ತೋಟದಲ್ಲಿ ನೀರು ಹಾಯಿಸುವ ವೇಳೆ ಗಾಯಗೊಂಡ ನರಿ ಪತ್ತೆವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ
Injured fox found while watering garden. Wildlife conservation is everyone's top priority
ಲೋಕದರ್ಶನ ವರದಿ
ಯಲಬುರ್ಗಾ 04: ತಾಲೂಕಿನ ಕುಡಗುಂಟಿ ಗ್ರಾಮದ ರೈತ ಬಸವರಾಜ ಬೊಮ್ಮನಾಳ ಅವರ ತೋಟದಲ್ಲಿ ಬೆಳಿಗ್ಗೆ ಗಾಯಗೊಂಡ ವನ್ಯ ಜೀವಿ ನರಿ ಪತ್ತೆಯಾಗಿದ್ದು, ತಕ್ಷಣ ಯಲಬುರ್ಗಾ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ, ಪ್ರಥಮ ಚಿಕಿತ್ಸೆ ಕೊಡಿಸಿ ಸುರಕ್ಷಿತವಾಗಿ ಕುಕನೂರ ತಾಲೂಕಿನ ಚಂಡೂರು ಗ್ರಾಮದ ಮೀಸಲು ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲಾಯಿತು. ನಂತರ ಮಾತನಾಡಿದ ಉಪ ವಲಯ ಅರಣ್ಯಾಧಿಕಾರಿ ಲಿಂಗರಾಜ ಕನ್ನಾಳ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಕ್ರೌರ್ಯದಿಂದಾಗಿ ವನ್ಯ ಜೀವಿಗಳು ವಿನಾಶದತ್ತ ಸಾಗುತ್ತಿದ್ದು, ಅವುಗಳ ರಕ್ಷಣೆ ಆಗಬೇಕಿದೆ ಎಂದು ಹೇಳಿದರು. ವನ್ಯಜೀವಿಗಳ ರಕ್ಷಣೆಗೆ ಭಾರತ ದೇಶದಲ್ಲಿ ಉತ್ತಮ ವಾತವರಣ ಹೊಂದಿದ್ದು, ಪ್ರಾಣಿ ಸಂಕುಲಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ವಿಶ್ವದಲ್ಲಿ ದಕ್ಷಿಣ ಆಫ್ರಿಕಾ ಹೊರತುಪಡಿಸಿದರೆ ಅತಿ ಹೆಚ್ಚು ಪ್ರಾಣಿಗಳ ಸಂಖ್ಯೆ ಭಾರತದಲ್ಲಿ ಇದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತವೆ ಎಂದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಜಗದೀಶ ಮರಡಿ, ಶರಣಪ್ಪ ರಾಜೂರ, ಯಮನೂರ್ಪ ಬೊಮ್ಮನಾಳ, ಬಸವರಾಜ ಬೊಮ್ಮನಾಳ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 