ತೊಗರಿ ಬೆಳೆ ವಿಮಾ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘದಿಂದ ಮನವಿ
Farmers' association appeals for crop insurance compensation
ದೇವರಹಿಪ್ಪರಗಿ 03: ತಾಲೂಕಿನ ರೈತರು ತೊಗರಿ ಬೆಳೆಗೆ ವಿಮೆ ತುಂಬಿದ್ದು ಅಂತಹ ರೈತರಿಗೆ ವಿಮೆ ಪರಿಹಾರ ಕೂಡಲೇ ನೀಡಬೇಕೆಂದು ಆಗ್ರಹಿಸಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿ ಶರಣಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಕೃಷಿ ಇಲಾಖೆಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷರಾದ ಈರ್ಪ ಕುಳೆಕುಮಟಗಿ ಹಾಗೂ ಗೌರವಾಧ್ಯಕ್ಷರಾದ ಶಿವಾನಂದ ಹಿರೇಮಠ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿ ಈ ಬಾರಿ ತೊಗರಿ ಬೆಳೆ ವಿಫಲವಾಗಿದ್ದು ರೈತರಿಗೆ ನಷ್ಟವಾಗಿದೆ.
ಶೇ 90ರಷ್ಟು ತೊಗರಿ ಬೆಳೆ ಹಾಳಾಗಿದೆ.ಅಕಾಲಿಕ ಮಳೆ ಹಾಗೂ ಹವಾಮಾನದಲ್ಲಿ ಏರುಪೇರು ಹೀಗೆ ಹಲವಾರು ಕಾರಣಗಳಿಂದ ಬೆಳೆ ವಿಫಲವಾಗಿದೆ ಹಾಗೂ ಕಲಬುರ್ಗಿ ಜಿಲ್ಲೆಯ ರೈತರಿಗೆ ವಿಮೆ ಪರಿಹಾರ ಜಮಾ ಆಗಿದೆ ಆದರೆ ವಿಜಯಪುರ ಜಿಲ್ಲೆಯ ರೈತರಿಗೆ ವಿಮಾ ಕಂಪನಿಯಿಂದ ಇಲ್ಲಿಯವರೆಗೂ ಪರಿಹಾರ ಜಮಾ ಆಗಿಲ್ಲ. ರೈತರಿಗೆ ಈ ಕೂಡಲೇ ಪರಿಹಾರ ನೀಡಿ ರೈತರ ತೊಂದರೆಗಳಿಗೆ ಸ್ಪಂದಿಸಲು ಓರಿಯೆಂಟಲ್ ವಿಮಾ ಕಂಪನಿ ಅಧಿಕಾರಿ ಸುದೀರ್ ಹಾಗೂ ಕೃಷಿ ಅಧಿಕಾರಿ ಶರಣಗೌಡ ಬಿರಾದಾರ ಅವರಿಗೆ ಆಗ್ರಹಿಸಿದರು.ಮನವಿ ಪತ್ರ ಸ್ವೀಕರಿಸಿದ ಕೃಷಿ ಅಧಿಕಾರಿ ಶರಣಗೌಡ ಬಿರಾದಾರ ಅವರು ಮಾತನಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಚಂದ್ರಕಾಂತ ಪ್ಯಾಟಿ, ಸಂಪತ್ ಜಮಾದಾರ,ಶಾಖೀರಾ ಹೆಬ್ಬಾಳ, ಚೆನ್ನಮ್ಮ ಮೆತ್ರಿ, ಸುನಂದಾ ಸೊನ್ನಳ್ಳಿ, ಮಲ್ಲನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಕಾಶಿನಾಥ ಬಿರಾದಾರ, ಚಂದ್ರಕಾಂತ ಕುಂಬಾರ, ಲಕ್ಕಪ್ಪ ಹೂಗಾರ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 