ರೈತರು ದೇಶದ ಬೆನ್ನೆಲುಬು, ರೈತ ದಿನಾಚರಣೆಯನ್ನು ಅರ್ಥ ಪೂರ್ಣ ವಾಗಿ ಆಚರಿಸಿ
Farmers are the backbone of the country, celebrate Farmers' Day meaningfully
ಹಾವೇರಿ, 25 : ದೇಶದ ರೈತರು ಮಾಡುತ್ತಿರುವ ಮಹತ್ತರ ಕೆಲಸಗಳನ್ನು ಗೌರವಪೂರ್ವಕವಾಗಿ ಡಿಸೆಂಬರ್ 23 ಅನ್ನು ಚೌಧರಿ ಚರಣ ಸಿಂಗ್ ರವರ ಜನ್ಮದಿನ ಅಂಗವಾಗಿ ರಾಷ್ಟ್ರೀಯ ರೈತರ ದಿನಾಚರಣೆ ಅಥವಾ ಕಿಸಾನ್ ದಿವಸ್ ವನ್ನಾಗಿ ಆಚರಿಸಲಾಗುತ್ತದೆ ಎಂದುಉಪಾಸಭಾಧ್ಯಕ್ಷರಾದ ರುದ್ರ್ಪ ಲಮಾಣಿ ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ಕೃಷಿ ಇಲಾಖೆ,ತಾಲ್ಲೂಕು ಕೃಷಿಕ ಸಮಾಜ ಹಾಗೂ ತಾಲ್ಲೂಕ ಆತ್ಮಾ ಸಲಹಾ ಸಮೀತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಐದನೇ ಪ್ರಧಾನ ಮಂತ್ರಿಯಾದ ಚೌಧರಿ ಚರಣ್ ಸಿಂಗ್ರವರು ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು.
ಜೈ ಜವಾನ ಜೈ ಕಿಸಾನ ಎಂಬ ಪ್ರಸಿದ್ದ ಘೋಷಣೆಯನ್ನು ಅವರು ಅನುಸರಿಸಿದರು. ರೈತರಿಗೆ ಸಿಗಬೇಕಾದ ಸೌಲಭ್ಯ ಗಳನ್ನು ಸಮರ್ಕವಾಗಿ ತಲುಪಿಸಿ, ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಲಕರಣೆಗಳನ್ನು ಯಾವುದೇ ವಿಳಂಬ ವಿಲ್ಲದೆ ವಿತರಿಸಿ ಉತ್ತಮ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ನಾಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷರಾದ ಎಸ್ ಎಫ್ ಏನ್ ಗಾಜಿಗೌಡ್ರ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಶಿವುಕುಮಾರ ಮಲ್ಲಾಡದ, ಸಹಾಯಕ ಕೃಷಿ ನಿರ್ದೇಶಕ ವೀರಭದ್ರ್ಪ ಬಿ. ಹೆಚ್ ರೈತ ಸಂಘದ ಅಧ್ಯಕ್ಷರಾದ ಹನುಮಂತಪ್ಪ ಹುಚ್ಚಣ್ಣನವರ, ತಾಲ್ಲೂಕ ಆತ್ಮಾ ಸಲಹಾ ಸಮೀತಿಯರಾದ ಪ್ರಕಾಶ ಹಂದ್ರಾಳ, ಕೃಷಿಕ ಸಮಾಜದ ಅಧ್ಯಕ್ಷರಾದ ವೀರಣ್ಣ ಕಳ್ಳಿಹಾಳ,ಸುರೇಶ ಚಲುವಾದಿ, ಸಂಜೀವ ಕುಮಾರ ನೀರಲಗಿ, ಕೆವಿಕೆ ಹನಮನಮಟ್ಟಿ, ವಿಜ್ಞಾನಿ ಡಾ.ಬಸಮ್ಮ ಹಾದಿಮನಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 