ತೇಜೋವಧೆಗಾಗಿ ಸಚಿವರ ಮೇಲೆ ಸುಳ್ಳು ಆರೋಪ ಹಿಆನಂದ ಹಟ್ಟಿ
Hiananda Hatti falsely accuses minister of Tejo's murder
ಮಹಾಲಿಂಗಪುರ 21: ಕಳೆದ ಕೆಲವು ದಿನಗಳಿಂದ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಅಬಕಾರಿ ಸಚಿವರಾದ ಅರ್.ಬಿ ತಿಮ್ಮಾಪೂರ ಮದ್ಯದಂಗಡಿ ಪರವಾಣಿಗೆ ನೀಡಲು ಹಣ ಕೇಳಿದ್ದಾರೆ ಎಂಬ ಆರೋಪ ಮಾಡುತ್ತಿರುವುದು ಖಂಡನೀಯ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಜಿಲ್ಲಾ ಕಿಸಾನ ಘಟಕದ ಅಧ್ಯಕ್ಷ ಆನಂದ ಹಟ್ಟಿ ಹೇಳಿದರು.
ಸ್ಥಳೀಯ ಮುಖಂಡ ಆನಂದ ಹಟ್ಟಿಯವರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗ ಅಮಾನತ್ತಾಗಿರುವ ಅಧಿಕಾರಿ ಜೋತೆಗೆ ಸಚಿವ ಆರ್.ಬಿ ತಿಮ್ಮಾಪೂರ ಆಗಲಿ ಅಥವಾ ಅವರಿಗೆ ಸಂಭಂದ ಪಟ್ಟ ಯಾರೋಬ್ಬರು ಮಾತನಾಡಿಡುವುದಿಲ್ಲ, ಇದು ಸಚಿವರ ತೇಜೋವಧೆಗಾಗಿ ನಡೆಯುತ್ತಿರುವ ವ್ಯೆರ್ಥ ಪ್ರಯತ್ನವಾಗಿದೆ. ಇದೇ ವಿಷಯದ ಕುರಿತು ವಿರೋಧ ಪಕ್ಷದ ಕೆಲ ಮುಖಂಡರು ಸಚಿವರ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ವಿರೋಧ ಪಕ್ಷದ ಮುಖಂಡರಾದ ಆರ್.ಅಶೋಕ ಮತ್ತು ಚಲವಾದಿ ನಾರಾಯಣ ಸ್ವಾಮಿಯಾಗಿರಲಿ ಅವರ ಹತ್ತಿರ ಏನಾದರೂ ಧಾಖಲೆಗಳಿದ್ದರೆ ಬಿಡುಗೋಡೆಗೋಳಿಸಿ, ಇಲ್ಲವೆ ಸತ್ಯಾಂತಕ್ಕಾಗಿ ಅಮಾನತ್ತುಗೊಂಡ ಅಧಿಕಾರಿಯನ್ನು ಬೇಕಾದರೆ ಮರು ಪರಿಕ್ಷೆಗೆ ಒಳಪಡಿಸಲಿ, ಅದು ಬಿಟ್ಟು ಸಚಿವರ ಮೇಲೆ ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು, ಇಲ್ಲವಾದಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ ಕಾರ್ಯಕರ್ತರಿಂದ ಬೃಹತ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಬಾಗಲಕೋಟ ಜಿಲ್ಲಾ ಹಿರಿಯ ರಾಜಕಾರಣಿ ಸರಳ ಸಜ್ಜನಿಕೆಯ ಸಚಿವರಾದ ಅರ್.ಬಿ ತಿಮ್ಮಾಪೂರ ಅವರ ಮೇಲೆ ಸುಳ್ಳು ಆರೋಪದ ತೇಜೋವೇದೆ ಮಾಡುವುದನ್ನು ವಿರೋಧ ಪಕ್ಷದ ನಾಯಕರು ನಿಲ್ಲಿಸಬೇಕೆಂದು ಬಾಗಲಕೋಟ ಜಿಲ್ಲಾ ಕಿಸಾನ ಕಾಂಗ್ರೆಸ ಘಟಕದ ವತಿಯಿಂದ ಆಗ್ರಹಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ ಮುಖಂಡರಾದ ಎಸ್.ಎಂ ಪಾಟೀಲ, ಚನ್ನೂ ದೇಸಾಯಿ, ಭೀಮಸಿ ಸಸಾಲಟ್ಟಿ, ದುಂಡಪ್ಪ ಜಾಧವ, ವಿಠ್ಠಲ ಡವಳೇಶ್ವರ. ಜೋತೆಪ್ಪ ಕಪರಟ್ಟಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 