ವಾಷಿಂಗ್ಟನ್, ಏ.4-ಭಾರತದ ತೆರಿಗೆ ಪದ್ಧತಿ ಬಗ್ಗೆ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ನವದೆಹಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಸರಕುಗಳಿಗೆ ಅಧಿಕ ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು. ಇದು ನಮಗೆ ತೀವ್ರ ಬೇಸರ ಉಂಟು ಮಾಡಿದೆ. ನಮ್ಮಲ್ಲಿ ತಯಾರಾಗುವ ಹರ್ಲಿ ಡೇವಿಡ್ಸನ್ ಬೈಕ್ಗಳು ಸೇರಿದಂತೆ ಪ್ರಮುಖ ವಸ್ತುಗಳ ಮೇಲೆ ಅತ್ಯಧಿಕ ತೆರಿಗೆಯನ್ನು ಭಾರತ ವಿಧಿಸುತ್ತಿದೆ. ಇದು ಸಾಧುವಲ್ಲ ಎಂದು ಟ್ರಂಪ್ ಮತ್ತೊಮ್ಮೆ ಗರಂ ಆಗಿದ್ದಾರೆ.
ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು, ಈ ಹಿಂದೆಯೂ ನಾನು ಭಾರತದ ತೆರಿಗೆ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ ಸಕರ್ಾರ ಎಚ್ಚೆತ್ತುಕೊಂಡಿಲ್ಲ. ಅಧಿಕ ತೆರಿಗೆ ವಿಧಿಸುವ ಪರಿಪಾಠ ಮುಂದುವರೆದಿದೆ. ಇದು ಹೀಗೇ ಮುಂದುವರೆದರೆ ಭಾರತದ ಸರಕುಗಳ ಮೇಲೆಯೂ ನಾವು ಅಧಿಕ ತೆರಿಗೆ ವಿಧಿಸದೆ ಅನ್ಯ ಮಾರ್ಗವಿಲ್ಲ ಎಂದು ಟ್ರಂಪ್ ಮುನ್ಸೂಚನೆ ನೀಡಿದ್ದಾರೆ.
ಚೀನಾದೊಂದಿಗೆ ಈಗಾಗಲೇ ಆಥರ್ಿಕ ಸಮರಕ್ಕೆ ಇಳಿದಿರುವ ಅಮೆರಿಕ, ಭಾರತದೊಂದಿಗೂ ಇದೇ ವಿಷಯದಲ್ಲಿ ಸಂಘರ್ಷಕ್ಕಿಳಿಯುವ ಸಾಧ್ಯತೆಗಳು ಗೋಚರಿಸುತ್ತಿವೆ.