ಹಜರತ್ ಸಯ್ಯದ್ ಶಾ ಮುರ್ತುಜಾ ಖಾದ್ರಿ ಉರಸೇ ಷರೀಫ್ ಅಂಗವಾಗಿ ರೈತರ ಖಾಲಿ ಗಡ್ಡಿ ಬಂಡಿ(ಚಕ್ಕಡಿ) ಸ್ಪರ್ಧೆ
Farmers' empty cart (chakkadi) competition as part of Hazrat Syed Shah Murtuza Qadri Urs-e-Sharif
ಹನುಮಸಾಗರ 07: ಪಟ್ಟಣದಲ್ಲಿ ಹಜರತ್ ಸಯ್ಯದ್ ಶಾ ಮುರ್ತುಜಾ ಖಾದ್ರಿ ಉರಸೇ ಷರೀಫ್ ಅಂಗವಾಗಿ ಅಬ್ದುಲ್ ಕಲಂ ಯುವಕರ ಸಂಘ ಹಾಗೂ ಕಟಗೇರ ಓಣಿ ರೈತರ ಸಹಯೋಗದಲ್ಲಿ ಶುಕ್ರವಾರ ರಂದು ಖಾಲಿ ಗಡ್ಡಿ ಬಂಡಿ(ಚಕ್ಕಡಿ) ಸ್ಪರ್ಧೆಯ ದಿವ್ಯ ಸಾನಿಧ್ಯ ವನ್ನು ಹಜರತ್ ಸೈಯದ್ ಶಾ ಮುರ್ತುಜಾ ಹುಸೇನಿ ಉಲ್ ಖಾದ್ರಿ ವಹಿಸಿದ್ದರು.ಖಾಲಿ ಗಡ್ಡಿ ಬಂಡಿ ಸ್ಪರ್ದೆಯನ್ನು ಹಸನಸಾಬ ದೋಟಿಹಾಳ ಕಾಡಾ ಅಧ್ಯಕ್ಷರು ಮುನಿರಾಬಾದ್ ಉದ್ಘಾಟಿಸಿ ಮಾತನಾಡಿ.ರೈತರ ಶಕ್ತಿ ಮತ್ತು ಎತ್ತುಗಳ ಮೇಲಿರುವ ಪ್ರೀತಿಯ ಪ್ರತೀಕವಾದ ಈ ಸ್ಪರ್ಧೆ ನಮ್ಮ ತಾಲೂಕಿನಲ್ಲಿ ನಡೆಸುತ್ತಿರುವುದು ಯುವ ಪೀಳಿಗೆಗೆ ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ರುದ್ರಗೌಡ ಗೌಡಪ್ಪನವರ ಮತ್ತು ಸೂಚಪ್ಪ ಭೂವಿ ಜೋಡೆತ್ತುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಗ್ರಾಮೀಣ ಯುವಜನರಲ್ಲಿ ಸಂಘಟನಾ ಮನೋಭಾವ ಬೆಳೆಯುವಲ್ಲಿ ಈ ರೀತಿಯ ಸ್ಪರ್ಧೆಗಳು ಉತ್ತಮವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಆರೋಗ್ಯಕರ ರೀತಿಯಲ್ಲಿ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.ಮಹಾಂತೇಶ ಅಗಸಿಮುಂದಿನ ಮಾತನಾಡಿ, ’ರೈತರ ಆದಾಯೋತ್ಪನ್ನ ಚಟುವಟಿಕೆಗಳಿಗೆ ಎತ್ತಿನ ಕರುಗಳು ತುಂಬಾ ಮುಖ್ಯವಾಗಿದ್ದು, ಆಧುನಿಕ ಯಂತ್ರೋಪಕರಣಗಳು ಬರುವ ಮುನ್ನ ರೈತನ ಜೀವನಾಡಿಯಾಗಿದ್ದು. ಆಧುನಿಕ ಕೃಷಿ ಪದ್ಧತಿಯ ಅಳವಡಿಕೆಯಿಂದಾಗಿ ಗ್ರಾಮೀಣ ಜನರಲ್ಲಿ ಎತ್ತುಗಳ ಸಾಕಾಣಿಕೆ ಕ್ಷೀಣಿಸಿರುವುದು ವಿಷಾದನೀಯ’ ಎಂದರು.ಈ ಸ್ಪರ್ಧೆಯಲ್ಲಿ 20 ಜೋಡೆತ್ತಗಳನ್ನು ಬಾಗಲಕೋಟೆ ,ಗದಗ ಬಿಜಾಪುರ ರಾಯಚೂರು, ಕೊಪ್ಪಳ,ಜಿಲ್ಲೆಯ ಎತ್ತುಗಳು ಭಾಗವಾಗಿ ವಹಿಸಿದವು
ಭಾಗವಹಿಸಿದ್ದರೇಣುಕಾ ಯಲ್ಲಮ್ಮ ದೇವಿ ಸಾ// ಹಿರೇಗೊನ್ನಾಗರಮಾಲಿಕತ್ವದ ಎತ್ತುಗಳು ಮಿಂಚಿನಂತೆ ಓಡುವುದರ ಮೂಲಕ ಪ್ರಥಮಸ್ಥಾನ ತನ್ನದಾಗಿಸಿಕೊಂಡಿದೆ,ದ್ವಿತೀಯ ಬಹುಮಾನ ವನ್ನು ಹೊಳೆ ಬಸವೇಶ್ವರ ಪ್ರಸನ್ನ ಮಾಚಕನೂರು ಗ್ರಾಮದ ಎತ್ತುಗಳು ಪಡೆದವು, ತೃತೀಯ ಬಹುಮಾನ ವನ್ನು ಶರಣಬಸವೇಶ್ವರ ಸಾ//ಜಿಗಳೂರು ನಾಲ್ಕನೇ ಬಹುಮಾನ ಮೌಲಾಸಾಬ ಹುಲಿಯಪುರ, ಐದನೇ ಬಹುಮಾನ ಕರ್ಣನ ಸಾಮ್ರಾಜ್ಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದ ಎತ್ತುಗಳು ಪಡೆದವು..ಮೈನುದೀನ್ ಖಾಜಿ,ವಿಶ್ವನಾಥ್ ಕನ್ನೂರ,ಸೂಚಪ್ಪ ಬೋವಿ, ಮಂಜುನಾಥ ಹುಲ್ಲೂರು, ಶಿವಪುತ್ರ್ಪ ಕಂಪ್ಲಿ, ಶಿವಾನಂದ ಹುಲ್ಲೂರು, ಅಬ್ದುಲ್ ರಜಾಕ್ ಟೇಲರ್,ಮೌಲಾಸಾಬ ಮೋಟಿಗಿ, ಮುತ್ತಣ್ಣ ಪತ್ತಾರ,ಹನುಮಂತ ಪೂಜಾರ, ಶೇಖಪ್ಪ ಸಜ್ಜನ, ಕಾಸಿಂ ಸಾಬ ಕಟಗಿ, ಹುಸೇನಸಾಬ ಕಟಗಿ, ಚಂದ್ರು ಹಿರೇಮನಿ,ಇಮಾಮ್ ಸಾಬ್ ಕಟಗಿ, ರಾಜಮಹ್ಮದ ಕಟಗಿ, ಹನುಮಂತಪ್ಪ ಬಿಂಗಿ,ಮೈಬುಸಾಬ ಕಟಗಿ,ಇತ್ತರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 