ಮಕ್ಕಳ ಭವಿಷ್ಯತ್ತಿಗಾಗಿ ಪಾಲಕರು ವಿಧ್ಯಾಭ್ಯಾಸ ಸಮಯದಲ್ಲಿ ಟಿವ್ಹಿ ಹಾಗೂ ಮೊಬೈಲ್ ತ್ಯಾಗ ಮಾಡಿದರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ

ಮಕ್ಕಳ ಭವಿಷ್ಯತ್ತಿಗಾಗಿ ಪಾಲಕರು ವಿಧ್ಯಾಭ್ಯಾಸ ಸಮಯದಲ್ಲಿ ಟಿವ್ಹಿ ಹಾಗೂ ಮೊಬೈಲ್ ತ್ಯಾಗ ಮಾಡಿದರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ  If parents sacrifice TV and mobile phones during school hours for the sake of their children's futu


      ಹಾವೇರಿ  20: ಮಕ್ಕಳ ಭವಿಷ್ಯತ್ತಿಗಾಗಿ ಪಾಲಕರು ವಿಧ್ಯಾಭ್ಯಾಸ ಸಮಯದಲ್ಲಿ ಟಿವ್ಹಿ ಹಾಗೂ ಮೊಬೈಲ್ ತ್ಯಾಗ ಮಾಡಿದರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಹಾವೇರಿ ಶ್ರೀ ಹುಕ್ಕೇರಿಮಠದ ಶ್ರೀ.ಮ.ನಿ.ಪ್ರ.ಸದಾಶಿವ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿನ ಶ್ರೀ ಪಾರ್ವತಿ ಪರಮೇಶ್ವರ ವಿದ್ಯಾಸಂಸ್ಥೆಯ ಆಶ್ರಯದ ಜ್ಞಾನದೀಪ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 15ನೇ ಶಾಲಾ ವಾರ್ಷಿಕೋತ್ಸವ,ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಗಣ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಆರ್ಶಿವಚನ ನೀಡಿದರು. 

      ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರಯೂ ಬಹಳ ಮುಖ್ಯ.ಹಳ್ಳಿ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪನೆ ಮಾಡಿ ಗುಣಾತ್ಮಕಶಿಕ್ಷಣ ನೀಡುತ್ತಿರುವ ಶಾಲೆಯ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ.ಇದರ ಸದುಪಯೋಗವನ್ನು ಕಳ್ಳಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮದವರು ಸದಪಯೋಗಪಡಿಸಿಕೊಳ್ಳಿರಿ.ಎಂ ಎಂ ಹಿರೇಮಠ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ.ಎಲ್ಲರಿಗೂ ಇಷ್ಟಾ ಆಗುವ ಗುಣ ಅವರದಾಗಿದೆ.ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಎಲ್ಲರೂ ಬದ್ಧರಾಗಬೇಕಿದೆ ಎಂದು ಶ್ರೀಗಳು ಆರ್ಶಿವಚನ ನೀಡಿದರು. 

       ಸಂಸ್ಥೆಯ ಅಧ್ಯಕ್ಷರಾದ ಎಂ.ಎಂ ಹಿರೇಮಠ ಮಾತನಾಡಿ ಈ ಭಾಗದ ಜನರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ಸಂಸ್ಥೆಯವರೆಲ್ಲರೂ ಸೇರಿ ಶಾಲೆಯನ್ನು ಮುನ್ನಡಿಸುತ್ತಿದ್ದು,ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತಿ ಸಾಧಿಸಲಿದ್ದಾರೆ.ಅನುಭವಿ ಗುರು ಬಳಗದವರು ಶಾಲೆಯಲ್ಲಿ ಇದ್ದು,ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ.ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.  ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನ್ ದಂಡಿನ ಅವರು ನೆರವೇರಿಸಿ ಮಾತನಾಡಿದರು.ಜೆ.ಎಚ್ ಕಾಲೇಜಿನ ಉಪನ್ಯಾಸಕರಾದ ಜೆ ಎಫ್ ಹೊಸಮನಿ ಉಪನ್ಯಾಸ ನೀಡಿದರು. 

      ಸಂಸ್ಥೆಯ ಉಪಾಧ್ಯಕ್ಷರಾದ ವಿ.ಸಿ ಹಾವೇರಿಮಠ ಅವರು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಿಗಿನ ಜಾವ ಶಾಲಾ ಮಕ್ಕಳಿಂದ ಮಕ್ಕಳ ಸಂತೆ,ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ವಿಜ್ಞಾನ ರಂಗೋಲಿ ಸ್ಪರ್ಧೆಯನ್ನು,ತಾಯಂದಿರರಿಗೆ ಪಾದಪೂಜೆ ಕಾರ್ಯಕ್ರಮ ಏರಿ​‍್ಡಸಲಾಗಿತ್ತು.ಸಾಯಂಕಾಲ ಮಕ್ಕಳಿಂದ ವಿಭಿನ್ನ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ.ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ(616/625) ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. 

      ಜ್ಞಾನದೀಪ ಶಾಲೆಗೆ ಒಂದು ಲಕ್ಷ ರೂ.ಗಳನ್ನು ದಾನ ನೀಡಿದ ಶಿಕ್ಷಣ ಪ್ರೇಮಿಗಳಾದ ಶಶಿಧರ ಒಡಗೇರಿಮಠ ಅವರ ದಂಪತಿಗಳಿಗೆ ಆಡಳಿತ ಮಂಡಳಿಯವರು ಗೌರವಿಸಿದರು.ಶ್ರೀಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಹಿರೇಮಠ, ಸದಸ್ಯರಾದ ಶ್ರೀಮತಿ ಪುಷ್ಪಾ ಹಾವೇರಿಮಠ, ಆನಂದಗೌಡ ಪಾಟೀಲ್,ಎಸ್ ಎಸ್ ಭೂಸನೂರಮಠ, ಕುಮಾರಸ್ವಾಮಿ ಓಸುಮಠ, ಕುಮಾರಿ ರಾಜೇಶ್ವರಿ ಲಕ್ಷ್ಮೇಶ್ವರಮಠ ವಹಿಸಿಕೊಂಡಿದ್ದರು. ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಗುರುನಾಥಯ್ಯ ಮಳ್ಳೂರಮಠ, ದೈಹಿಕ ಶಿಕ್ಷಣಾಧಿಕಾರಿಗಳಾದ ವಿನಾಯಕ ಗಡ್ಡದ, ಶಿಕ್ಷಣ ಸಂಯೋಜಕರಾದ ಎಸ್ ಆರ್ ಹಿರೇಮಠ, ಓಂಪ್ರಕಾಶ್ ಎತ್ತಿನಹಳ್ಳಿ, ಸಿ ಆರ್ ಪಿಗಳಾದ ಶ್ರೀಮತಿ ರೇಖಾ ತೋಟಗೇರ್, ಅಮ್ಮಾ ಸಂಸ್ಥೆಯ ಸಂಸ್ಥಾಪಕರಾದ ನಿಂಗಪ್ಪ ಆರೇರ,ಅಶೋಕ ಮಾಗನೂರ, ಚಂದ್ರಶೇಖರಯ್ಯ ಮಠದ,ಇನ್ನಿತರ ಗಣ್ಯರು,ಶಾಲೆಯ ಗುರು ಬಳಗ ಹಾಗೂ ವಿದ್ಯಾರ್ಥಿಗಳು ಹಾಗೂ ಪಾಲಕ ಪೋಷಕರು ಪಾಲ್ಗೊಂಡಿದ್ದರು.