ಕಾರ್ನಾ ಡ್ ಭಾರತದ ಶ್ರೇಷ್ಠ ನಾಟಕಕಾರ: ಭಟ್

ಧಾರವಾತಿ 11: ಕಾರ್ನಾ ಡ್ರು ಆಶಯ ಮತ್ತು ಆಕೃತಿಯಲ್ಲಿ ಬಿರುಕಿಲ್ಲದಂತೆ ಬರೆದವರು ಮತ್ತು ಬದುಕಿದವರು. ಯಯಾತಿಯಿಂದ ರಾಕ್ಷಸ ತಕ್ಕಂಡಿಯವರೆಗೂ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಲೇ ಬಂದಿದ್ದಾರೆ. ಕನ್ನಡ ರಂಗಭೂಮಿಯ ತನ್ಮೂಲಕ ಭಾರತೀಯ ರಂಗಭೂಮಿಯ ಪರಂಪರೆಯನ್ನು ಗೌರವಿಸುತ್ತಲೇ ಹೊಸ ಪ್ರಯೋಗಕ್ಕೂ ಅದನ್ನು ಸಜ್ಜುಗೊಳಿಸಿದವರು. ಮತ್ತೆ-ಮತ್ತೆ ತಮ್ಮ ನಾಟಕಗಳನ್ನು ಸಮಕಾಲಿನ ಸಂದರ್ಭಕ್ಕೆ ಅಗತ್ಯವಾಗಿ ತಿದ್ದುತ್ತಲೇ ಬಂದ ಕಾರ್ನಾ ಡ್ರು ಕಂಪಿನ ಕರೆಯ ಜೊತೆಗೆ ಕಾಲದ ಕರೆಯನ್ನು ಅನುಸಂಧಾನಿಸಿದರು. ಇದಕ್ಕೆ ಅವರ ನಾಟಗಳು ಮಾತ್ರವಲ್ಲದೇ ಅವರು ಬರೆದ 'ಅಳಿದ ಮೇಲೆ' ಕಥೆಯು ಸಾಕ್ಷಿಯಾಗಿದೆ ಎಂದು ರಂಗ ನಿರ್ದೇ ಶಕ ಶ್ರೀಪಾದ ಭಟ್ ಹೇಳಿದರು.

ಸಮುದಾಯ ಧಾರವಾಡ ಡಾ. ಗಿರೀಶ ಕಾರ್ನಾ ಡ್ ಸ್ಮರಣಾರ್ಥ ನಡೆಸುತ್ತಿರುವ ನಾಟಕೋತ್ಸವ ಅಂಗವಾಗಿ ನಡೆದ "ಗಿರೀಶ ಕಾನರ್ಾಡ ಮತ್ತು ಕನ್ನಡ ರಂಗಭೂಮಿ" ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡುತ್ತಾ ಹೇಳಿದರು.

ಗಿರೀಶರು ದೆಹಲಿಯಲ್ಲಿರಲಿ ವಿದೇಶದಲ್ಲಿಯೇ ಇರಲಿ ತಾವು ಕನ್ನಡದ ಲೇಖಕ ಎಂಬುದನ್ನು ಅಭಿಮಾನದಿಂದ ಹೇಳಿದರು. ಕನ್ನಡದ ಘನತೆಯನ್ನು ಎತ್ತಿ ಹಿಡಿದವರು. ಭಾರತದ ಶ್ರೇಷ್ಠ ನಾಟಕಕಾರರಾಗಿದ್ದರು. ಸಾರಸ್ವತ ಲೋಕ ಅವರನ್ನು ತಪ್ಪಾಗಿ ಅರ್ಥೈ ಸಿದ್ದು ವಿಷಾದಕರ. ಗಿರೀಶ ಕಾನರ್ಾಡ ಅವರು ಬಾಲ್ಯದಲ್ಲಿ ಪ್ರತಿಭಾವಂತರು. ನಾನು, ಅವರು ಒಂದೇ ಕಾಲೇಜಿನಲ್ಲಿ ಕಲಿಯುವಾಗ ಭಾಷಣ ಸ್ಫರ್ಧೆ ಯಲ್ಲಿ ಪ್ರಥಮ ಹಾಗೂ ಕ್ಲಾಸಿಗೂ, ಕಾಲೇಜಿಗೂ ಪ್ರಥಮ ರ್ಯಾಂಕ್ ಪಡೆಯುತ್ತಿದ್ದರು. ಇಂಗ್ಲೀಷನಲ್ಲಿ ಪ್ರಭುತ್ವ ಹೊಂದಿದ್ದರು. ಪದ್ಮಶ್ರೀ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ, ಅವರ ಯಯಾತಿ ತುಘಲಕ, ತಲೆದಂಡ ನಾಟಕಗಳು ಖ್ಯಾತಿ ತಂದರೆ ಚಲನಚಿತ್ರದಲ್ಲಿ ವಂಶವೃಕ್ಷ ಒದೂರಿನಲ್ಲಿ ಕಾಡು ಹಾಗೂ ಹಿಂದಿಯ ಉತ್ಸವ ಸಾಕಷ್ಟು ಅವರಗೆ ಹೆಸರು ತಂದವು ಮರಾಠಿ, ಕೊಂಕಣಿ ಇಂಗ್ಲೀಷ ಭಾಷೆ ಗೊತ್ತಿದ್ದರೂ, ಅವರು ನನ್ನ ನೆಚ್ಚಿನ ಭಾಷೆ ಕನ್ನಡ ಎಂದು ಅವರ ಎಲ್ಲಾ ಪುಸ್ತಕಗಳು ನಾಟಕಗಳು ಕನ್ನಡದಲ್ಲಿಯೇ ಪ್ರಕಟಗೊಳಿಸಿದರು ಎಂದು ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಸಮುದಾಯ ಅಧ್ಯಕ್ಷ ಬಿ.ಐ.ಈಳಿಗೇರ, ಗಂಗಾಧರ ಗಾಡದ, ಎಸ್.ಎಸ್.ಚಿಕ್ಕಮಠ, ಪ್ರೊ. ಶಿವಯೋಗಿ ಪ್ಯಾಟಿಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.