ಸಮಾಜಸೇವೆ ಮಾಡಿ ಮಹಾವೀರ ನಿಲಜಗಿ ಅವರಿಗೆ ಡಾ. ವೀರೇಂದ್ರ ಹೆಗಡೆಯವರ ಕಿವಿಮಾತು
Dr. Veerendra Hegde's advice to Mahaveer Nilajagi for doing social service
ಹುಕ್ಕೇರಿ 06: ಸಮಾಜಸೇವೆ ಮಾಡಿ ಮಹಾವೀರ ನಿಲಜಗಿ ಅವರಿಗೆ ಡಾ. ವೀರೇಂದ್ರ ಹೆಗಡೆಯವರ ಕಿವಿಮಾತು ಸುದ್ಧಿ ಜನರು ನಮ್ಮನ್ನು ನಂಬಿ ಅಧಿಕಾರವನ್ನು ಕೊಟ್ಟಿರುತ್ತಾರೆ. ಅಧಿಕಾರ ಬಂದಾಗ ಜನ ಸೇವೆ ಮಾಡುವುದು ತುಂಬಾ ಮುಖ್ಯ. ಮಾಜಿ ಸಂಸದ ರಮೇಶ್ ಕತ್ತಿ ಅವರ ಮಾಜಿ ಸಚಿವ ಎ ಬಿ ಪಾಟೀಲರ, ಶಾಸಕ ನಿಖಿಲ್ ಕತ್ತಿ ಅವರ ನೇತೃತ್ವದಲ್ಲಿ ಜರುಗಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ್ ವಸಂತ ನಿಲಜಗಿ ಅವರಿಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಸನ್ಮಾನಿಸಿ ಮಾತನಾಡುತ್ತಾ ಜನ ಮೆಚ್ಚಿ ನಿಮಗೆ ಅಧಿಕಾರವನ್ನು ನೀಡಿರುತ್ತಾರೆ ಜನಸೇವೆಯನ್ನು ಮಾಡುತ್ತಾ ಜನಮನವನ್ನ ಗೆಲ್ಲಿರಿ ಎಂದು ಆಶೀರ್ವದಿಸಿ ಕಿವಿಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮಹಾವೀರ ನಿಲಜಗಿ ಮನೆತನ ಧರ್ಮಸ್ಥಳದ ಬಗ್ಗೆ ಅಪಾರವಾಗಿರುವ ಶ್ರದ್ದೆಯನ್ನು ಇಟ್ಟುಕೊಂಡಿದೆ. ಇವರಿಗೆ ಕ್ಷೆತ್ರದಿಂದ ಆಶೀರ್ವಾದ ಲಭಿಸಿರುವುದು ಅತ್ಯಂತ ಸ್ವಾಗತಾರ್ಹ ಕಾರ್ಯ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ತಂದೆಯ ಕಾಲದಿಂದಲೂ ನಾವು ಧಾರ್ಮಿಕವಾಗಿ ಬೆಳೆಯುತ್ತಾ ಬಂದಿದ್ದೇವೆ. ಇವತ್ತು ಸ್ಥಾನಮಾನ ಲಭಿಸಿರುವುದು ಜನರ ಆಶೀರ್ವಾದ, ಧರ್ಮಕ್ಷೇತ್ರಗಳ ಆಶೀರ್ವಾದ ಎಂದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 