ಡಾಕ್ಟರ್ ವೀರೇಂದ್ರ ಹೆಗಡೆಯವರ ಜನ್ಮದಿನೋತ್ಸವ
Dr. Veerendra Hegde's birthday celebration
ರಾಣೇಬೆನ್ನೂರು 30 : ನ 29 ಇಲ್ಲಿನ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೃಹತ್ ಯೋಜನೆಯ, ಸಂಸ್ಥಾಪಕ, ಮಾತೃ ಸ್ವರೂಪಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಜನ್ಮದಿನೋತ್ಸವದ ನಿಮಿತ್ತ ವಿವಿಧ ರೀತಿಯಲ್ಲಿ ದಾನ,ಧರ್ಮ, ಪರೋಪಕಾರಗಳಂತಹ ಬಹುಮುಖಿ ಕಾರ್ಯಕ್ರಮಗಳು ವಿವಿಧ ಸಂಘ,ಸಂಸ್ಥೆಗಳ ಜನ ಸಮುದಾಯದ, ಅನಾಥ, ಕಿವುಡ, ವಿಕಲಚೇತನ, ಸಾವಿರಾರು ಮಕ್ಕಳ ಮಧ್ಯೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಸ್. ಕೆ. ಡಿ. ಆರ್. ಡಿ.ಪಿ, ಬಿಸಿ. ಟ್ರಸ್ಟ್,- 1,ಯೋಜನಾಧೀ ಕಾರಿ, ಮಂಜುನಾಥ್ ಗೌಡ ಎಂ. ಅವರು, ಸಮಾಜದಲ್ಲಿ ಎಲ್ಲರೂ ಸಮಾನವಾಗಿ ತಮ್ಮ ಜೀವನವನ್ನು ಸಾಗಿಸಬೇಕು ಎನ್ನುವ ಮಹಾದಾಶೆ ಇಟ್ಟುಕೊಂಡಿರುವ ಧರ್ಮಾಧಿಕಾರಿಗಳಾದ ಕಾವಂದರು, ತಮ್ಮ ದೂರ ದೃಷ್ಟಿಯ ಪ್ರತಿಫಲವಾಗಿ, ಮಹಿಳೆಯರ ಸಮಾನತೆ ಮತ್ತು ಸ್ವಾಭಿಮಾನಿ ಬದುಕಿಗೆ ದಾರೀದೀಪವಾಗಿದ್ದಾರೆ ಎಂದರು. ಕರ್ನಾಟಕವು ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಸಂಸ್ಥೆಯಿಂದ ಯೋಜನೆಗಳನ್ನು ಪ್ರಾರಂಭಿಸಿ ಆರ್ಥಿಕ ಸಮಾನತೆಗೆ ತುಂಬು ಸಹಕಾರ ನೀಡಿದ್ದಾರೆ ಎಂದರು.
ವ್ಯವಹಾರಿಕವಾಗಿ ಸಾಗುತ್ತಿದ್ದರೊ, ಧಾರ್ಮಿಕ ಆಚಾರ ವಿಚಾರಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ನಮ್ಮ ಇತಿಹಾಸ ಪರಂಪರೆಯಿಂದಲೂ ಸಾಗಿ ಬಂದಿರುವ ಪೂಜೆ ಪುನಸ್ಕಾರ, ಸಂಸ್ಕೃತಿ ಸಂಸ್ಕಾರ ಇವುಗಳೆಲ್ಲವನ್ನು ಅಳವಡಿಸಿಕೊಂಡು ಯೋಜನೆಯ ಪಾಲುದಾರರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಾ, ಧರ್ಮ ಜಾಗೃತಿ ಮೂಡಿಸುತ್ತಾ ಯೋಜನೆ ಅತ್ಯಂತ ಅದ್ದೂರಿಯಾಗಿ ಸಾಗುತ್ತಿರುವುದು ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿಯ ಮಹಿಮೆ ಪ್ರಮುಖ ಕಾರಣವಾಗಿದೆ ಎಂದರು. ಹುಟ್ಟು ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಬಸವರಾಜ ಹುಲ್ಲತ್ತಿ ಅವರು, ಅನೇಕ ಯೋಜನೆಗಳ ಮೂಲಕ ಜನ ಜಾಗೃತಿಯ ಜೊತೆಗೆ, ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ಧರ್ಮಾಧಿಕಾರಿಗಳು ಮುಂದಾಗಿದ್ದಾರೆ ಎಂದರು. ಕಾವಂದರ ಜನ್ಮದಿನೋತ್ಸವದ ನಿಮಿತ್ತ, ಸ್ನೇಹ ದೀಪ ಅಂದ ಅಂಗವಿಕಲರ ಸಂಸ್ಥೆ, ರೇಣುಕಾ ಎಲ್ಲಮ್ಮ ಸೇವಾ ಅಂದರ ಸಂಸ್ಥೆ, ಚೈತನ್ಯ ಕಿವುಡ ಮತ್ತು ಮೂಕ ಮಕ್ಕಳ ಸಂಸ್ಥೆ ಸ್ನೇಹ ದೀಪ ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳಲ್ಲಿ, ವಿವಿಧ ರೂಪದ ದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ, ಜಿಲ್ಲಾ ಅಧ್ಯಕ್ಷ ಬಸವರಾಜ ಹುಲ್ಲತ್ತಿ, ಮಾಜಿ ಅಧ್ಯಕ್ಷ ವೀರಭದ್ರ್ಪ ಮೋಟಗಿ ಎಚ್.ಆರ್. ಶಿವಕುಮಾರ್, ರೇಣುಕಾ ಶಿವಕುಮಾರ್, ಗೀರೀಶ್ ಬುಡ್ಡಣ್ಣನವರ್, ಸೇರಿದಂತೆ, ಮತ್ತಿತರ ಗಣ್ಯರು ಯೋಜನೆಯ ಸಿಬ್ಬಂದಿ, ಒಕ್ಕೂಟದ ಕಾರ್ಯಕರ್ತರು, ಬಿಸಿ ಟ್ರಸ್ಟ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 