ಭರತ ವರ್ಷದ ವೀರನಾರಿಯರು ಶೌರ್ಯ, ತ್ಯಾಗ, ಬಲಿದಾನದ ಪ್ರತೀಕ: ಪ್ರೊ. ತ್ಯಾಗರಾಜ

ಭರತ ವರ್ಷದ ವೀರನಾರಿಯರು ಶೌರ್ಯ, ತ್ಯಾಗ, ಬಲಿದಾನದ ಪ್ರತೀಕ: ಪ್ರೊ. ತ್ಯಾಗರಾಜ India's heroes of the year are symbols of bravery, sacrifice and sacrifice: Prof. Tyagaraja

ಭರತ ವರ್ಷದ ವೀರನಾರಿಯರು ಶೌರ್ಯ, ತ್ಯಾಗ, ಬಲಿದಾನದ ಪ್ರತೀಕ: ಪ್ರೊ. ತ್ಯಾಗರಾಜ 

ಬೆಳಗಾವಿ 16: ಭಾರತ ಕಂಡ ಶ್ರೇಷ್ಠ ರಾಣಿಯರು ನಾಯಕತ್ವದ ರೂವಾರಿಗಳಾಗಿ, ರಾಷ್ಟ್ರದ ಒಳಿತಿಗಾಗಿ, ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮತ್ತು ತಮ್ಮ ಜೀವನವನ್ನೇ ಪಣಕಿಟ್ಟ ವೀರನಾರಿಯರಾದ ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಹಾಗೂ ರಾಣಿ ಅಹಲ್ಯಾಬಾಯಿ ಹೋಳ್ಕರ ಅವರ ಸ್ಮರಿಸುವಂತಹ ಸುಧೀನ ನಮ್ಮೆಲ್ಲರ ಜೀವನದಲ್ಲಿ ಅಚ್ಚಳಿಯದೇ ಉಳಿಯತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಹೇಳಿದರು. 

ದಿ.16 ಮಂಗಳವಾರದಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ, ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ಕರ್ನಾಟಕ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭರತ ವರ್ಷದ ಮೂವರು ವೀರನಾರಿಯರು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳನ್ನು ಧ್ಯಾನದ ಮುಖಾಂತರ ದೃಷ್ಠಿಯ ಕಡೆಗೆ ಸೆಳೆದು ಪ್ರಸ್ತುತ ದಿನಮಾನದ ಸಮಸ್ಯೆಗಳು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರೂ ತೊಡಗಿಸಿಕೊಳ್ಳುವದಕ್ಕಾಗಿ ಈ ಮೂರು ವೀರನಾರಿಯರ ಯಶೋಗಾಥೆ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದರು. 

ವಿಶೇಷ ಉಪನ್ಯಾಸಕರಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ. ನಾಗರತ್ನಾ ಪರಾಂಡೆ ಅವರು ಮೂವರು ವೀರನಾರಿಯರ ಕೌಟುಂಬಿಕ ಹಿನ್ನೆಲೆ, ಜೀವನ ಚರಿತ್ರೆ, ರಾಜಕೀಯ ಇತಿಹಾಸ ಹಾಗೂ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆಗಳ ಕುರಿತಾಗಿ ಮಾತನಾಡಿದರು.  

ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಬಿ. ಎಸ್‌. ನಾವಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಉದ್ಧೇಶಗಳನ್ನು ತಿಳಿಸಿದರು. ಆಯ್,ಕ್ಯೂ,ಎ,ಸಿ ನಿರ್ದೇಶಕರಾದ ಪ್ರೊ. ಜೆ. ಮಂಜಣ್ಣ ಅವರು ವೀರನಾರಿಯರ ಶೌರ್ಯ ಮತ್ತು ತ್ಯಾಗದ ಕುರಿತಾಗಿ ಮಾತನಾಡಿದರು.  

ರಸಾಯನ ಶಾಸ್ತ್ರದ ಪ್ರಾಧ್ಯಾಪಕರು ಮತ್ತು ಅಧ್ಯಕ್ಷ ಪ್ರೊ. ಬಸವರಾಜ ಪದ್ಮಶಾಲಿ ಅವರು ಮಾತನಾಡಿ ಇಂದಿನ ಪೀಳಿಗೆ ರಾಷ್ಟ್ರದ ಹಿತಕ್ಕಾಗಿ ದುಡಿದ ಮಹಿಳೆಯರ ಕುರಿತಾದ ಮಾಹಿತಿ ಅವಶ್ಯವೆಂದರು. ಭೌತಶಾಸ್ತ್ರದ ವಿಭಾಗದ ಪ್ರೊ. ಬಾಲಚಂದ್ರ ಹೆಗಡೆ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಶೋಧನಾ ವಿದ್ಯಾರ್ಥಿನಿ ಸ್ನೇಹಾ ಗುಜಾರ ನಿರೂಪಿಸಿದರು.