ಯರಗಟ್ಟಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ
Farmers' protest continues in Yaragati
ಯರಗಟ್ಟಿ, 06 : ಪಟ್ಟಣದ ಸಂಗೋಳ್ಳಿ ರಾಯಣ್ಣವೃತ್ತದಲ್ಲಿ ಐದನೇ ದಿನವೂ ರೈತರ ಪ್ರತಿಭಟನೆ ಮುಂದುವರೆದಿದ್ದು, ರೈತರ ರಸ್ತೆ ತಡೆಯಿಂದ ದಿನವಿಡಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ರೈತರು ರಸ್ತೆ ಮೇಲೆಯೇ ಅಡುಗೆ ಮಾಡಿ ಊಟ ಮಾಡಿದರು.ಬೆಂಬಲ ಬೆಲೆ ಘೋಷಣೆ ಆಗುವವರೆಗೆ ಈ ಹೋರಾಟ ಮುಂದುವರೆಯುತ್ತದೆ ಎಂದು ರೈತ ಮುಖಂಡರು ಮಹಾಂತೇಶ ತೋಟಗಿ ತಿಳಿಸಿದ್ದು.ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸೋಮು ರೈನಾಪೂರ ಮಾತನಾಡಿದ ಶುಕ್ರವಾರ ಯರಗಟ್ಟಿ ಸಂಪೂರ್ಣ ಬಂದ್ ಇರುತ್ತದೆ ಮತ್ತು ಸರಕಾರ 24 ಗಂಟೆ ಒಳಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪಂಚನಗೌಡ ದ್ಯಾಮನಗೌಡರ, ಕುಮಾರ ಹಿರೇಮಠ, ಡಾ. ವಿಶ್ವನಾಥ ತಾವಂಶಿ, ವಿರೇಶ ಸೋಬರದಮಠ, ಉದಯ ಕರ್ಜಗಿಮಠ, ಶಂಕರೆಪ್ಪ ವಜ್ರಮಟ್ಟಿ, ಕೃಷಿ ಸಮಾಜದ ರಾಜ್ಯಾಧ್ಯಕ್ಷ ಮಾಣಿಕ್ಯ ಚಿಲ್ಲೂರ, ನಿರ್ಮಾಲಾ ಹನಸಿ, ಗೂಳಪ್ಪ ಕುಂಬಾರ, ಬಾಳಪ್ಪ ತಡಸಿ, ಯಕ್ಕೇರೆಪ್ಪ ತಳವಾರ, ಬಸವರಾಜ ಬಿಜ್ಜೂರ, ಯಲ್ಲನಾಯ್ಕ ನಾಯ್ಕರ, ಸಂತೋಷ ದೇವರಡ್ಡಿ, ರಂಗಪ್ಪ ಗಂಗರಡ್ಡಿ, ಸೋಮು ರೈನಾಪೂರ, ರಾಮಕೃಷ್ಣ ಎಳ್ಳಮ್ಮಿ, ಲಕ್ಕಪ್ಪ ಬಿಜ್ಜನವರ, ಮಹಾದೇವ ಯಂಡ್ರಾವಿ, ಸಿಂಧೂರ ತೆಗ್ಗಿ, ಮುತ್ತು ವೀರಾಪೂರ, ಹಾಗೂ ಸವದತ್ತಿ, ಮುನವಳ್ಳಿ, ಮತ್ತು ಸುತ್ತಲಿನ ರೈತರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 