ಇಂದು ತೆರೆಗೆ ತಂದೆ-ಮಗನ ಬಾಂಧವ್ಯದ 'ಚೌಕಿದಾರ್'
Father-son relationship 'Chowkidar' hits screens today
'ರಥಾವರ' ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ಚೌಕಿದಾರ್' ಸಿನಿಮಾ ಇಂದು (ಜ. 30) ರಾಜ್ಯಾದ್ಯಂತ ರೀಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳಿಗೆ ಜನ ಮೆಚ್ಚಿದ್ದು, ಸಿನಿಮಾ ನೋಡುವ ಕಾತುರದಲ್ಲಿದ್ದಾರೆ. ಇತ್ತೀಚೆಗೆ ನಡೆದ ಚಿತ್ರದ ಪ್ರೀ-ರೀಲೀಸ್ ಇವೆಂಟ್‌ಗೆ ನಟ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ, 'ಒಳ್ಳೆ ವ್ಯಕ್ತಿಗೆ ಒಳ್ಳೆಯದು ಆಗಬೇಕು ಎಂಬುವುದು ನಮ್ಮ ಭಾವನೆ. ಈ ಸಿನಿಮಾ ನೀಟ್ ಆಗಿ ಹೋಗಲಿ. ನಿಮ್ಮಂತ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು.
ಇನ್ನೂ ಹೆಚ್ಚಿನ ಸಿನಿಮಾ ಮಾಡಿ ನಮ್ಮದೇ ಸಿನಿಮಾ ಮಾಡಿ. ಚಂದ್ರಶೇಖರ್ ಬಂಡಿಯಪ್ಪ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ ಅದು ಯಾಕೋ ಟೇಕಾಫ್ ಆಗಲಿಲ್ಲ. ತುಂಬಾ ಒಳ್ಳೆ ಡೈರೆಕ್ಟರ್. ಎಮೋಷನ್ ತುಂಬಾ ಚೆನ್ನಾಗಿ ತೋರಿಸ್ತಾರೆ. ಸಾಯಿ ಕುಮಾರ್ ನಾನು ಮುದ್ದಿನ ಕಣ್ಮಣಿಯಿಂದ ಸ್ನೇಹಿತರು. ಬ್ರದರ್ಸ್ ಅಂದರೆ ತಪ್ಪಾಗಲ್ಲ. ಈ ಚಿತ್ರದಲ್ಲಿ ಪೃಥ್ವಿ ಗೆಟಪ್ ಚೆನ್ನಾಗಿದೆ. ಧನ್ಯಾ ಚಿಕ್ಕ ಮಗುವಿನಿಂದ ನೋಡಿಕೊಂಡು ಬಂದಿದ್ದೇವೆ. ಈಗ ಅವಳು ವಿಭಿನ್ನ ಸಿನಿಮಾಗಳನ್ನು ಮಾಡುತ್ತಾರೆ. ಸಚಿನ್ ಸಂಗೀತ ಚೆನ್ನಾಗಿ ಮಾಡಿದ್ದಾರೆ. ಕ್ಯಾಮೆರಾ ವರ್ಕ್ ಕೂಡ ಚೆನ್ನಾಗಿದೆ' ಎಂದು ಹಾರೈಸಿದರು.
ನಂತರ ಹಿರಿಯ ನಟ ಸಾಯಿ ಕುಮಾರ್ ಮಾತನಾಡಿ, 'ಶಿವಣ್ಣ ಬಂದು ನಮ್ಮ ಸಿನಿಮಾಗೆ ಹಾರೈಕೆ ಮಾಡಿರುವುದು ಖುಷಿ. ಶಿವಣ್ಣ ನಾನು ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಅವರ ಎನರ್ಜಿಗೆ ಹ್ಯಾಟ್ಸಪ್ ಹೇಳಬೇಕು. ಚೌಕಿದಾರ್ ಒಂದೊಳ್ಳೆ ತಂಡ. ಧನ್ಯಾ ಅದ್ಭುತ ನಟಿ. ಚಂದ್ರಶೇಖರ್ ಒಳ್ಳೆ ಕಥೆ ಮಾಡಿದ್ದಾರೆ. ಒಂದೊಳ್ಳೆ ತಾರಾಬಳಗ, ಟೆಕ್ನಿಷಿನ್ ಚಿತ್ರದಲ್ಲಿದೆ. ಇದೇ 30ರಂದು ಸಿನಿಮಾ ತೆರೆಗೆ ಬರ್ತಿದೆ. ನಿಮ್ಮ ಬೆಂಬಲ ಇರಲಿ' ಎಂದರು. ಪೃಥ್ವಿ ಅಂಬಾರ್ ಈ ಚಿತ್ರದ ನಾಯಕರಾಗಿದ್ದಾರೆ. ನಾಯಕಿಯಾಗಿ ಧನ್ಯಾ ಸಾಥ್ ಕೊಟ್ಟಿದ್ದಾರೆ. ಸಾಯಿ ಕುಮಾರ್ ಇಲ್ಲಿ ವಿಶೇಷ ಪಾತ್ರದಲಿಯೇ ಅಭಿನಯಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
'ಚೌಕಿದಾರ್' ಚಿತ್ರದಲ್ಲಿ ತಂದೆ ಮತ್ತು ಮಗನ ಬಾಂಧವ್ಯದ ಕಥೆಯನ್ನು ಹೇಳಿದ್ದಾರೆ. ಫ್ಯಾಮಿಲಿ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ. ವಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ನಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 