ನಾವಲಗಿಯಲ್ಲಿ ಜಿಲ್ಲಾಮಟ್ಟದ ಪ್ರಥಮ ಕಲಾವಿದರ ಸಮ್ಮೇಳನ
First district-level artists' conference in Navalagi
ರಬಕವಿ-ಬನಹಟ್ಟಿ 06: ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ದಿ. 11 ರಂದು ರವಿವಾರ ಜರುಗಲಿರುವ ಜಿಲ್ಲಾಮಟ್ಟದ ಪ್ರಥಮ ಕಲಾವಿದರ ಸಮ್ಮೇಳನದ ಪೂರ್ವ ಸಿದ್ಧತೆಗಳು ಅಂತಿಮ ಹಂತ ತಲುಪಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ತಿಳಿದರು. ನಾವಲಗಿ ಗ್ರಾಪಂ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಮ್ಮೇಳನವು ಜಿಲ್ಲೆಯ ಕಲಾವಿದರಿಗೆ ಹೊಸ ದಿಕ್ಕು ತೋರಿಸುವ ಮಹತ್ವದ ವೇದಿಕೆಯಾಗಲಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸ್ಮರಣೀಯ ಧಾರೆಗಳಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ, ನಾವಲಗಿ ಗ್ರಾಮದ ತಾಳ ಗಾರುಡಿಗ ಸದಪ್ಪ ಕಂಪು, ಸೇರಿದಂತೆ ಅನೇಕ ಕಲಾವಿದರನ್ನು ಸಮ್ಮೇಳನದಲ್ಲಿ ಸ್ಮರಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಲಾಗುವುದು
ಕಲಾವಿದರ ಶ್ರಮಕ್ಕೆ ಸಲ್ಲುವ ಸಾರ್ಥಕತೆಯ ದೃಷ್ಟಿಯಿಂದ ಹಿರಿಯ ಹಾಗೂ ಕಿರಿಯ 50 ಕ್ಕೂ ಅಧಿಕ ಕಲಾವಿದರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಮ್ಮೇಳನದಲ್ಲಿ ಐವತ್ತಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಲಿದು. ಸುಮಾರು 500 ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿ ಕಲಾಪ್ರದರ್ಶನ ಮಾಡಲಿದ್ದಾರೆ. ವಿವಿಧ ಕಲಾ ಪ್ರಕಾರಗಳ ವೈಭವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ದಿನವಿಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮೀಣ ಭಾಗದಲ್ಲಿ ಇಂತಹ ದೊಡ್ಡ ಮಟ್ಟದ ಕಲಾ ಸಮ್ಮೇಳನವನ್ನು ಆಯೋಜಿಸಿರುವುದು ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಮೈಲುಗಲ್ಲಾಗಲಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಕಲಾವಿದ ಮಲ್ಲಪ್ಪ ಗಣಿಯವರನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಶಾಸಕರು, ಮಾಜಿ ಶಾಸಕರು, ಸಚಿವರು, ಮಠಾಧೀಶರು, ಧುರೀಣರು ಸೇರಿದಂತೆ ಅನೇಕ ಗಣ್ಯ ಮಾನ್ಯರು ಪಾಲ್ಗೊಳಲ್ಲಿದ್ದಾರೆ ಎಂದು ಶೆಲ್ಲಿಕೇರಿ ತಿಳಿದರು.
ತಾಲೂಕಾ ಕಸಾಪ ಅಧ್ಯಕ್ಷ ಮ. ಕೃ.ಮೇಗಾಡಿ ಮಾತನಾಡಿ, ಸಮ್ಮೇಳನದಲ್ಲಿ ಕಲಾವಿದರ ಬದುಕು, ಸವಾಲುಗಳು, ಅವಕಾಶಗಳು ಹಾಗೂ ಕಲೆಯ ಸಂರಕ್ಷಣೆಯ ಕುರಿತು ಗೋಷ್ಠಿಗಳು ನಡೆಯಲಿವೆ. ಕಲೆಗೆ ಬದುಕು ಕೊಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಸೇರಬಹುದೆಂದು ನೀರೀಕ್ಷಿಸಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ರೇಖಾ ಕಾಂತಿ ಮಾತನಾಡಿ, ಇದೇ ಪ್ರಥಮ ಬಾರಿಗೆ ಕಲಾವಿದರ ತವರೂರಾದ ನಾವಲಗಿಯಲ್ಲಿ ಬೃಹತ್ ಸಮ್ಮೇಳನ ನಡೆಯುತ್ತಿದ್ದು, ಗ್ರಾಮದ ಸರ್ವರ ಸಹಾಯ-ಸಹಕಾರದಿಂದ ಸಮ್ಮೇಳನ ಅತ್ಯಂತ ವಿಜಂಭೃಣೆ, ವೈಭವಯುತವಾಗಿ ನಡೆಯಲಿದೆ. ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆ ವಿಶೇವಾಗಿದ್ದು, ಮೆರಗು ತರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು. ಗ್ರಾ.ಪಂ. ಸದಸ್ಯ ದಾನಪ್ಪ ಆಸಂಗಿ, ಗುರು ಮರಡಿಮಠ, ಹಣಮಂತ ಬರಗಾಲ, ಪಿಕೆಪಿಎಸ್ ನಿರ್ದೇಶಕ ಆನಂದ ಕಂಪು, ಸಿದ್ದು ಗುಂಡಿ, ಮುತ್ತಪ್ಪ ಅಂಗಡಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮ್ಮೇಳನ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 