ವಚನ ಸಾಹಿತ್ಯಕ್ಕೆ ಡಾ. ಎಂ.ಎಂ.ಕಲಬುರ್ಗಿ ಅವರ ಕೊಡುಗೆ ಶ್ರೇಷ್ಠ

ವಚನ ಸಾಹಿತ್ಯಕ್ಕೆ  ಡಾ. ಎಂ.ಎಂ.ಕಲಬುರ್ಗಿ ಅವರ ಕೊಡುಗೆ ಶ್ರೇಷ್ಠ Dr. M.M. Kalaburgi's contribution to Vachana literature is great

                  ಹುಬ್ಬಳ್ಳಿ 29: ಹೊರಕೇರಿ ಮಾಸ್ತರಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರಸೇವಾಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಶ್ರೇಷ್ಠ ಸಂಶೋಧಕಡಾ. ಎಂ.ಎಂ.ಕಲಬುರ್ಗಿ ಅವರ 87ನೇ ಜನ್ಮದಿನದ ಅಂಗವಾಗಿ ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಟಾನದವರು ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡುವ ಮೂಲಕ ಗೌರವ ಅರೆ​‍್ಣ ಮಾಡಿ, ಶ್ರದ್ದಾ, ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.   

                ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರು. ಪಾಂಡಿತ್ಯ ಪರಂಪರೆಯ ಬಹುಶಿಸ್ತೀಯ ಅಧ್ಯಯನದ ಘನವಿದ್ವಾಂಸರು, ಚಿಂತನ ಶೀಲಬದ್ಧತೆಯ ಬರಹಗಾರರು. ಹಳಗನ್ನಡ, ಶಾಸನ, ಇತಿಹಾಸ, ಸಂಸ್ಕೃತಿ, ವಚನಸಾಹಿತ್ಯ, ಹಸ್ತಪ್ರತಿ, ಗ್ರಂಥ ಸಂಪಾದನಶಾಸ್ತ್ರಪರಿಣತರುಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಂಶೋಧನ  ಪ್ರಶಸ್ತಿ ಪುರಸ್ಕೃತರಾದ ಡಾಬಿ.ವಿ.ಶಿರೂರ,     ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಟಾನದ ಅಧ್ಯಕ್ಷ ಡಾ. ವೀರಣ್ಣರಾಜೂರ, ರಾಣಿಚನ್ನಮ್ಮ ಪರಿಸರಸೇವಾಸಮಿತಿಯಕಾರ್ಯದರ್ಶಿ, ಬಸವಪರಿಸರಸಂರಕ್ಷಣಾಸಮಿತಿಯಕಾರ್ಯದರ್ಶಿ, ಕರ್ನಾಟಕಜ್ಞಾನವಿಜ್ಞಾನಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಡಾ. ಸಣ್ಣ ವೀರಣ್ಣ ದೊಡ್ಡಮನಿ, ಡಾ. ಧನವಂತ ಹಾಜವಗೋಳ, ಮಹಾಂತಪ್ಪನಂದೂರ, ನಿಂಗಣ್ಣಕುಂಟಿ, ಬಿ.ಎಸ್‌.ಶಿರೋಳ, ಬಸವಂತಪ್ಪ ತೋಟದ, ಮುಂತಾದವರು ಇದ್ದರು.  

                    ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ ಅವರು ಡಾ. ಎಂ.ಎಂ.ಕಲಬುರ್ಗಿ ಅವರನ್ನು ಸ್ಮರಣೆ ಮಾಡುತ್ತಾ ಡಾ. ಎಂ.ಎಂ.ಕಲಬುರ್ಗಿ ಅಂತಹ ಸಂಶೋಧಕರು ಸಿಗುವುದು ಬಹಳ ಅಪರೂಪ. ಅವರುವಚನಗಳ ಸಂಗ್ರಹ ಹಾಗೂ ವಚನಗಳಿಗೆ ನಿಜವಾದ ಅರ್ಥ ತಿಳಿಸಿಕೊಡುವಲಿ ್ಲತುಂಬಾ ಕೆಲಸ ಮಾಡಿದ್ದಾರೆ. ಲಿಂಗಾಯತ ಧರ್ಮದ ಸ್ವತಂತ್ರ ಧರ್ಮಮಾನ್ಯತೆ ಹೊರಾಟಕೆ ್ಕ ಸ್ಪೂರ್ತಿಯಾಗಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ಅದರಲ್ಲೂ ವಚನ ಸಾಹಿತ್ಯಕ್ಕೆ ಡಾ. ಕಲಬುರ್ಗಿ ಅವರು ನೀಡಿದ ಕೊಡುಗೆ ಅಪಾರ. 120 ಕೃತಿಗಳನ್ನು, 750ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ನಾನೂ ಬದುಕಿರುವುದು ಕನ್ನಡ ಹಾಗೂ ಬಸವಣ್ಣನವರಿಗಾಗಿ ಎಂದು ಕಲಬುರ್ಗಿ ಅವರು ಯಾವಾಗಲೂ ಹೇಳುತ್ತಿದ್ದರು. ವಚನ ಸಾಹಿತ್ಯಕ್ಕೆ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ನಂತರ ಡಾ. ಎಂ.ಎಂ.ಕಲಬುರ್ಗಿ ಅವರಕೊಡುಗೆ ಶ್ರೇಷ್ಠ ಹಾಗೂ ಮರೆಯಲಾರದಂತಹದ್ದು ಎಂದರು.