ನಿವೃತ್ತ ಶಿಕ್ಷಕ ಎ.ಎಸ್. ಪಾಟೀಲರಿಗೆ ಸನ್ಮಾನ
Felicitation of retired teacher A.S. Patil
ಲೋಕದರ್ಶನ ವರದಿ
ಕಾಗವಾಡ 03 : ವಿದ್ಯಾರ್ಥಿಯ ಯಶಸ್ಸಿನ ನಿಜವಾದ ಗೌರವ ಅವನ ಶಿಕ್ಷಕರಿಂದ ಮಾತ್ರ ಸಿಗುತ್ತದೆ. ಸರ್ಕಾರಿ ಸೇವೆಗೆ ಸೇರಿದ ನಂತರ ಶಾಲಾ ಜೀವನದಲ್ಲಿ ರೂಪುಗೊಂಡ ವಿದ್ಯಾರ್ಥಿಯ ವೈಭವವನ್ನು ಪ್ರತಿಯೊಬ್ಬ ಶಿಕ್ಷಕನೂ ತನ್ನ ಕಣ್ಣುಗಳಿಂದ ನೋಡುವ ಅದೃಷ್ಟ ದೊರೆಯುವುದಿಲ್ಲ. ಅಂತಹ ಸೌಭಾಗ್ಯ ಈಗ ನನಗೆ ಲಿಭಿಸಿದೆ ಎಂದು ಸಿದ್ದೇಶ್ವರ ವಿದ್ಯಾಲಯದ ನಿವೃತ್ತ ಶಿಕ್ಷಕ ಎಸ್.ಎ. ಪಾಟೀಲ್ ಹೇಳಿದ್ದಾರೆ.
ಅವರು, ಮಂಗಳವಾರ ದಿ. 30 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಹೊಸ ಇಂಗಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ನಿವೃತ್ತರಾದ ಡಾ. ಸುಧೀರ್ ಬೋಲೆ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಡಾ. ಸುಧೀರ್ ಬೋಲೆ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಡಾ. ಸುಧೀರ್ ಬೋಲೆ ಮಾತನಾಡಿ, ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದರೂ, ಸಮಾಜಸೇವೆ ಮತ್ತು ವೈದ್ಯಕೀಯ ಸೇವೆ ಎಂದಿಗೂ ನಿಲ್ಲುವುದಿಲ್ಲ. ಸಾಮಾನ್ಯ ನಾಗರೀಕರಿಗಾಗಿ ನನ್ನ ವೈದ್ಯಕೀಯ ಕಾರ್ಯ ನಿರಂತರವಾಗಿ ಮುಂದುವರಿಯುತ್ತದೆ ಎಂದರು.
ಈ ವೇಳೆ ಡಾ.ಸುಧೀರ್ ಪಾಟೀಲ್, ಸಹಕಾರಿ ರಿಜಿಸ್ಟ್ರಾರ್ ಸಂಜಯ್ ಪೂಜಾರಿ, ಸಂಜಯಕುಮಾರ ಅಳತೆ, ಭೀಮು ಬೋಲೆ, ಮಾಜಿ ಜಿ.ಪಂ. ಸದಸ್ಯ ಅಣ್ಣಾಸಾಹೇಬ ಪವಾರ, ಸಿಬಿಕೆಎಸ್ ಕಾರ್ಖಾನೆಯ ನಿರ್ದೇಶಕ ಮಹಾವೀರ ಕಾತ್ರಾಳೆ, ಚಿದಾನಂದ ಪಾಟೀಲ, ಅಶೋಕ ಕಾತ್ರಾಳೆ, ಸುಭಾಶ ಪಾಟೀಲ, ಭೀಮು ಅಕಿವಾಟೆ, ಸುರೇಶ ಚೌಗಲೆ, ರಾಜು ಚೌಗಲೆ, ಡಾ. ಸುಕುಮಾರ ಚೌಗಲೆ, ಡಾ. ರಮೇಶ ಖಿಚಡೆ, ಡಾ. ಲಕ್ಷ್ಮಣ ಪವಾರ, ಗಣಪತಿ ಧನವಾಡೆ, ಚಂದ್ರಕಾಂತ ಲಗೊಂಟೆ, ವಿಲಾಸ ಪವಾರ, ಜ್ಯೋತಿರಾಮ ಯಾದವ ಸಂಜಯ ಕುಡಚೆ ಸೇರಿದಂತೆ ಮಾಂಜರಿ, ಇಂಗಳಿ, ಶಿರಗುಪ್ಪಿ ಮತ್ತು ಅಂಕಲಿ ಗ್ರಾಮಗಳ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 