ಲೋಕದರ್ಶನ ವರದಿ
ಚಿಕ್ಕೋಡಿ 26: ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಮಕ್ಕಳ ಸಮಸ್ಯೆಗಳನ್ನು ಗುತರ್ಿಸಿ ಅದಕ್ಕೆ ಸರಿಯಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದೆ ಮಕ್ಕಳ ಗ್ರಾಮ ಸಭೆ ಉದ್ದೇಶವಾಗಿದೆ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರದೀಪಕುಮಾರ ಎ.ಎಸ್ ಹೇಳಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಬೆಳಗಾವಿ, ಹಾಗೂ ಮೈ ಚಾಯ್ಸ್ ಫೌಂಡೇಶನ್ ಹೈದರಾಬಾದ್, ಸುರಕ್ಷಿತ ಗ್ರಾಮ ಕಾರ್ಯಕ್ರಮ ಮತ್ತು ಗ್ರಾಮ ಪಂಚಾಯತ ಕರೋಶಿ ಇವರ ಸಂಯುಕ್ತ ಆಶ್ರಯದಲ್ಲಿ ಕರೋಶಿ ಗ್ರಾಮದ ಸಿ. ಎಸ್. ಎಸ್. ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಮಕ್ಕಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ಗ್ರಾಮಸಭೆ ಕೇವಲ ರಸ್ತೆ, ಬೀದಿ ದೀಪ, ನೀರು ಇವುಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿರದೆ ಮಕ್ಕಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಈ ಮಕ್ಕಳ ಗ್ರಾಮ ಸಭೆಯಲ್ಲಿ ಆಗಬೇಕು ಎಂದರು.
ಪಂಚಾಯತಿಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಅನೇಕ ಯೋಜನೆಗಳು ಇರುತ್ತವೆ ಹಾಗಾಗಿ ಮಕ್ಕಳ ಸಲಹಾ ಪಟ್ಟಿಗೆಗಳನ್ನು ಅಳವಡಿಸಿ ಮಕ್ಕಳು ನೀಡಿದ ಸಲಹೆಗಳಿಗೆ ಸೂಕ್ತ ತೀಮರ್ಾಣಗಳನ್ನು ತೆಗೆದುಕೊಂಡಾಗ ಮಾತ್ರ ಈ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗಿ ಆಯೋಜಿಸಲು ಸಾಧ್ಯವೆಂದರು. ಶಾಲೆಯಲ್ಲಿ ಶುದ್ಧ ಕುಡಿಯುವ ಹಾಘೂ ಅಡುಗೆ ಮಾಡಲು ಬಳಸಲು ನೀರಿನ ವ್ಯವಸ್ಥೆ, ಮೈದಾನ ಅಭಿವೃದ್ಧಿಗಾಗಿ ಗಿಡಗಳ ಸಂರಕ್ಷಣೆ, ಶೌಚಾಲಯ ನಿಮರ್ಿಸಿಕೊಡುವುದರ ಜೊತೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ ಕೊಡಬೇಕೆಂದು ವಿದ್ಯಾಥರ್ಿಗಳು ಮನವಿ ಮಾಡಿಕೊಂಡರು.
ಮಕ್ಕಳ ಪ್ರತಿಯೊಂದು ಸಮಸ್ಯೆ ಆಲಿಸಿದ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಂಜಯ ಕಾಂಬಳೆ ಮಾತನಾಡಿ ಮಕ್ಕಳು ಹೇಳಿರುವ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕ ಎಂ ಎಂ ಗಡಗಲಿ ಮಾತನಾಡಿ ಭಾರತದಲ್ಲಿ ಕಳ್ಳ ಸಾಗಾಣಿಕೆಗೆ ಒಳಗಾಗುವ ಮಕ್ಕಳ ಸರಾಸರಿ ವಯಸ್ಸು 12 ವರ್ಷ, ಬಾಲ್ಯ ವಿವಾಹಕ್ಕೊಳಗಾದ ಅಪ್ರಾಪ್ತ ವಯಸ್ಕರು, ಬಾಲಕಾಮರ್ಿಕ, ಕಾನೂನಿನ ಸಂಘರ್ಷಕ್ಕೊಳಪಟ್ಟ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವಂತಹ ಕಾರ್ಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಕ ಎಸ್. ಎಚ್. ಮೇಲ್ದಾಪೂರ ಗ್ರಾಮ ಪಂಚಾಯತ ಸದಸ್ಯರಾದ ವಿಜಯಕುಮಾರ ಕೊಟೆವಾಲೆ, ಗುರಪ್ಪ ನಿವರ್ಾಣಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಎಸ್. ಎಸ್. ಮಾನೆ, ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರ ಸಂತೋಷ ಬಡಿಗೇರ ಉಪಸ್ಥಿತರಿದ್ದರು. ಗ್ರಾಮದ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯಕರು ವಿದ್ಯಾಥರ್ಿ ವಿದ್ಯಾಥರ್ಿನಿಯರು ಭಾಗವಹಿಸಿದ್ದರು. ಎಸ್. ಎಂ ಬಾಳಿಕಾಯಿ ನಿರೂಪಿಸಿದರು. ಎ. ಎಸ್. ನಾಯಿಂಗ್ಲಜ್ ವಂದಿಸಿದರು.