ಜನ್ಮದಿನದ ಅಂಗವಾಗಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಡಾ.ಭಜಂತ್ರಿ ಸಹಾಯದನ
Dr. Bhajantri's support for the development of government schools as part of his birthday
ಜನ್ಮದಿನದ ಅಂಗವಾಗಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಡಾ.ಭಜಂತ್ರಿ ಸಹಾಯದನ
ಅಥಣಿ, 31 ; ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅಪರೂಪದ ವೈದ್ಯ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕಳೆದ ಅನೇಕ ವರ್ಷಗಳಿಂದ ತನ್ನ ಹಾಗೂ ಅವರ ಕುಟುಂಬ ಸದಸ್ಯರ ಜನ್ಮ ದಿನದ ಆಚರಣೆ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಆಯಾ ಶಾಲೆಗಳಲ್ಲಿ ಅವಶ್ಯಕತೆ ಅನುಸಾರ ದೇಣಿಗೆ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ.
ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ವೈದ್ಯರಾಗಿ ಅನೇಕ ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಸದಾಶಿವ ಭಜಂತ್ರಿ ಅತ್ಯುತ್ತಮ ವಾಗಿ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆ ಮಾಡುತ್ತಿರುವ ಈ ವೈದ್ಯರು ತಮ್ಮ, ತಮ್ಮ ಪತ್ನಿ ಹಾಗೂ ಮಗಳ ಜನ್ಮ ದಿನದಂದು ಯಾವುದೇ ಆಡಂಬರದ ಆಚರಣೆ ಇಲ್ಲದೆ ಹತ್ತಾರು ಸರಕಾರಿ ಶಾಲೆಗಳಿಗೆ, ಅನಾಥ ಆಶ್ರಮಗಳಿಗೆ, ಅಂಧ ಮಕ್ಕಳ ಶಾಲೆಗಳ ಅಭಿವೃದ್ಧಿಗೆ ಲಕ್ಷ ಲಕ್ಷ ಹಣ ನೀಡುವ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ.
ಹಣ ಯಾರ ಬಳಿ ಇಲ್ಲ ಅವರವರ ಅವಶ್ಯಕತೆಗೆ ಅನುಸಾರ ಹಣ ಇದ್ದೇ ಇರುತ್ತದೆ ಅಲ್ಲದೆ ಅನೇಕರು ಅವಶ್ಯಕತೆಗಿಂತ ಹೆಚ್ಚು ಸಂಪತ್ತು ಅಥವಾ ಹಣ ಇದ್ದರೂ ಕೂಡ ಸಮಾಜಕ್ಕೆ ಕೊಡುವ ಮನೋಭಾವ ಇರುವುದಿಲ್ಲ ಆದರೆ ಡಾ.ಸದಾಶಿವ ಭಜಂತ್ರಿಯಂತಹ ಗ್ರಾಮೀಣ ಭಾಗದ ವೈದ್ಯರು ತಮ್ಮ ಗಳಿಕೆಯ ಕೆಲ ಭಾಗವನ್ನು ಸರಕಾರಿ ಶಾಲೆಯ ಅಭಿವೃದ್ಧಿಗೆ ಕೊಡುತ್ತಿರುವ ಅವರ ಮನೋಭಾವ ಎಲ್ಲರೂ ಮೆಚ್ಚುವಂತಹದ್ದಾಗಿದೆ.
ಚಮಕೇರಿ ಸರಕಾರಿ ಶಾಲೆಗೆ ದೇಣಿಗೆ ನೀಡಿ ಮಾತನಾಡಿದ ಡಾ.ಸದಾಶಿವ ಭಜಂತ್ರಿ, ಇತ್ತೀಚಿಗೆ ಆಂಗ್ಲ ಮಾಧ್ಯಮದ ಜನಪ್ರಿಯತೆಯ ಪರಿಣಾಮ ಕನ್ನಡ ಶಾಲೆಗಳು ನಿರ್ಲಕ್ಷಕ್ಕೋಳಪಡುತ್ತಿವೆ ಹೀಗಾಗಿ ಕೆಲ ವರ್ಷಗಳ ಹಿಂದೆ ನಾನು ನನ್ನ ಹಾಗೂ ನನ್ನ ಕುಟುಂಬದ ಸದಸ್ಯರ ಜನ್ಮ ದಿನವನ್ನು ಸರಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಅನಕೂಲಕ್ಕಾಗಿ ಮತ್ತು ಸೌಲಭ್ಯ ಹೆಚ್ಚಿಸುವ ಉದ್ದೇಶದಿಂದ ನನ್ನ ಕೈಲಾದಷ್ಟು ಹಣ ನೀಡುತ್ತಿರುವೆ ಎಂದ ಅವರು ನಾನು ಸೌಲಭ್ಯ ಕೊಡುವುದರ ಇನ್ನೊಂದು ಉದ್ದೇಶ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು ಎನ್ನುವುದು ಕೂಡ ಆಗಿದೆ ಎಂದರು.
ನಾನು ಕಡು ಬಡತನದಲ್ಲಿ ಸರಕಾರಿ ಅನಾಥಾಶ್ರಮ ಶಾಲೆಯಲ್ಲಿ ಶಿಕ್ಷಣ ಕಲಿತಿರುವೆ ಹೀಗಾಗಿ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸ್ಥಿತಿ, ಗತಿಯ ಬಗ್ಗೆ ನನಗೆ ಅರಿವಿದ್ದು, ಮಕ್ಕಳಿಗೆ ಬಟ್ಟೆ, ಶಾಲೆಯಲ್ಲಿನ ಶೌಚಾಲಯ ವ್ಯವಸ್ಥೆ ಸರಿ ಪಡಿಸುವ ಜೊತೆಗೆ ಅಲ್ಲಿಯ ಅವಶ್ಯಕತೆಗೆ ಅನುಸಾರ ಹಣ ನೀಡುತ್ತೇನೆ ಎಂದ ಅವರು ನಾನು ಜನ್ಮ ದಿನ ಆಚರಿಸಿಕೊಳ್ಳುವುದಿಲ್ಲ ಜನ್ಮ ದಿನದ ನೆಪದಲ್ಲಿ ಮಕ್ಕಳ ಸೇವೆಗೆ ಮುಂದಾಗಿರುವೆ ಎಂದರು.
ಚಮಕೇರಿ ಗ್ರಾಮದ ಸರಕಾರಿ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಇರುವುದನ್ನು ಗಮನಿಸಿದ ನಾನು ಕಳೆದ ವರ್ಷ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಪ್ರತಿ ತಿಂಗಳು ಹಣ ನೀಡುತ್ತೇನೆ ತಾವು ಚಮಕೇರಿಯ ಸರಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ನಾನು ಮನವಿ ಮಾಡಿಕೊಂಡ ಪರಿಣಾಮ ಅರವಿಂದ ಮೂರನಾಳ ಮೂರು ತಿಂಗಳಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ಚಮಕೇರಿ ಗ್ರಾಮದ ಧುರೀಣ ಟಿಳಕ ಸೂರ್ಯವಂಶಿ ಮಾತನಾಡಿ, ಸಾಕಷ್ಟು ಜನ ತಮ್ಮ ತಮ್ಮ ಜನ್ಮ ದಿನಗಳಂದು ಆಡಂಬರದ ಆಚರಣೆಗಾಗಿ ಲಕ್ಷಾಂತರ ಹಣ ವ್ಯಯಿಸುತ್ತಾರೆ ಇಂತವರ ಮಧ್ಯ ಡಾ.ಸದಾಶಿವ ಭಜಂತ್ರಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಜನ್ಮ ದಿನದ ನೆಪದಲ್ಲಿ ಸರಕಾರಿ ಶಾಲೆಗಳ ಕುಂದು ಕೊರತೆ ನೀಗಿಸಲು ಮತ್ತು ಮಕ್ಕಳಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಹಣ ನೀಡುತ್ತಿರುವ ಕಾರ್ಯ ನಮಗೆಲ್ಲ ಮಾದರಿ ಎಂದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಲಕ್ಷ್ಮಣ ಭಜಂತ್ರಿ, ಧುರೀಣರಾದ ಮಾರುತಿ ಭಾನುಶೆ, ಸಂಜಯ ಜಾಧವ, ಸದು ಭಜಂತ್ರಿ, ಮುಖ್ಯ ಶಿಕ್ಷಕ ಸಿ.ಎಚ್.ಮಾದರ, ಶಿಕ್ಷಕರಾದ ಎ.ಆರ್.ಬಡಕಂಬಿ, ಟಿ.ಎನ್.ಐಹೊಳೆ, ಎ.ವಿ.ಮೂರನಾಳ, ಎ.ಪಿ.ಮಡಿವಾಳ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 