ಗುರು ಸಿದ್ಧರಾಮೇಶ್ವರ ತತ್ವ ಆದರ್ಶಗಳನ್ನು ಪಾಲಿಸಬೇಕು ಅಂದಾಗ ಜೀವನ ಸಾರ್ಥಕವಾಗುತ್ತದೆ: ಮ್ಯಾಗೇರಿ
Guru Siddharameshwar's principles and ideals are followed when life becomes meaningful: Mageri
ಗುರು ಸಿದ್ಧರಾಮೇಶ್ವರ ತತ್ವ ಆದರ್ಶಗಳನ್ನು ಪಾಲಿಸಬೇಕು ಅಂದಾಗ ಜೀವನ ಸಾರ್ಥಕವಾಗುತ್ತದೆ: ಮ್ಯಾಗೇರಿ
ಶಿಗ್ಗಾವಿ 15: ಗುರು ಸಿದ್ಧರಾಮೇಶ್ವರರು ಕಾಯಕ ನಿಷ್ಟೇಯ ಜೀವನ ಸಾಗಿಸಿದವರು, ಅವರ ತತ್ವ ಆದರ್ಶಗಳನ್ನು ನಾವೇಲ್ಲರೂ ಪಾಲಿಸಬೇಕು ಅಂದಾಗ ಜೀವನ ಸಾರ್ಥಕವಾಗುತ್ತದೆ ಎಂದು ಸಾಹಿತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ತಿಳಿಸಿದರು.
ಪಟ್ಟಣದಲ್ಲಿರುವ ಹಂಚಿನಮನಿ ಆರ್ಕೇಡ್‌ನಲ್ಲಿ ತಾಲೂಕ ಭೋವಿ ಸಮಾಜದ ವತಿಯಿಂದ ಹಮ್ಮಿಕೊಂಡ ಗುರು ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ಅಲ್ಲಮ ಪ್ರಭುಗಳ ಶಿಷ್ಯರಾಗಿದವರು, ಅವರು ಮಾನವ ಕುಲದ ಬದುಕಿಗೆ ಉತ್ತಮ ಸಂದೇಶ ಸಾರಿದವರು, ಇಂದು ಭೋವಿ ಸಮಾಜ ಕಷ್ಟದಲ್ಲಿದೆ, ಈ ಸಮಾಜ ಮಾದರಿ ಜೀವನ ನಡೆಸುತ್ತಿದೆ, ಸರ್ಕಾರ ಈ ಸಮಾಜದ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಭೋವಿ ಸಮಾಜದ ತಾಲೂಕ ಅಧ್ಯಕ್ಷ ಅರ್ಜುನ ಹಂಚಿನಮನಿ ಮಾತನಾಡಿ ಸಿದ್ದರಾಮೇಶ್ವರು ಒಂದೇ ಸಮೂದಾಯಕ್ಕೆ ಸಿಮಿತರಾದವರಲ್ಲ, ಎಲ್ಲ ಸಮೂದಾಯದವರೂ ಸ್ಮರಿಸುವ ಯೋಗಿಗಳು, ಗುರುಗಳ ಸೇವೆಯನ್ನು ಸತ್ಯದಿಂದ ಆಚರಿಸಬೇಕು, ಅವರ ಮಾರ್ಗದರ್ಶನದಲ್ಲಿ ಮತ್ತು ಅವರ ಹಾದಿಯಲ್ಲಿ ನಾವೇಲ್ಲರೂ ಸಾಗಬೇಕು, ಸಮಾಜದ ಹಲವಾರು ಸಮಸ್ಯೆಗಳನ್ನು ಏದುರಿಸುತ್ತಿದ್ದು ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಮುಖಂಡ ಮಹೇಶ ಕುರಂದವಾಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಶೇಕಣ್ಣ ಹಾದಿಮನಿ, ಸದಾಶಿವಸ್ವಾಮಿ ಕಂಕನವಾಡ, ಉಮೇಶ ಗೌಳಿ, ಜಿಲಾನಿ ಜಂಗ್ಲಿ, ಹನುಮಂತಪ್ಪ ಬಡ್ನಿ, ಮಂಜುನಾಥ ಗುಡಗೇರಿ, ಬಸವರಾಜ ವಡ್ಡರ, ಹನಮಂತಪ್ಪ ಬಾರಂಗಿ, ಹನಮಂತಪ್ಪ ತೆಮ್ಮನಕೋಪ್ಪ, ಬೀರ್ಪ ತಣ್ಣತಮ್ಮನವರ, ರಾಜು ಬಂಕಾಪೂರ, ಹನಂಮತಪ್ಪ ಬಂಡಿವಡ್ಡರ, ರಾಮಣ್ಣ ಧಾರವಾಡ, ಸಂತೋಷ ಬಂಡಿವಡ್ಡರ, ಸಾಗರ ವಡ್ಡರ, ಸುರೇಶ ವಡ್ಡರ, ಮಂಜು ವಡ್ಡರ, ಸುರೇಶ ವಡ್ಡರ ಸೇರಿದಂತೆ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 