ಕಿನ್ನಾಳ ಗ್ರಾಮದಲ್ಲಿ ಅದ್ದೂರಿಯಾಗಿ ಹಜರತ್ ಟಿಪ್ಪುಸುಲ್ತಾನ್ ರವರ ಜಯಂತಿ ಆಚರಣೆ
Hazrat Tipu Sultan's birth anniversary celebrated with grandeur in Kinnal village
ಕೊಪ್ಪಳ:: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸೋಮವಾರದಂದು ಬೆಳಿಗ್ಗೆ ಗ್ರಾಮದ ಟಿಪ್ಪು ಸರ್ಕಲ್ ಬಳಿ ಶೇರ್ ಏ ಹಿಂದ್, ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ರವರ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಪುಷ್ಪ ನಮನ ಸಲ್ಲಿಸಿ ಗೌರವ ನಮನ ಸಲ್ಲಿಸುವುದರ ಜೊತೆಗೆ ಹಿಂದೂ ಮುಸ್ಲಿಂ ಸಮಾಜ ಬಾಂಧವರೆಲ್ಲರೂ ಕೂಡಿಕೊಂಡು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಿದರು,ಟಿಪ್ಪು ಸುಲ್ತಾನ್ ರವರ ಜೀವನ ಚರಿತ್ರೆ ಮತ್ತು ಅವರ ಆದರ್ಶ, ಕನ್ನಡ ಅಭಿಮಾನ, ಸರ್ವ ಜನಾಂಗದ ಅಭಿವೃದ್ಧಿ ,ವಿಶೇಷವಾಗಿ ಶೋಷಿತ ಸಮುದಾಯದ ಪರ ಅವರು ಕೈಗೊಂಡಿರುವ ಹತ್ತು ಹಲವು ಜನಪರ ಯೋಜನೆ ಗಳ ಬಗ್ಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಮಾತನಾಡಿ ಟಿಪ್ಪು ಸುಲ್ತಾನ್ ರವರ ಸೇವೆ ಶೌರ್ಯ , ಧೈರ್ಯ ,,ನ್ಯಾಯ ಬದ್ಧ ಆಡಳಿತ,ಮತ್ತು ಅವರ ದೇಶಭಕ್ತಿ ಧರ್ಮನಿರ್ೇಕ್ಷತೆ ತ್ಯಾಗದ ಬಗ್ಗೆ ಸ್ಮರಣೆ ಮಾಡಿದರು, ಟಿಪ್ಪು ಸುಲ್ತಾನ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ನಾವುಗಳು ಪರಸ್ಪರ ಸಹೋದರತ್ವ ಭಾವನೆಗಳನ್ನು ಬೆಳೆಸಿಕೊಂಡು ಜೀವನ ಸಾಗಿಸಬೇಕು ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ನೂರು ದಿನ ಇಲಿ ಯಾಗಿ ಬಾಳುವುದ ಕಿಂತ, ಒಂದು ದಿನ ಹುಲಿಯಾಗಿ ಬಾಳುವುದು ಶ್ರೇಷ್ಠ ಎಂಬ ಟಿಪ್ಪು ಸುಲ್ತಾನ್ ರವರ ವಾಣಿಯಂತೆ ನಾವುಗಳು ಕೂಡ ಉತ್ತಮ ಪ್ರಜೆಯಾಗಿ ಪರಸ್ಪರ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಲವು ಗಣ್ಯರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಮುಖ್ಯಸ್ಥರು ಹಾಗೂ ಕಮಿಟಿಯ ಗೌರವ ಅಧ್ಯಕ್ಷರಾದ ಮಹಬೂಬ್ ಸಾಬ್ ಹಿರಾಳ್ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಹಿಂದೂ ಮುಸ್ಲಿಂ ಬಾಂಧವರಿಗೆ ಸಮಾಜದ ಪರವಾಗಿ ಅಭಿನಂದಿಸಿದರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ವಿರುಪಾಕ್ಷಿ, ಅಮರೇಶ್ ಉಪಲಾಪುರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿರುಭದ್ರ್ಪ ಗಂಜಿ, ಬಸವರಾಜ್ ಚಿಳುವಾಡಗಿ, ವೀರೇಶ್ ತಾವರಗೇರಿ, ವಿರುಪಾಕ್ಷಪ್ಪ ಉದ್ಧಾರ, ಮಹಾದೇವಯ್ಯ ಹಿರೇಮಠ ಅನೇಕರು ಮಾತ ನಾಡಿ ಟಿಪ್ಪು ಜಯಂತಿ ಪ್ರಯುಕ್ತ ಸಮಸ್ತ ಸಮಾಜ ಬಾಂಧವರಿಗೆ ಶುಭ ಕೋರಿದರು, ಈ ಸಂದರ್ಭದಲ್ಲಿ ಮಂಜುನಾಥ ಸಿರಿಗೆರಿ, ಪಂಪಾಪತಿ ಹಿರೇಮಠ, ಮೈಲಾರ್ಪ ಹುದ್ದಾರ್, ವಿರೂಪಾಕ್ಷಪ್ಪ, ರಮೇಶ್ ಗೋರೆ್ಡ, ರಾಘವೇಂದ್ರ ಡಂಬಳ, ದೇವರಾಜ್ ಹರಿಜನ, ಸುರೇಶ್ ವಡ್ಡರ್, ರವಿ ಅಂಗಡಿ, ಜಗದೀಶ್ ಬಳಿಗರ್, ಮಹೇಶ್ ವಾಲ್ಮೀಕಿ, ಅಲ್ಲದೆ ಸುಭಾನ್ ಸಾಬ್ ಹಿರಾಳ ಇಮಾಮಸಾಬ್ ತಟಗಾರ್ ಯೂನಸ್, ಹುಸೇನ್ ಸಾಬ್ ಕೆಇಬಿ, ಶರೀಫ್ ಸಾಬ್, ಖಾಜಾ ಸಾಬ್, ಶಬ್ಬೀರ್ ಸಾಬ್, ಉಸ್ಮಾನ್ ಸಾಬ್ ಹಿರೇಮನಿ, ನಬೀ ,ರಫಿ ,ಮೈನು, ಚಮನ್ ,ಹುಸೇನ್, ಸಲೀಂ, ಇಬ್ರಾಹಿಂ, ಯೂಸುಫ್, ಮತ್ತು ಸಮಾಜದ ಯುವ ನಾಯಕ ರೆಹಮಾನ್ ಸಾಬ್ ಹಿರಾಳ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. ಮುಸ್ಲಿಂ ಧರ್ಮಗುರು ಹಾಫೀಸ್ ಮೌಲಾನ ರವರು ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಕೊಟ್ಟರು, ಕಾರ್ಯಕ್ರಮದ ಆರಂಭದಲ್ಲಿ ಸಮಾಜದ ನಾಯಕ ಮತ್ತು ಗಾಯಕ ಭಾಷಾ ಹಿರೇಮನಿ ರವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು,ನಂತರ ಸಿಹಿ ಹಂಚಿಸಿ ಸಂಭ್ರಮಿಸಿದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 