ಗುರುವಾಗುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಪ್ರತಿಬಾರಿಗಳಾದ ಮಳುಸಿದ್ದಗೌಡ ಪಾಟೀಲ, ವಿವೇಕ್ ಡಬ್ಬಿ, ಇಂಡಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಸೇರಿದಂತೆ ಅನೇಕರು ಮಾತನಾಡಿದರು. ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಈರಣ್ಣ ರೇವೂರ, ಶೀಲವಂತ ಉಮರಾಣಿ, ಶ್ರೀಕಾಂತ ದೇವರ,ಅನೀಲ ಜಮಾದಾರ, ರಾಘವೇಂದ್ರ ರಜಪೂತ, ವಿಜಯಲಕ್ಷ್ಮಿ ರೂಗಿಮಠ, ಬೀಮಸಿಂಗ್ ರಾಠೋಡ, ದೇವಿಂದ್ರ ಕುಂಬಾರ, ನಾಗೇಶ್ ಹೆಗಡ್ಯಾಳ, ಸೇರಿದಂತೆ ಸೇರಿದಂತೆ ವಿವಿಧ ಶಕ್ತಿ ಕೇಂದ್ರಗಳ ಅಧ್ಯಕ್ಷರು, ವಿವಿಧ ಮಂಡಲ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.