ಕರ್ನಾಟಕ ವಿಶ್ವವಿದ್ಯಾಲಯದ ನಡೆಯನ್ನು ವಿರೋಧಿಸಿ ಪದವಿ ವಿದ್ಯಾರ್ಥಿಗಳ ಪ್ರತಿಭಟನೆ

ಕರ್ನಾಟಕ ವಿಶ್ವವಿದ್ಯಾಲಯದ ನಡೆಯನ್ನು ವಿರೋಧಿಸಿ ಪದವಿ ವಿದ್ಯಾರ್ಥಿಗಳ ಪ್ರತಿಭಟನೆ Graduate students protest against Karnataka University's move

           ಧಾರವಾಡ 18: ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ಪದವಿ ಕಾಲೇಜುಗಳ ತರಗತಿಗಳು ನಡೆಯುವ ಕೊನೆಯ ದಿನಾಂಕವನ್ನು ಹತ್ತು ದಿನಗಳ ಕಾಲ ಹಿಂದೂಡಿದ ವಿಶ್ವವಿದ್ಯಾಲಯದ ನಡೆಯನ್ನು ಖಂಡಿಸಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.  ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎ ಜಿಲ್ಲಾಧ್ಯಕ್ಷರಾದ ಸಿಂಧು ಕೌದಿ ಮಾತನಾಡಿ ಪದವಿ ಕಾಲೇಜುಗಳು  ಪ್ರಾರಂಭವಾಗಿ ಎರಡು ತಿಂಗಳು ಕಳೆದರು ಅತಿಥಿ ಉಪನ್ಯಾಸಕರು ನೇಮಕಾತಿಯಲ್ಲಿ ಉಂಟಾದ ಗೊಂದಲದಿಂದಾಗಿ ವಿದ್ಯಾರ್ಥಿಗಳಿಗೆ ಸರಿಯಾಗಿ ತರಗತಿಗಳು ನಡೆಯುತ್ತಿರಲಿಲ್ಲ.

         ಇದನ್ನು ಬಗೆಹರಿಸಲು ಆಗ್ರಹಿಸಿ ಜೊತೆಗೆ ಅವಶ್ಯಕವಿರುವ ತರಗತಿಗಳು ನಡೆಯದೆ ಪರೀಕ್ಷೆಯನ್ನು ನಡೆಸಬಾರದು ಎಂಬ ಘೋಷಣೆಯೊಂದಿಗೆ  ಇಡೀ ರಾಜ್ಯ ವ್ಯಾಪಿ ಹಲವಾರು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸಿದ ನಂತರ ಸರ್ಕಾರ ಅತಿಥಿ ಉಪನ್ಯಾಸಕರನ್ನು ಅವರನ್ನು ನೇಮಕಾತಿ ಮಾಡಿಕೊಂಡಿದೆ. ಜೊತೆಗೆ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿಗಳು ನಡೆಯುವ ಕೊನೆಯ ದಿನವನ್ನು ಒಂದು ತಿಂಗಳು ಮುಂದೂಡಿದರು. ಅದರಂತೆಯೇ ಕರ್ನಾಟಕ ವಿಶ್ವವಿದ್ಯಾಲಯದ ತರಗತಿಗಳು ಜನವರಿ ಮೂರರವರೆಗೆ ನಡೆಯಬೇಕು. ಆದರೆ  ಕರ್ನಾಟಕ ವಿಶ್ವವಿದ್ಯಾಲಯವು ಅದನ್ನು ಪರಿಗಣಿಸದೆ  ಹೊಸ ಆದೇಶವನ್ನು ಹೊರಡಿಸುವುದರ ಮೂಲಕ ತರಗತಿಗಳು ನಡೆಯುವ ಕೊನೆಯ ದಿನಾಂಕವನ್ನು ಡಿಸೆಂಬರ್ 24 ಅಂದರೆ ಹತ್ತು ದಿನಗಳ ಕಾಲ ಹಿಂದಕ್ಕೆ ತೆಗೆದುಕೊಂಡಿರುವುದು  ಅಪ್ರಜಾತಾಂತ್ರಿಕ ಯಾಕಂದರೆ ತರಗತಿಗಳು ಪ್ರಾರಂಭವಾಗಿದ್ದೆ  ಎರಡು ತಿಂಗಳು ತಡವಾಗಿ ಇಲ್ಲಿಯವರೆಗೂ ಸಹ ಪಠ್ಯಕ್ರಮಗಳು ಸಂಪೂರ್ಣವಾಗಿ ಮುಗಿದಿಲ್ಲ. ಹೀಗಿರುವಾಗ ಪದವಿ ವಿದ್ಯಾರ್ಥಿಗಳ ತರಗತಿಗಳು ನಡೆಯುವುದಕ್ಕೆ 10  ದಿನಗಳು ಸಹ ಮುಖ್ಯವಾಗುತ್ತದೆ. ಹಾಗಾಗಿ ಸಂಪೂರ್ಣವಾಗಿ ತರಗತಿಗಳು ನಡೆಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಛೇರಿ ಕಾರ್ಯದರ್ಶಿ ಸ್ಫೂರ್ತಿ, ಹಾಗೂ ವಿದ್ಯಾರ್ಥಿಗಳು  ಇದ್ದರು.