ಫೌಂಡೇಶನ್ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್ ಕಾರ್ಯ ಶ್ಲಾಘನೀಯ: ಅಣ್ಣಾಸಾಬ ಪಾಟೀಲ

ಫೌಂಡೇಶನ್ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್ ಕಾರ್ಯ ಶ್ಲಾಘನೀಯ: ಅಣ್ಣಾಸಾಬ ಪಾಟೀಲ Foundation Siddhi Humanity Foundation's work is commendable: Annasabha Patil

ಫೌಂಡೇಶನ್ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್ ಕಾರ್ಯ ಶ್ಲಾಘನೀಯ: ಅಣ್ಣಾಸಾಬ ಪಾಟೀಲ 

ಕಾಗವಾಡ 15: ನಿರ್ಗತಿಕರಿಗೆ ಅನ್ನ, ಆರೋಗ್ಯ ಮತ್ತು ಶಿಕ್ಷಣದ ಸೇವೆ ನೀಡುತ್ತಿರುವ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕ ಹಾಗೂ ಜುಗೂಳ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ಹೇಳಿದ್ದಾರೆ. ಅವರು, ರವಿವಾರ ದಿ.14 ರಂದು ತಾಲೂಕಿನ ಜುಗೂಳ ಗ್ರಾಮದ ಕೃಷ್ಣಾಮಾಯಿ ಮಂದಿರದಲ್ಲಿ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ, ಮಾತನಾಡುತ್ತಿದ್ದರು. ಕಳೆದ 2 ವರ್ಷಗಳಿಂದ ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ನವರು ಗ್ರಾಮದಲ್ಲಿ ರಕ್ತದಾನ, ಉಚಿತ ಡೆಂಗ್ಯೂ ಲಸಿಕೆ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮುಗ್ರಿ ಮತ್ತು ಬೆಳಗಾವಿ, ಮಿರಜ್ ಪಟ್ಟಣದ ನಿರ್ಗತಿಕರಿಗೆ ಅನ್ನದಾನ, ಗೋಶಾಲೆಗಳಿಗೆ ಮೇವು ವಿತರಣೆ ಹೀಗೆ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿರುತ್ತಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದ್ದು, ನಾವೂ ಕೂಡಾ ನಮ್ಮ ಕೈಲಾದಷ್ಟು ಸಹಾಯ ಸಹಕಾರ ಅವರಿಗೆ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮವನ್ನು ಸಸಿಗೆ ನೀರೇರೆದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ನೀತೀನ ಚವ್ಹಾನ ಮಾತನಾಡಿ, ಕೆನರಾ ಬ್ಯಾಂಕ್ ವತಿಯಿಂದ ಸರ್ಕಾರ ನೀಡುತ್ತಿರುವ ಅನೇಕ ಯೋಜನೆಗಳ ಕುರಿತು ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ನವರು ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರ ನೀಡಿ ಎಂದು ವಿನಂತಿಸಿದರು. ಈ ವೇಳೆ ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಸುಧಾಕರ ಗಣೇಶವಾಡಿ, ಜಯಪಾಲ ಯಮಕನಮರಡಿ, ಅರುಣ ಗಣೇಶವಾಡಿ, ಉಮೇಶ ಪಾಟೀಲ, ಅನೀಲ ಸುಂಕೆ, ಸುರೇಶ ಢಂಗ, ರಾಜು ಕಡೋಲೆ, ಆನಂದ ಖೋತ, ಭರತ ಲಾಂಡಗೆ, ಬಾಬಾಸಾಬ ತಾರದಾಳೆ, ದೀಪಕ ಪಾಟೀಲ, ಶಿಕ್ಷಕರಾದ ಎಂ.ಸಿ. ಹೂಗಾರ, ಡಿ.ಆರ್‌. ನಾಯಿಕ, ಎಸ್‌.ಎಸ್‌. ಭಾವಿ ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು, ಸಿದ್ಧಿ ಹುಮ್ಯಾನಿಟಿ ಫೌಂಡೇಶನ್‌ನ ಸದಸ್ಯರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.