ಹುಣಶ್ಯಾಳ ಪಿಜಿ: 27ನೇ ಸತ್ಸಂಗ, ಅಪ್ಪನ ಜಾತ್ರೆಗೆ ರಂಭಾಪುರಿ ಜಗದ್ಗುರುಗಳಿಂದ ಚಾಲನೆ
Hunashyala PG: 27th Satsang, Father's Fair inaugurated by Rambhapuri Jagadguru
ಘಟಪ್ರಭಾ 01: ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ 27ನೇ ಸತ್ಸಂಗ ಮಹೋತ್ಸವ ಹಾಗೂ ಸಿದ್ಧಲಿಂಗ ಅಪ್ಪನ ಜಾತ್ರಾ ಮಹೋತ್ಸವ ಸಮಾರಂಭಕ್ಕೆ ಆಗಮಿಸಿದ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರನ್ನು ಸುಕ್ಷೇತ್ರ ಮಹಾಧ್ವಾರದಿಂದ ಶ್ರೀಮಠಕ್ಕೆ ಶೃಂಗಾರ ರಥದಲ್ಲಿ ಸಹಸ್ರ ಪೂರ್ಣ ಕುಂಭದೊಂದಿಗೆ ಮಹಾತ್ಮರ ಭವ್ಯ ಸ್ವಾಗತ ಮೆರವಣಿಗೆ ಜರುಗಿತು.
ಹುಕ್ಕೇರಿಯ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮಠದ ನಿಜಗುಣ ದೇವ ಮಹಾಸ್ವಾಮಿಜಿ, ಶ್ರೀ ಮಹಾದೇವಾನಂದ ಸರಸ್ವತಿ ಮಹಾಸ್ವಾಮಿಗಳು,ಸದಾನಂದ ಮಹಾಸ್ವಾಮಿಗಳು, ಬೀದರಿನ ಗಣೇಶಾನಂದ ಮಹಾರಾಜರು, ಕೃಪಾನಂದ ಮಹಾಸ್ವಾಮಿಜಿ, ಕೊಟಬಾಗಿಯ ಪ್ರಭುದೇವ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು,ಶ್ರೀ ಶಿವಪುತ್ರ ಅವಧೂತರು, ಪ್ರಶಾಂತ ಮಹಾರಾಜರು, ಆತ್ಮಾನಂದ ಸ್ವಾಮಿಜಿ, ಸಿದ್ಧಾನಂದ ಸ್ವಾಮಿಜಿ, ಶಾಸಕ ದುರ್ಯೋಧನ ಐಹೊಳೆ ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು.
ಬೆಳಿಗ್ಗೆ ಶ್ರೀ ಸಿದ್ಧಲಿಂಗ ಯತಿರಾಜರ, ಶ್ರೀ ಶಾಂಭವಿ ಮಾತೆಯ, ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ಜರುಗಿತು. ಓಂಕಾರ ಧ್ವಜಾರೋಹಣ, ಶ್ರೀ ಸಿದ್ಧಲಿಂಗ ರಥದ ಕಳಸಾರೋಹಣ, ನಂತರ ಸಹಸ್ರ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 