ಡಾ. ಪ್ರಭುಗೌಡರ ಜನ್ಮದಿನ: ಅಭಿಮಾನಿಗಳಿಂದ ರಕ್ತದಾನ ಶಿಬಿರ, ಹಣ್ಣು ಹಂಪಲ ವಿತರಣೆ

ಡಾ. ಪ್ರಭುಗೌಡರ ಜನ್ಮದಿನ: ಅಭಿಮಾನಿಗಳಿಂದ ರಕ್ತದಾನ ಶಿಬಿರ, ಹಣ್ಣು ಹಂಪಲ ವಿತರಣೆ  Dr. Prabhugowda's birthday: Blood donation camp, fruit distribution by fans


ದೇವರಹಿಪ್ಪರಗಿ 02: ಮತಕ್ಷೇತ್ರದ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಅಂದರ ಬಾಳಿಗೆ ಬೆಳಕಾದ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರ 55ನೇ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ರಕ್ತದಾನ ಶಿಬಿರ ಏರಿ​‍್ಡಸುವ ಮೂಲಕ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರದಂದು ಡಾ. ಪ್ರಭುಗೌಡ ಅವರ ಅಭಿಮಾನಿ ಬಳಗದ ಮುಖಂಡರುಗಳಾದ ಮುರ್ತುಜಾ ತಾಂಬೋಳಿ, ಸಲೀಂ ವಠಾರ ಹಾಗೂ ಕಾಶಿನಾಥ ಕೋರಿ ಅವರು ಮಾತನಾಡಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರು,ಸರಳ ಸಜ್ಜನ ವ್ಯಕ್ತಿ, ದೀನ ದಲಿತರ ಆಶಾಕಿರಣ, ಯುವಕರ ಹೃದಯವಂತ ಡಾ.ಪ್ರಭುಗೌಡ ಅವರು ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದು ವೃತ್ತಿಯಲ್ಲಿ ವೈದ್ಯರಾದರು, ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿದ್ದಾರೆ. ರಾಜಕೀಯ ಪ್ರವೇಶ ಮಾಡುವುದಕ್ಕಿಂತ ಮುಂಚೆ ಸಾರ್ವಜನಿಕರ ಮದ್ಯ ಬೆರೆತು ಜನರ ಕಷ್ಟ ನಷ್ಟಗಳನ್ನು ಅರಿತು, ಅವರ ಅಭಿಮಾನಿ ಬಳಗದ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಪಡೆದು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ಸೇವೆಯಲ್ಲಿ ತೊಡಗಿರುವಂತಹ ಧೀಮಂತ ನಾಯಕರಾಗಿದ್ದಾರೆ.

ಯಾವುದೇ ರೀತಿಯ ಕಷ್ಟಕಾರ​‍್ಪಣಯಗಳನ್ನು ಹೇಳಿಕೊಂಡು ಬಂದರೆ ಸಾಕು ಅಂಥವರಿಗೆ ಕೂಡಲೇ ಸ್ಪಂದಿಸಿ ಅವರಿಗೆ ಸಹಾಯ, ಸಹಕಾರ ಮಾಡುವ ಸಮೃದ್ಧಿ ಮನಸುಳ್ಳಂತಹ ವ್ಯಕ್ತಿ ಅಂದರೆ ಅದು ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಇವತ್ತು ಅವರ 55ನೇ ಹುಟ್ಟು ಹಬ್ಬವನ್ನು ಅಭಿಮಾನಿ ಬಳಗದ ವತಿಯಿಂದ ಸರಳವಾಗಿ ಇಡೀ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ರಕ್ತದಾನ ಮಾಡುತಿದ್ದೇವೆ. ನಮ್ಮ ನಾಯಕರು ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಿರಿ, ಯಾವುದೇ ಕಾರಣಕ್ಕೂ ಅದ್ದೂರಿ ಆಡಂಬರದಿಂದ ಆಚರಣೆ ಮಾಡಕೂಡದು ಎಂದು ಕರೆಯನ್ನು ನೀಡಿದ್ದಾರೆ ಎಂದು ಹೇಳಿದರು.  

ಮುಖಂಡರುಗಳಾದ ಮುನೀರ್ ಬಿಜಾಪುರ, ಸಂಗಮೇಶ ದಂಡೋತಿ, ಭೀಮಶಂಕರ ಮಿಂಚನಾಳ, ಉದಯ ಅರವಿಂದ, ಕಮಲಸಾಬ, ಮುನೀರ್ ಹಸನ, ಸಲೀಂ ಕೋಲಾರ, ಬಾಯಸಾಬ ಹಳ್ಳಿ, ಯಾಕೂಬ್ ನದಾಫ್, ಗಂಗಾಧರ ಬಬಲೇಶ್ವರ, ಕಾಸಪ್ಪ ಯಂಬತ್ನಾಳ, ಕಾಸಪ್ಪ ಮಲ್ಹಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಅಭಿಮಾನಿ ಬಳಗ ಸದಸ್ಯರು ಹಾಗೂ ಮಹಿಳೆಯರು ಇದ್ದರು.