ಸರಕಾರಿ ಪ್ರೌಢ ಶಾಲೆ ಹಿರೇಖೆಡ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳು
Government High School Hirekheda School Children's Rights
ಕೊಪ್ಪಳ 23: ಸರಕಾರಿ ಪ್ರೌಢ ಶಾಲೆ ಹಿರೇಖೆಡ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳು ಹಾಗೂ ರಕ್ಷಣೆಯಜಾಗೃತಿ ಕಾರ್ಯಕ್ರಮದಲ್ಲಿ ಶರಣಪ್ಪ ಸಿಂಗನಾಳ ಸಂಯೋಜಕರು ಮಕ್ಕಳ ಸಹಾಯವಾಣಿ-1098/112 ಜಿಲ್ಲಾ ಮಕ್ಕಳ ರಕ್ಷಣಾಘಟಕದವರು ಮುಖ್ಯಅತಿಥಿಸ್ಥಾನವನ್ನು ವಹಿಸಿ ದಿ. 18 ರಂದು ಮಾತನಾಡಿದರು. ಮಕ್ಕಳ ರಕ್ಷಣೆಗೆಒಂದು ಹಿನ್ನೆಲೆಇದೆ. ಪ್ರಥಮ ಜಾಗತಿಕ ಮಹಾಯುದ್ದದಿಂದ 1914-18 ಹಾಗೂ 1939-45 ಆದ ಅನರ್ಥಗಳಿಂದಾಗಿ ಲಕ್ಷಾಂತರ ಮಕ್ಕಳು ಅನಾಥರಾದರು, ನಿರ್ವಸಿತರಾದರು, ಆಹಾರ ಮತ್ತು ಓಷಧಗಳಿಲ್ಲದೆ ಅಸುನೀಗಿದರು.
ಇಂತಹ ಅನರ್ಥಗಳು ಆಗಬಾರದು ಮತ್ತು ಮಕ್ಕಳ ಕುರಿತು ಜಗತ್ತಿನ ಎಲ್ಲ ವಯಸ್ಕರು, ಕುಟುಂಬಗಳು,ಜನಪ್ರತಿನಿಧಿಗಳು, ಸಂಸ್ಥೆಗಳು, ಸರ್ಕಾರಗಳು, ವ್ಯಾಪಾರಿ ಉದ್ದಿಮೆಗಳು, ನ್ಯಾಯಾಲಯಗಳು, ಮಾಧ್ಯಮಗಳು, ಎಲ್ಲರೂ ಮಕ್ಕಳ ರಕ್ಷಣೆಗೆಜವಾಬ್ದಾರಿತಯಿಂದ ನಡೆದುಕೊಳ್ಳಬೇಕು. ಮಕ್ಕಳ ಮೇಲೆ ಎಂತಹದೇ ದೌರ್ಜನ್ಯಗಳನ್ನು ಮಾಡದಂತೆ ವಿಶ್ವಮಟ್ಟದಲ್ಲಿತಡೆಯಬೇಕೆಂದು ವಿಶ್ವಸಂಸ್ಥೆ ಹುಟ್ಟಿಕೊಂಡು 1989ರ ನವೆಂಬರ್ 20ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನುಜಾರಿಗೆತಂದಿದೆ.1992ರಲ್ಲಿ ಭಾರತ ಸರ್ಕಾರವು ಈ ಒಡಂಬಡಿಕೆಗೆ ಸಹಿ ಮಾಡುವ ಮೂಲಕ ಮಕ್ಕಳ ಹಕ್ಕುಗಳಿಗೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ ಎಂದರು.
ಜಿಲ್ಲಾ ಮಹಿಳಾ ಸಬಲಿಕರಣಘಟಕ ಹಾಗೂ ಮಹಿಳೆ ಮತ್ತು ಮಕ್ಕಳ ರಕ್ಷಣೆ ಪುನರ್ವಸಿತಿಗಾಗಿ ಇರುವಂತಹ ಸಖಿ ಒನ್ ಸ್ಟಾಫ್ ಸೆಂಟರ್ ಹಾಗೂ ಮಕ್ಕಳ ಸಹಾಯವಾಣಿ-1098 ಮತ್ತು ಮಹಿಳಾ ಸಹಾಯವಾಣಿ 181 ಪೊಲೀಸ್‌ತುರ್ತು ಸಹಾಯವಾಣಿ 112 ಹಾಗೂ ವೈಯಕ್ತಿಕ ಸ್ವಚ್ಛತೆ ವಿಚಾರಗಳ ಕುರಿತುಅರಿವು ಮೂಡಿಸಿದರು.ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಮಲ್ಲಿಕಾರ್ಜುನಗೌಡಟ್ರಸ್ಟ್‌ಅಧ್ಕಕ್ಷರು ನುಡಿದರು.ಅಧ್ಯಕ್ಷತೆಯನ್ನುಉಪಪ್ರಾಂಶುಪಾಲರಾದಜಗದೇಶ ಹಾದಿಮನಿ ವಹಿಸಿದ್ದರು.ರಾಜೇಶ್ವರರೆಡ್ಡಿ. ಶಾಮಿದ ಸಾಬ್. ಕನಕಾಚಲ ಇತರರು ಶಿಕ್ಷಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 