ಸುಧೀರ್ಘ ತುಂಬು ಜೀವನ ಸವೆಸಿದ ಡಾ. ಬೆಂಗಳೂರು ಅವರ ನಿಧನ ರೋಟರಿ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ : ಅಧ್ಯಕ್ಷ ಬಿ.ಜಿ. ಹಿರೇಮಠ
Dr. Bangalore's death, who lived a long and fulfilling life, is an irreparable loss to the Rotary o
ಸುಧೀರ್ಘ ತುಂಬು ಜೀವನ ಸವೆಸಿದ ಡಾ. ಬೆಂಗಳೂರು ಅವರ ನಿಧನ ರೋಟರಿ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ : ಅಧ್ಯಕ್ಷ ಬಿ.ಜಿ. ಹಿರೇಮಠ
ರಾಣೇಬೆನ್ನೂರು 31: ನಗರದ ಹಿರಿಯ ವೈದ್ಯರಾಗಿ, ಬಡವರ ದೀನ ದಲಿತರ ಜನಸಾಮಾನ್ಯರ, ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸುಧೀರ್ಘ ತುಂಬು ಜೀವನ ಸವೆಸಿದ ಡಾ. ಬೆಂಗಳೂರು ಅವರ ನಿಧನ ರೋಟರಿ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ರೋಟರಿ ಸೇವಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಹಿರೇಮಠ ಹೇಳಿದರು.
ಅವರು ಇಂದು ರೋಟರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ, ಡಾ, ಎಸ್.ಸಿ. ಬೆಂಗಳೂರು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಟಾಗೋರ್ ಶಿಕ್ಷಣ ಸಂಸ್ಥೆಯ ಛೇರ್ಮನ್ ಡಾ,ಬಸವರಾಜ ಕೇಲಗಾರ ಅವರು ರೋಟರಿ ಸಂಸ್ಥೆಯ ಸ್ಥಾಪನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು, ಅಪಾರ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ಅತ್ಯುತ್ತಮ ಸಲಹೆ, ಸೂಚನೆ ನೀಡಿ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡ ಅನೇಕ ಗಣ್ಯರು ಮೃತರ ಸೇವಾ ಕಾರ್ಯಗಳ ಕುರಿತು ಸಾಧ್ಯಂತವಾಗಿ ಮಾತನಾಡಿ, ತಮ್ಮ ಭಾವನಾತ್ಮಕ ಸಂತಾಪ ಸೂಚಿಸಿದರು. ಸಭೆಯಲ್ಲಿ ಕಾರ್ಯದರ್ಶಿ
ಡಾಽಽನಾರಾಯಣ ಪವಾರ, ಮಾಜಿ ಕಾರ್ಯದರ್ಶಿಗಳಾದ ಕೆ. ವಿ. ಶ್ರೀನಿವಾಸ್, ಕುಮಾರ್ ಮುಷ್ಟಿ, ವೀರೇಶ್ ಹನಗೋಡಿಮಠ ,ವ್ಹಿ. ಪಿ. ಲಿಂಗನಗೌಡರ, ಗದಿಗೆಪ್ಪಗೌಡ ಹೊಟ್ಟಿಗೌಡರ, ಶಂಕರಗೌಡ ಮಾಳಗಿ, ಈಶ್ವರ್ ಪಾಟೀಲ್, ವ್ಹಿ. ಪಿ. ಪೊಲೀಸಗೌಡ್ರ, ಎಂ. ಆರ್. ಪಾಟೀಲ, ಉಮೇಶ್ ಪಟ್ಟಣಶೆಟ್ಟಿ, ಉಮೇಶ್ ಹೊನ್ನಾಳಿ, ಜಿ. ಎಸ್. ರಾಮಚಂದ್ರ ಜಗದೀಶ್ ಕಲ್ಯಾಣಿ, ಉಮೇಶ ಗುಂಡಗಟ್ಟಿ, ಶಿವಯೋಗಿ ಅಂಗಡಿ, ಎಫ್.ಬಿ. ಹೊನ್ನಳ್ಳಿ ಅರವಿಂದ್ ಜೈನ್, ಸೇರಿದಂತೆ ಈ ಶಿಕ್ಷಣ ಸಂಸ್ಥೆಯ ಸದಸ್ಯರು, ಇನ್ನಿತರ ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಪ್ರಾಧ್ಯಾಪಕರು, ಶಿಕ್ಷಕ ಶಿಕ್ಷಕೀಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ನಿಮಿಷಗಳ ಕಾಲ ಮೌನಾಚರಿಸಿ, ಆತ್ಮಕ್ಕೆ ಶಾಂತಿ ಕೋರಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 