ಕಣ್ಮನ ಸೆಳೆದ ಗಾಳಿಪಟ ಉತ್ಸವ: ಗಜಾನನ ಮಂಗಸೂಳಿ ಚಾಲನೆ
Eye Catching Kite Festival: Gajan's Mangasuli Run
ಕಣ್ಮನ ಸೆಳೆದ ಗಾಳಿಪಟ ಉತ್ಸವ: ಗಜಾನನ ಮಂಗಸೂಳಿ ಚಾಲನೆ
ಅಥಣಿ 27: ರೋಟರಿ ಸಂಸ್ಥೆ ಆಯೋಜಿಸಿದ್ದ ಜಿ.ಎಮ್ ಗಾಳಿಪಟ ಉತ್ಸವದಲ್ಲಿ ಯುವಕ, ಯುವತಿಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಗಾಳಿಪಟ ಉತ್ಸವಕ್ಕೆ ವಿಶೇಷ ಮೆರಗು ನೀಡಿದರು. ಪಟ, ಪಟ, ಗಾಳಿಪಟ ಎನ್ನುವಂತೆ ಭೋಜರಾಜ ಕ್ರೀಡಾಂಗಣದ ಬಾನೆತ್ತರದಲ್ಲಿ ಎಲ್ಲಿ ನೋಡಿದಲ್ಲೆಡೆ ಗಾಳಿಪಟಗಳ ಹಾರಾಟ ನೋಡುಗರ ಕಣ್ಮನ ಸೆಳೆಯಿತು.
ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಪಟ, ಪಟ, ಗಾಳಿಪಟ ಎಲ್ಲಿ ನೋಡಿದಲ್ಲಿ ಗಾಳಿಪಟ ಹಾರಿಸುತ್ತಿರುವ ನೂರಾರು ಸಂಖ್ಯೆಯಲ್ಲಿದ್ದ ಯುವಕರು, ಬಾಲಕರು ಬಾನೆತ್ತರಕ್ಕೆ ತಮ್ಮ ತಮ್ಮ ಗಾಳಿಪಟಗಳನ್ನು ಹಾರಿಸಿ ಸಂತೋಷ ಪಟ್ಟಿದ್ದಷ್ಟೇ ಅಲ್ಲ ಕುಣಿದು ಕುಪ್ಪಳಿಸಿದರು.
ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ, ಗಾಳಿಪಟದಂತಹ ವಿನೂತನ ಕಾರ್ಯಕ್ರಮವನ್ನು ಅಥಣಿಯ ಜನತೆಗೆ ಇದೇ ಪ್ರಥಮ ಬಾರಿಗೆ ರೋಟರಿ ಸಂಸ್ಥೆಯ ಮೂಲಕ ಕೊಡಮಾಡಲಾಗಿದೆ ಎಂದ ಅವರು ಸಾವಿರಕ್ಕೂ ಹೆಚ್ಚು ಜನ ಈ ಉತ್ಸವದಲ್ಲಿ ಪಾಲ್ಗೊಂಡಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದರು.
ಗಾಳಿಪಟ ಉತ್ಸವದ ಯಶಸ್ಸಿಗೆ ಪುರಸಭಾ ಸದಸ್ಯ ರಾವಸಾಹೇಬ ಐಹೊಳೆಯವರ ಆರ್‌ಎನ್.ಎ ಸಂಸ್ಥೆ ಸಹಕಾರ ನೀಡಿದೆ ಜೊತೆಗೆ ಜಿ.ಎಮ್ ಗ್ರುಪ್, ಇನ್ನರ ವ್ಹೀಲ್ ಸಂಸ್ಥೆಯೂ ಕೂಡ ಸಹಕಾರ ನೀಡಿದೆ ಎಂದ ಅವರು ರೋಟರಿ ಸಂಸ್ಥೆಯ ಮೂಲಕ ಅಥಣಿಯಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರೋಟರಿ ಸಂಸ್ಥೆ ಅಥಣಿ ಜನರ ಮನ ಗೆದ್ದಿದೆ ಎಂದರು.
ರೋಟರಿ ಸಂಸ್ಥೆಯ ಇವೆಂಟ್ ಚೇರ್ಮನ್ ಅರುಣ ಯಲಗುದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅರುಣ ಸೌದಾಗರ, ಡಾ.ಪಿ.ಪಿ.ಮೀರಜ, ಅನೀಲ ದೇಶಪಾಂಡೆ, ಶ್ರೀಕಾಂತ ಅಥಣಿ, ಡಾ.ಆನಂದ ಕುಲಕರ್ಣಿ, ಡಿ.ಡಿ.ಮೇಕನಮರಡಿ, ಶೈಲೇಶ ಜಾಧವ, ಡಾ.ಸಂಕ್ರಟ್ಟಿ, ಡಾ.ಮೇತ್ರಿ, ಡಾ.ಗುಂಜಿಗಾಂವಿ, ಇನ್ನರ ವ್ಹೀಲ ಅಧ್ಯಕ್ಷೆ ತೃಪ್ತಿ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 